ಕರಾಟೆಯಿಂದ ಸ್ವಯಂ ರಕ್ಷಣೆ ಜತೆಗೆ ದೈಹಿಕ, ಮಾನಸಿಕ ಆರೋಗ್ಯ ಸದೃಢಗೊಳ್ಳುತ್ತೆ.ಮಕ್ಕಳು ವಿದ್ಯಾರ್ಥಿ ದಿಸೆಯಿಂದಲೇ ಕರಾಟೆಯನ್ನು ಕಲಿಯಲು ಮುಂದಾಗಬೇಕು ಎಂದು ಪರಮಾನಂದವಾಡಿಯ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದ ಡಾ! ಅಭಿನವ ಬ್ರಹ್ಮಾನಂದ ಸ್ವಾಮೀಜಿಯವರು ಹೇಳಿದರು.


ಅವರು ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಅಮೃತ ಗಾರ್ಡನ ಹೋಟೆಲ್ ನ ಸಭಾಭವನದಲ್ಲಿ ಜಪಾನ ಯಮಾಬುಕಿ ಶಿತೋರಿಯೋ ಕರಾಟೆ ಡೂ ಅಸೋಸಿಯೇಷನ್ ಆಪ್ ಕರ್ನಾಟಕ,ಜಿಲ್ಲಾ ರಾಣಿ ಚನ್ನಮ್ಮಾ ಸೆಲ್ಫ್ ಡಿಫೆನ್ಸ ಮತ್ತು ಕರಾಟೆ ಸ್ಪೋರ್ಟ್ಸ್ ಅಸೋಸಿಯೇಷನ್ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಕರಾಟೆ ವಿದ್ಯಾರ್ಥಿಗಳಿಗಾಗಿ ಬ್ಲ್ಯಾಕ್ ಬ್ಲೆಟ್ ಪರೀಕ್ಷೆ ಹಾಗೂ ಪ್ರಮಾಣ ಪತ್ರ ವಿತರಣೆಯ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ವಹಿಸಿ ಮಾತನಾಡಿದರು.ಕರಾಟೆಯಿಂದ ಸ್ವಯಂ ರಕ್ಷಣೆ ಜತೆಗೆ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಈ ಕ್ರೀಡೆಯಿಂದ ಏಕಾಗ್ರತೆ ಹೆಚ್ಚುತ್ತದೆ. ಮಕ್ಕಳು ವಿದ್ಯಾರ್ಥಿ ದಿಸೆಯಿಂದಲೇ ಕರಾಟೆಯನ್ನು ಕಲಿಯಲು ಮುಂದಾಗಬೇಕು ಹಾಗೂ ಕರಾಟೆಯ ಶಿಕ್ಷಕರಾದ ರಾಜು ಪಾಟೀಲಯವರು ಸಾಕಷ್ಟು ವಿದ್ಯಾರ್ಥಿಗಳಿಗೆ ಕರಾಟೆಯನ್ನು ಕಲಿಸುವ ಮೂಲಕ ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ ಎಂದರು.

ಬಳಿಕ ಉತ್ತರ ಪ್ರದೇಶದ ಮನೋಜಕುಮಾರ ರಜಪೂತ ಮಾತನಾಡಿ ಬ್ಲ್ಯಾಕ್ ಬ್ಲೆಟ್ ಪರೀಕ್ಷೆಯು ಕರಾಟೆಯ ಪ್ರಾಥಮಿಕ ಹಂತವಾಗಿದೆ.ಕರಾಟೆಯಲ್ಲಿ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಕಲಿಕೆ ಅವಶ್ಯಕವಾಗಿದೆ ಎಂದರು.

ಬಳಿಕ ವಿದ್ಯಾರ್ಥಿ ಪೊಷಕರಾದ ಕಲಗೌಡ ಎಂಬುವರು ಮಾತನಾಡಿ ನಾವು ನಮ್ಮ ಎರಡು ಮಕ್ಕಳನ್ನು ಕರಾಟೆ ತರಬೇತಿ ನೀಡುತ್ತಿದೇವೆ.ತರಬೇತುದಾರಾದ ರಾಜು ಪಾಟೀಲಯವರು ಅತ್ಯಂತ ಒಳ್ಳೆಯ ರೀತಿಯಾಗಿ ಕರಾಟೆ ತರಬೇತಿಯನ್ನು ನೀಡುತ್ತಿದ್ದಾರೆ ಎಂದರು.
ಶಿಕ್ಷಕರಾದ ಸಾಗರ ಬಿಸಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.ರಾಜು ಪಾಟೀಲಯವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಅನೀಲ ಭಜಂತ್ರಿ,ಶಿವಾನಂದ ಪಾಟೀಲ,ಕಿರಣ ಭಜಂತ್ರಿ,ರಾಜು ವ್ಯಾಂಟೆ,ಮೋಹನ ಜಾಧವ,ದಗಡು ಕಾನಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
