ನನಗೆ ಸಚಿವ ಸ್ಥಾನ ಸಿಕ್ಕರೂ ಒಂದೇ, ಸಿಗದಿದ್ದರೂ ಒಂದೇ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನದ ಬಗ್ಗೆ ಮಾತನಾಡುತ್ತಾ, “ನನಗೆ ಸಚಿವ ಸ್ಥಾನ ಸಿಕ್ಕರೂ ಒಂದೇ, ಸಿಗದಿದ್ದರೂ ಒಂದೇ,” ಎಂದು ತಟಸ್ಥ ಧೋರಣೆ ವ್ಯಕ್ತಪಡಿಸಿದರು.
ಇನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಇಲ್ಲ ಎಂಬ ಹೆಚ್.ಡಿ. ದೇವೇಗೌಡರ ಹೇಳಿಕೆಯನ್ನು ರಾಜಣ್ಣ ತೀವ್ರವಾಗಿ ಟೀಕಿಸಿದರು. ಇವರು ಎಂಪಿ ಮತ್ತು ಎಂಎಲ್ಎ ಚುನಾವಣೆಗಳಿಗೆ ಮಾತ್ರ ಮೈತ್ರಿ ಎನ್ನುತ್ತಾರೆ. ಮೊದಲು ಫೆವಿಕಾಲ್ ಹಾಕಿ ಅಂಟಿಸಿಕೊಂಡಿದ್ದೇವೆ ಎಂದು ಹೇಳುತ್ತಿದ್ದರು, ಈಗ ಸ್ಥಳೀಯ ಸಂಸ್ಥೆಗಳಲ್ಲಿ ಹೊಂದಾಣಿಕೆ ಇಲ್ಲ ಎನ್ನುತ್ತಿದ್ದಾರೆ. ಇದು ಕೇವಲ ಅವರ ಸ್ವಾರ್ಥಕ್ಕೆ ಅನುಕೂಲವಾಗುವಂತೆ ಮಾಡಿಕೊಂಡಿರುವ ನಿರ್ಧಾರ,” ಎಂದು ಕುಟುಕಿದರು.
