ಅಫ್ಝಲ್’ಖಾನ್ ವಧೆಗೆ ಶಿವಾಜೀ ಮಹಾರಾಜರಿಗೆ ಪ್ಲಾನ್ ಹೇಳಿ ಕೊಟ್ಟಿದ್ದು ಮುಸ್ಲಿಂ ಸೇವಕ ಎಂದು ಸಚಿವ ಸಂತೋಷ್ ಲಾಡ್ ಭಾಷಣ ಮಾಡಿ ಶ್ರೀ ಶಿವಪ್ರತಿಷ್ಠಾನ ಹಿಂದೂಸ್ಥಾನನನ ವಿರೋಧಕ್ಕೆ ಗುರಿಯಾದ ಘಟನೆ ಅಥಣಿಯಲ್ಲಿ ನಡೆದಿದೆ.

ಇಂದು ಅಥಣಿಯಲ್ಲಿ ಛತ್ರಪತಿ ಶಿವಾಜೀ ಮಹಾರಾಜರ ಅಶ್ವಾರೂಢ ಮೂರ್ತಿಯ ಭವ್ಯ ಅನಾವರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕಾರ್ಮಿಕ ಸಚಿವರು ಛತ್ರಪತಿ ಶಿವಾಜೀ ಮಹಾರಾಜರ ಆಸ್ಥಾನದಲ್ಲಿ ಮುಸ್ಲಿಂಮರು ಕೂಡ ಸೇವಕರು ಇದ್ದರು. ಅವರಲ್ಲಿರುವ ಒಬ್ಬರು ಅಫ್ಝಲ್’ಖಾನ್ ವಧೆಗೆ ಶಿವಾಜೀ ಮಹಾರಾಜರಿಗೆ ವಾಘನಖ ಅಂದರೇ, ಸಿಂಹದುಗುರು ನೀಡಿದರು. ಶಿವಾಜೀ ಮಹಾರಾಜರ ವಿರುದ್ಧ ನಿಲ್ಲಲು ಸಹಾಯ ಮಾಡಿದವರು ಕುಲಕರ್ಣಿ ಎಂದರು. ಶಿವಾಜೀ ಮಹಾರಾಜರು ಮುಸ್ಲಿಂ ವಿರೋಧಿಗಳಲ್ಲ ಅವರು ಮೊಘಲರ ವಿರೋಧಿಗಳಾಗಿದ್ದರು ಎಂದರು.
ಇನ್ನು ಸಚಿವ ಸಂತೋಶ ಲಾಡ್ ಅವರ ಈ ಹೇಳಿಕೆ ಶಿವಪ್ರತಿಷ್ಠಾನ ಹಿಂದೂಸ್ಥಾನನ ಕಾರ್ಯಕರ್ತರ ಆಕ್ರೋಶಕ್ಕೆ ಗುರಿಯಾಗಿದೆ. ಸಚಿವರು ಇತಿಹಾಸವನ್ನು ತಿರುಚಿ ತಮ್ಮ ರಾಜಕೀಯ ಹಿತದೃಷ್ಟಿಯಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಚಿವರು ತಮ್ಮ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸಬೇಕೆಂದರು.
ಶ್ರೀ ಶಿವಪ್ರತಿಷ್ಠಾನ ಹಿಂದೂಸ್ಥಾನನ ಕಾರ್ಯಕರ್ತರು ವೇದಿಕೆ ಬಳಿ ಆಗಮಿಸಿ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಸಚಿವ ಲಾಡ್ ತಮ್ಮ ಭಾಷಣವನ್ನು ನಿಲ್ಲಿಸಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರ ಕಾರಿನಲ್ಲೇ ತೆರಳಿದ ಘಟನೆ ನಡೆಯಿತು.
