ಮನರೇಗಾ ಯೋಜನೆಯಲ್ಲಿ ಗಾಂಧಿಜೀ ಎಂಬ ಮೇರು ನಾಯಕನ ಹೆಸರು ಬದಲಾಯಿಸಿ ಸಣ್ಣತನ ಮಾಡಿದ್ದು, ಶೋಭೆ ತರುವುದಿಲ್ಲ. ಈ ಕ್ಷುಲ್ಲಕ ಕೆಲಸ ಮಾಡಿದ್ದಕ್ಕೇ ಪ್ರಧಾನಿ ಮೋದಿ ಅವರು ದೇಶದ ಕ್ಷಮೆ ಕೇಳಬೇಕಾಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.

ಇಂದು ಬೆಂಗಳೂರಿನಲ್ಲಿ ನರೇಗಾ ಹೆಸರು ಬದಲಾವಣೆಗೆ ಸಂಬಂಧಿಸಿದಂತೆ, ಜಗತ್ತಿನಲ್ಲೇ ಗಾಂಧಿಜೀಯಂತಹ ನಾಯಕರಿಲ್ಲ. ಅವರು ನೈಜ ಶಾಂತಿಯ ಬಗ್ಗೆ ಬೋದನೆ ಮಾಡಿದವರು. ಇಂದು ಶಾಂತಿ ಮತ್ತು ಭಾತೃತ್ವದ ಸಂದೇಶ ದೊರಕಿದ್ದರೇ ಅದು ಗಾಂಧಿಜೀಯವರಿಂದ ಮಾತ್ರ. ಇಂತಹ ಮೇರು ನಾಯಕನ ಹೆಸರು ಬದಲಾಯಿಸಿ ಸಣ್ಣತನ ಮಾಡಿದ್ದು, ಶೋಭೆ ತರುವುದಿಲ್ಲ. ಈ ಕ್ಷುಲ್ಲಕ ಕೆಲಸ ಮಾಡಿದ್ದಕ್ಕೇ ಪ್ರಧಾನಿ ಮೋದಿ ಅವರು ದೇಶದ ಕ್ಷಮೆ ಕೇಳಬೇಕಾಗುತ್ತದೆ ಎಂದರು.
