Bagalkot

SBI ಬ್ಯಾಂಕ್ ‌ಕಳ್ಳತನ ಮಾಡಿದ್ದ ಅಂತಾರಾಜ್ಯ  ಕಳ್ಳರ ಬಂಧನ.

Share

ಅವರು ಕಳ್ಳತನ ಮಾಡಿದ‌ ಬಳಿಕ ಒಂದೇ ಒಂದು ಕುರುಹು ಸಿಗದೆ ಎಸ್ಕೇಪ್ ಆಗುವ ಅಂತಾರಾಜ್ಯ ಚಾಲಾಕಿ‌ ಕಳ್ಳರು.ಸಿಸಿ‌ಕ್ಯಾಮೆರಾ,ಪಿಂಗರ್ ಪ್ರಿಂಟ್, ಮೊಬೈಲ್‌ ಟ್ರ್ಯಾಪ್ ಗೂ ಕೂಡ ಸಿಗದ ಪ್ರೊಫೆಷನಲ್ ‌ಕಳ್ಳರು.ಎಸ್ ಬಿ ಐ ಬ್ಯಾಂಕ್ ಗೆ ಕನ್ನ‌ ಹಾಕಿ ಬರೊಬ್ಬರಿ ೬೨ ಲಕ್ಷ ಮೌಲ್ಯದ ‌ಚಿನ್ನಾಭರಣ ಹಾಗೂ ಹಣ ದೋಚಿ‌ ಎಸ್ಕೇಪ್‌ ಆಗಿದ್ದರು.ಅವರನ್ನ ಹಿಡಿಯೋದೆ‌ ಪೊಲೀಸರಿಗೆ‌‌ ಸವಾಲಾಗಿತ್ತು.ಆದರೆ ಅಂತಹ ‌ಕಳ್ಳರನ್ನು‌ ಖಾಕಿ ಪಡೆದ ಕೊನೆಗೂ ಹೆಡೆಮುರಿ‌ ಕಟ್ಟಿದೆ.

ಮುಖಕ್ಕೆ ಮಾಸ್ಕ್ ಮಂಕಿ ಕ್ಯಾಪ್ ಹಾಕಿ ಬ್ಯಾಂಕ್ ಒಳ ನುಗ್ಗಿರುವ ಕಳ್ಳರು.ಚೂಡಿ ಮಾದರಿ ವೇಷ ತೊಟ್ಟು ಬ್ಯಾಂಕ್ ನಲ್ಲಿ ತಡಕಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ.ಕಳ್ಳರನ್ನು ಕೊನೆಗೂ ಸೆರೆ ಹಿಡಿದ‌ ಪೊಲೀಸರು.ಕಳ್ಳರಿಂದ‌ ಚಿನ್ನಾಭರಣ, ಹಣ,ಕಂಟ್ರಿ ಪಿಸ್ತೂಲ್, ‌ಎರಡು ಜೀವಂತ‌ ಗುಂಡು,ಗ್ಯಾಸ್ ಕಟರ್,ಕಾರು ಜಪ್ತಿ.ಇವು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ  ಕಾಕನೂರು ಎಸ್ ಬಿ ಐ ಬ್ಯಾಂಕ್ ಕಳ್ಳತನಕ್ಕೆ ಸಂಬಂಧಿಸಿದ ದೃಶ್ಯಗಳು.ಸೆಪ್ಟಂಬರ್ ೨  ೨೦೨೫ ರಂದು ರಾತ್ರಿ  ಕಾಕನೂರು ಎಸ್ ಬಿ ಐ ಬ್ಯಾಂಕ್ ಗೆ  ಅಂತಾರಾಜ್ಯ ಕಳ್ಳರ ಗ್ಯಾಂಗ್ ಕನ್ನ ಹಾಕಿತ್ತು.ಯುಪಿ ಹಾಗೂ ಮಹಾರಾಷ್ಟ್ರ ಮೂಲದ ಆರು ಜನರ ಗ್ಯಾಂಗ್ ಬ್ಯಾಂಕ್ ಲಾಕರ್ ಓಪನ್ ಮಾಡಿ ಚಿನ್ನಾಭರಣ ,ಹಣ ದೋಚಿ ಪರಾರಿಯಾಗಿತ್ತು.ಈ ಬಗ್ಗೆ ಬಾದಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಕಳ್ಳರು ಸೆಪ್ಟೆಂಬರ್  ೨ ರ ಆರು ತಿಂಳಳ ಮುಂಚೆಯೇ ಬ್ಯಾಂಕ್ ಗೆ ಭೇಟಿ ನೀಡಿ ಸಿಸಿ‌ ಕ್ಯಾಮೆರಾ ,ಒಳನುಗ್ಗಲು ಎಂಟ್ರಿ ಹೇಗೆ? ಯಾವ ದಾರಿಯಿಂದ ಬ್ಯಾಂಕ್‌ ಗೆ ನುಗ್ಗಬೇಕು ಎಂದೆಲ್ಲ ಪ್ಲಾನ್ ಮಾಡಿದ್ದರು .ಕೊನೆಗೆ ಸೆಪ್ಟೆಂಬರ್ ೨ ೨೦೨೫ ರ ರಾತ್ರಿ ಬ್ಯಾಂಕ್ ಹಿಂಭಾಗದ ಶೆಟರ್ಸ್ ಮುರಿದು ಆರು ಜನರ ಗ್ಯಾಂಗ್ ಒಳ ನುಗ್ಗಿತ್ತು.ಬ್ಯಾಂಕ್ ‌ನ ಸಿಸಿ ಕ್ಯಾಮೆರಾಗಳಿಗೆ ಕಪ್ಪು ಬಣ್ಣದ ಸ್ಪ್ರೆ ಹೊಡೆದು ಒಳ ನುಗ್ಗಿದ ಕಳ್ಳರು
ಬ್ಯಾಂಕ್ ನ ಒಂದು ಲಾಕರನ್ನು ಗ್ಯಾಸ್ ಕಟರ್ ನಿಂದ  ಒಪನ್ ಮಾಡಿ ಚಿನ್ನಾಭರಣ ,ಹಣ ದೋಚಿ ಎಸ್ಕೇಪ್ ಆಗಿದ್ದರು.ಈ ಬಗ್ಗೆ ಬಾದಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಯಾವುದೇ ಸಾಕ್ಷಿ ಸಿಗದ ರೀತಿ ಕಳ್ಳತನ ಮಾಡಿದ್ದ ಕಳ್ಳರನ್ನು ಹಿಡಿಯೋದೆ ಸವಾಲಾಗಿತ್ತು.ಆದರೂ ಬಾದಾಮಿ ಪೊಲೀಸರು ಎಸ್ ಪಿ ಸಿದ್ದಾರ್ಥ ಗೋಯೆಲ್ ಮಾರ್ಗದರ್ಶನದಲ್ಲಿ ಕಳ್ಳರ ಗ್ಯಾಂಗ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಅಂತಾರಾಜ್ಯ ಕಳ್ಳರ ಹೆಡೆಮುರಿ ಕಟ್ಟಿದೆ.

ಕಳ್ಳರು ಉತ್ತರಪ್ರದೇಶ ಹಾಗೂ ಮಹಾರಾಷ್ಟ್ರ ಮೂಲದವರಾಗಿದ್ದು, ಬಾದಾಮಿ ಪೊಲೀಸರ ತಂಡ ಯುಪಿ ಹಾಗೂ ಮಹಾರಾಷ್ಟ್ರಕ್ಕೆ ತೆರಳಿ ಕಳ್ಳರ ಗ್ಯಾಂಗ್ ಗೆ ಕೋಳ ತೊಡಿಸಿದೆ.ಈ ಮೊದಲು ನವೆಂಬರ್ ತಿಂಗಳಲ್ಲಿ  ಉತ್ತರಪ್ರದೇಶಕ್ಕೆ ತೆರಳಿದ ಬಾದಾಮಿ ಪೊಲೀಸರು ಗ್ಯಾಂಗ್ ನ ಮಹ್ಮದ್  ನವಾಬ್,ಕಮರುಲ್ ಖಾನ್ ಎಂಬ ಇಬ್ಬರನ್ನು ಬಂಧಿಸಿತ್ತು.ಅವರಿಂದಲೂ ಚಿನ್ನಾಭರಣ ಹಣ ಜಪ್ತಿ ಮಾಡಿದ್ದರು.ಇದೀಗ ಅದೇ ಗ್ಯಾಂಗ್ ನಲ್ಲಿದ್ದು ಅವರ ಜೊತೆ ಕಳ್ಳತನ‌ ಮಾಡಿದ್ದ ಮಹಾರಾಷ್ಟ್ರದ  ಚಿಕಲಿ ತಾಲ್ಲೂಕಿನ ನಯಗಾಂವ್ ಮೂಲದ ಅಕ್ಷಯ್ ಅಂಬೋರೆ,ಕುನಾಲ್‌ ಚಹ್ವಾಣ್ ಅವರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.ನಾಲ್ವರಿಂದ ೪೭೨.೨೦  ಗ್ರಾಂ ಚಿನ್ನಾಭರಣ  ಹಾಗೂ ೨ ಲಕ್ಷ ೭೫ ಸಾವಿರ ಹಣ ಸೇರಿ ಒಟ್ಟು ೬೨ ಲಕ್ಷ ೨೦ ಸಾವಿರ ಮೌಲ್ಯದ ಚಿನ್ನಾಭರಣ ಹಾಗೂ ಹಣ ಜಪ್ತಿ ಮಾಡಿದ್ದಾರೆ.ಕಳ್ಳತನಕ್ಕೆ ಬಳಸಿದ ಕಾರು,ಕಂಟ್ರಿ ಪಿಸ್ತೂಲ್, ಎರಡು ಜೀವಂತ ಗುಂಡು,ಮಾಸ್ಕ್ ಗ್ಲೌಜ್,ಕ್ಯಾಪ್,ಗ್ಯಾಸ್ ಕಟರ್ ,ರಾಡ್ ವಶಕ್ಕೆ ಪಡೆದಿದ್ದಾರೆ.ಇವರು ಪಕ್ಕಾ ಪ್ರೊಫೆಷನಲ್ ಕಳ್ಳರಾಗಿದ್ದು ಬ್ಯಾಂಕ್ ನ ಎರಡುನೂರು ಮೀಟರ್ ದೂರು ಕಾರು ನಿಲ್ಲಿಸಿ ಬ್ಯಾಂಕ್ ಹಿಂಭಾಗದ ಶೆಟರ್ಸ್ ನ್ನು ರಾಡ್ ನಿಂದ ಮೀಟಿ ಒಳನುಗ್ಗಿದ್ದರು.ಕಣ್ಣಿಗೆ ಕಂಡ ಎಲ್ಲ ಸಿಸಿ ಕ್ಯಾಮೆರಾಗಳಿಗೆ ಕಪ್ಪು ಬಣ್ಣದ ಸ್ಪ್ರೇ ಹೊಡೆದಿದ್ದರು.ಬ್ಯಾಂಕ್ ಸೈರನ್ ವೈರ್ ಕಟ್ ‌ಮಾಡಿದ್ದರು.ಫಿಂಗರ್ ಪ್ರಿಂಟ್ ಸಿಗದ ರೀತಿ ಗ್ಲೌಜ್ ಧರಿಸಿದ್ದರು.ಪೋನ್ ಟ್ರ್ಯಾಪ್ ಆಗುತ್ತದೆ ಎಂದು ಪೋನ್ ಕೂಡ ಬಳಸಿರಲಿಲ್ಲ.ಅಷ್ಟರಮಟ್ಟಿಗೆ ಪ್ರೊಫೆಷನಲ್ ಆಗಿದ್ದ ಚಾಲಾಕಿ ಕಳ್ಳರು ಕೆಲ ಸೀಕ್ರೆಟ್ ಸಿಸಿ ಕ್ಯಾಮೆರಾದಲ್ಲಿ ಇವರ ದೃಶ್ಯ ಕಂಡು ಬಂದಿತ್ತು.ಅದೇ ಜಾಡು ಹಿಡಿದ ಬಾದಾಮಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಇಡೀ ಗ್ಯಾಂಗ್ ನ್ನು ಬಂಧಿಸಿದೆ.ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಒಟ್ಟಿನಲ್ಲಿ ಪಕ್ಕಾ ಪ್ರೊಫೆಷನಲ್ ಕಳ್ಳರನ್ನು ಖಾಕಿ ಪಡೆ ಸೆರೆ ಹಿಡಿದು ಜೈಲೂಟಕ್ಕೆ ಕಳಿಸಿದೆ.ಕಳ್ಳತನ ನಡೆಯದಂತೆ ಇನ್ನು ಹೆಚ್ಚಿನ ಕ್ರಮ‌ ಕೈಗೊಳ್ಳಬೇಕೆಂಬುದು ಸ್ಥಳೀಯ ಒತ್ತಾಯವಾಗಿದೆ.

Tags:

error: Content is protected !!