ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ತಮ್ಮನ್ನು ಆಹ್ವಾನಿಸುತ್ತಿರುವ ಬಿಜೆಪಿಗೆ ಗೌರವಯುತ ಸ್ಥಾನಮಾನ ನೀಡಿದರೆ ಸೇರುವುದಾಗಿ ಸ್ಪಷ್ಟಪಡಿಸಿದ್ದಾರೆ. ಜೊತೆಗೆ, ಬೆಳಗಾವಿ ಜಿಲ್ಲಾ ವಿಭಜನೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿ, ಗೋಕಾಕ, ಚಿಕ್ಕೋಡಿ, ಮತ್ತು ಅಥಣಿಯನ್ನು ಜಿಲ್ಲೆಗಳನ್ನಾಗಿ ಮಾಡುವ ಬೇಡಿಕೆಗಳಿದ್ದು, ಸರ್ಕಾರವು ಭೌಗೋಳಿಕವಾಗಿ ಜನರಿಗೆ ಮಧ್ಯದಲ್ಲಿ ಆಗುವಂತೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಕುರಿತು ಸುದ್ಧಿಗಾರರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಈಗಾಗಲೇ ಹೇಳಿದಿನಿ ಬಿಜೆಪಿಯಲ್ಲಿ ಗೌರವಯುತ ಸ್ಥಾನವನ್ನು ಕೊಟ್ಟರೆ ಹೋಗ್ತಿದ್ದೆ. ಇನ್ನೂ ಬೆಳಗಾವಿ ಜಿಲ್ಲೆ ವಿಂಗಡನೆಯ ಬಗ್ಗೆ ಹೇಳಬೇಕೆಂದರೆ, ಗೋಕಾಕ ಮತ್ತು ಚಿಕ್ಕೋಡಿ ಎರಡು ಜಿಲ್ಲೆಯನ್ನಾಗಿ ಮಾಡಬೇಕೆಂದು ಹೋರಾಟ ಮಾಡುತ್ತಿದ್ದಾರೆ. ಅದು ಸರ್ಕಾರ ಏನು ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದನ್ನ ಮಾಡ್ಲಿ ಮತ್ತು ಜನರ ಅಭಿಪ್ರಾಯವನ್ನು ತೆಗೆದುಕೊಂಡು ಮಾಡಲಿ. ಯಾವುದೇ ತಾಲೂಕಿಗೆ ಒಂದು ಜಿಲ್ಲೆಯಿಂದ 70 ರಿಂದ 80 ಕಿಲೋಮೀಟರ್ ಆಗಬೇಕು. ಆದರೆ ಎಲ್ಲಿ ಬೆಳಗಾವಿ, ಎಲ್ಲಿ ಅಥಣಿ, ಎಲ್ಲಿ ತೇಲಸಂಗ ವಿಚಾರ ಮಾಡಿ.” ಎಂದು ಹೇಳಿದರು.
