Vijaypura

ವಿಶ್ವ ವಿಖ್ಯಾತ ಗೋಳಗುಮ್ಮಟ ವಿಕ್ಷಣೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ…

Share

ವಿಜಯಪುರ ಜಿಲ್ಲೆಯಲ್ಲಿ ಹಲವು ಪ್ರವಾಸಿ ತಾಣಗಳಿವೆ, ಅದರಲ್ಲೂ ಪ್ರಮುಖವಾಗಿ ವಿಜಯಪುರ ನಗರದಲ್ಲಿರುವ ಗೋಳಗುಮ್ಮಟ, ಇಬ್ರಾಹಿಂ ರೋಜಾ, ಮುಲ್ಕ ಮೈದಾನ್ ತೋಫ್ ಸೇರಿದಂತೆ ಹಲವು ಪ್ರವಾಸಿ ತಾಣಗಳ ವಿಕ್ಷಣೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಈ ಬಾರಿ ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಳವಾಗಿದೆ. ಅದರಲ್ಲೂ ಈ ವಾರವಿಡಿ ಕ್ರೀಸ್ ಮಸ್ ರಜೆ ಇರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಈ ಕುರಿತು ಒಂದು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ…

ವಿಜಯಪುರ ಜಿಲ್ಲೆಯಲ್ಲಿ ಹಲವು ಪ್ರವಾಸಿ ತಾಣಗಳಿವೆ ಅದರಲ್ಲೂ ಪ್ರಮುಖವಾಗಿ ವಿಶ್ವ ವಿಖ್ಯಾತ ಗೋಳಗುಮ್ಮಟ ಇಬ್ರಾಹಿಂ ರೋಜಾ, ಮುಲ್ಕ ಮೈದಾನ ತೋಪ, ಬಾರಾ ಕಮಾನ್ ಹೀಗೆ ನಗರದಲ್ಲಿ ಹಲವು ಪ್ರವಾಸಿ ತಾಣಗಳಿವೆ. ಈ ಪ್ರವಾಸಿ ತಾಣಗಳ ವಿಕ್ಷಣೆಗೆ ಪ್ರತಿದಿನ‌ ಕೂಡ ಹೆಚ್ಚಿನ ಸಂಖ್ಯೆಯ ದೇಶ ವಿದೇಶದ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಕಳೆದ ವರ್ಷಕ್ಕೆ ಹೋಲಿಸದರೆ ಈ ಬಾರಿ ವಿಜಯಪುರ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಭಾರೀ ಏರಿಕೆ ಕಂಡಿದೆ. ಇನ್ನೂ ಡಿಸೆಂಬರ್ ತಿಂಗಳಲ್ಲಂತೂ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಾರೆ. ಹಾಗೆ ಇಂದು ಕ್ರೀಸ್ ಮಸ್ ರಜೆ ಇರುವ ಕಾರಣ ಗೋಳಗುಮ್ಮಟದ ಆವರಣ ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು…

ಕಳೆದ ವರ್ಷ ಅಂದರೆ ಸಪ್ಟೆಂಬರ್ 2024 ರಲ್ಲಿ ಗೋಲಗುಂಬಜ ವಿಕ್ಷಣೆಗೆ 38913 ಜನ ಪ್ರವಾಸಿಗರು ದೇಶದ ಪ್ರವಾಸಿಗರು ಬಂದರೆ ವಿದೇಶಿಗರು 3 ಜನ ಬಂದಿದ್ದರು. 2024 ರ ಅಕ್ಟೋಬರ್ ನಲ್ಲಿ 49120 ಜನ ದೇಶಿ ಪ್ರವಾಸಿಗರಿದ್ದರೆ 5 ಜನ ವಿದೇಶಿಗರು ಬಂದಿದ್ದಾರೆ, 2024 ನವ್ಹಂಬರ್ ತಿಂಗಳಲ್ಲಿ 49804 ಜನ ದೇಶಿ ಪ್ರವಾಸಿಗರು ಬಂದರೆ 11 ಜನ ವಿದೇಶಿಗರು ಬಂದಿದ್ದಾರೆ, ಅದೇ ತರಹ 2025 ರ ಸಪ್ಟೆಂಬರ್ ನಲ್ಲಿ 62704 ದೇಶಿ ಪ್ರವಾಸಿಗರು, 80 ಜನ ವಿದೇಶಿಗರು, 2025 ರಲ್ಲಿ ಅಕ್ಟೋಬರ್ ನಲ್ಲಿ 55452 ದೇಶಿ ಪ್ರವಾಸಿಗರು ಬಂದರೆ 95 ಜನ ವಿದೇಶಿಗರು, ಇನ್ನೂ 2025 ರ ನವ್ಹಂಬರ್ ನಲ್ಲಿ 49882 ದೇಶಿ ಪ್ರವಾಸಿಗರು ಬಂದರೆ 80 ಜನ ವಿದೇಶಿ ಪ್ರವಾಸಿಗರು ಬಂದಿದ್ದಾರೆ. ಅದೇ ರೀತಿಯಾಗಿ ಇಬ್ರಾಹಿಂ ರೋಜಾ, ಬಾರಾಕಮಾನ, ಮುಲ್ಕ ಮೈದಾನ ತೋಪ್ ಸೇರಿದಂತೆ ಹಲವು ಪ್ರವಾಸಿ ತಾಣ ವಿಕ್ಷಣೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ. ಇದೀಗ ವರ್ಷದ ಕೊನೆಯಾಗಿರುವ ಕಾರಣ ಪ್ರತಿ ದಿನ 1 ರಿಂದ 2 ಸಾವಿರದಷ್ಟು ಪ್ರವಾಸಿಗರು ವೀಕ್ಷಣೆಗೆ ಆಗಿಸುತ್ತಾರೆ, ಆದರೆ ಇಂದು 5 ಸಾವಿರಕ್ಕೂ ಅಧಿಕ ಜನ ಗೋಲ ಗುಮ್ಮಟ ವೀಕ್ಷಣೆಗೆ ಆಗಮಿಸಿದ್ದಾರೆ…

ಒಂದೆಡೆ ವಿಜಯಪುರ ಜಿಲ್ಲೆಯಲ್ಲಿ ಚಳಿಯ ಪ್ರಮಾಣ ಹೆಚ್ಚಾಗುತ್ತಿದೆ, ಇದರ ಮದ್ಯೆ ಸಹಿತ ಅದೇ ರೀತಿಯಾಗಿ ಪ್ರವಾಸಿಗರ ಸಂಖ್ಯೆ ಸಹಿತ ಹೆಚ್ಚಳವಾಗುತ್ತಿದೆ. ಒಟ್ಟಾರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವಿಶ್ವ ವಿಖ್ಯಾತ ಗೋಳ ಗುಮ್ಮಟ ‌ಸೇರಿದಂತೆ ಹಲವು ಪ್ರವಾಸಿ ತಾಣ ವಿಕ್ಷಣೆ ಮಾಡುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ…

Tags:

error: Content is protected !!