Delhi

ಮೌನೇಶ್ವರ ಬಾಬು ಗರಗ್ ಅವರಿಗೆ ‘ಗೌರವ ಡಾಕ್ಟರೇಟ್’ ಪ್ರದಾನ

Share

ಬೆಳಗಾವಿ ತಾಲೂಕಿನ ಬೆನಕನಹಳ್ಳಿ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಸಮಾಜಸೇವಕ ಮೌನೇಶ್ವರ ಬಾಬು ಗರಗ್ ಅವರಿಗೆ ದೆಹಲಿಯಲ್ಲಿ ಪ್ರತಿಷ್ಠಿತ ‘ಗೌರವ ಡಾಕ್ಟರೇಟ್’ ಪದವಿ ನೀಡಿ ಗೌರವಿಸಲಾಗಿದೆ.
‘ಭಾರತ ಗೌರವ ರತ್ನ ಶ್ರೀ ಸನ್ಮಾನ್ ಅವಾರ್ಡ್ ಕೌನ್ಸಿಲ್’ ವತಿಯಿಂದ ಸಮಾಜ ಸೇವೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ಅವರು ಮಾಡಿರುವ ಗಮನಾರ್ಹ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ರಾಜಸ್ಥಾನದ ಮಾಜಿ ರಾಜ್ಯಪಾಲರಾದ ಕಲ್ರಾಜ್ ಮಿಶ್ರಾ ಅವರ ಹಸ್ತದಿಂದ ಮೌನೇಶ್ವರ ಗರಗ್ ಅವರು ಈ ಪದವಿಯನ್ನು ಸ್ವೀಕರಿಸಿದರು. ಈ ಸಮಾರಂಭದಲ್ಲಿ ಲಿಥುವೇನಿಯಾ, ವೆನೆಜುವೆಲಾ, ಜಿಂಬಾಬ್ವೆ ಮತ್ತು ಟಾಂಜಾನಿಯಾ ದೇಶಗಳ ರಾಯಭಾರ ಕಚೇರಿಯ ಉನ್ನತ ಅಧಿಕಾರಿಗಳು ಹಾಗೂ ಅಂತರಾಷ್ಟ್ರೀಯ ಗಣ್ಯರು ಉಪಸ್ಥಿತರಿದ್ದರು.
ಗ್ರಾಮೀಣ ಮಟ್ಟದಲ್ಲಿ ಸಮಾಜಕಾರಣ ಮತ್ತು ರಾಜಕೀಯದಲ್ಲಿ ಮಾಡಿದ ವಿಶೇಷ ಸೇವೆಯಿಂದಾಗಿ ಮೌನೇಶ್ವರ ಬಾಬು ಅವರಿಗೆ ಈ ರಾಷ್ಟ್ರಮಟ್ಟದ ಗೌರವ ಲಭಿಸಿದ್ದು, ಬೆಳಗಾವಿ ಜಿಲ್ಲೆಯ ಕೀರ್ತಿ ಪತಾಕೆ ಹಾರಿಸಿದಂತಾಗಿದೆ.

Tags:

error: Content is protected !!