hukkeri

ಮಕ್ಕಳಿಗೆ ನೀತಿ, ಧರ್ಮ ಕಲಿಸಿ ಸಂಸ್ಕಾರ ನೀಡುವುದು ಅವಶ್ಯಕ – ನಿಜಗುಣಾನಂದ ಸ್ವಾಮಿಜಿ….

Share

ಮಕ್ಕಳಿಗೆ ಮನೆಯಲ್ಲಿ ನೀತಿ ಧರ್ಮದೊಂದಿಗೆ ಸಂಸ್ಕಾರ ಕಲಿಸುವದು ಅವಶ್ಯಕವಾಗಿದೆ ಎಂದು ಬೈಲೂರು ನಿಷ್ಕಳ ಮಂಟಪದ ನಿಜಗುಣಾನಂದ ಸ್ವಾಮಿಗಳು ಹೇಳಿದರು.

ಹುಕ್ಕೇರಿ ನಗರದ ಸಿ ಎಸ್ ತುಬಚಿ ಶಿಕ್ಷಣ ಸಂಸ್ಥೆಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡುವ ಕಾರ್ಯಕ್ರಮವನ್ನು ಬೈಲೂರು ನಿಷ್ಕಲ ಮಂಟಪದ ನಿಜಗುನಾಂದ ಸ್ವಾಮಿಗಳ ಮತ್ತು ಅಥಣಿ ಸತ್ತಿಯ ಮಲ್ಲಿಕಾರ್ಜುನ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಸಂಸ್ಥೆಯ ಅದ್ಯಕ್ಷ ಅನಿಲ ಶೆಟ್ಟಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಪ್ರಾಚಾರ್ಯ ರಾಘವೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಎಸ್ ಕೆ ಪಬ್ಲಿಕ್ ಶಾಲೆಯಲ್ಲಿ ಗ್ರಾಮಿಣ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶಿಕ್ಷಣಕ್ಕೆ ಬೇಕಾಗುವ ಕೆ ಸೆಟ್, ಜೆ ಇ ಇ, ನೀಟ್ ಮತ್ತು ಎನ್ ಡಿ ಎ ತರಬೇತಿ ಕೋರ್ಸ ಪ್ರಾರಂಭಿಸಲಾಗುವದು ಎಂದರು.

ವೇದಿಕೆ ಮೇಲೆ ಎಸ್ ಕೆ ಪಬ್ಲಿಕ್ ಶಾಲೆಯ ಅದ್ಯಕ್ಷ ಪಿಂಟು ಶೇಟ್ಟಿ, ಉಪಾಧ್ಯಕ್ಷ ಓಂಕಾರ ಹೆದ್ದೂರಶೇಟ್ಟಿ,ಕಾರ್ಯದರ್ಶಿ ಆದಿತ್ಯ ಶೇಟ್ಟಿ, ಸಿ ಎಸ್ ತುಬಚಿ ಶಿಕ್ಷಣ ಸಂಸ್ಥೆ ಅದ್ಯಕ್ಷ ಅನಿಲ ಶೇಟ್ಟಿ ಉಪಸ್ಥಿತರಿದ್ದರು.ಗಣ್ಯರು ,ಶ್ರಿಗಳು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಶೇಟ್ಟಿ ಸಹೋದರರಿಗೆ ಸತ್ಕರಿಸಿ ಗೌರವಿಸಿ ನೂತನ ತರಬೇತಿಗಳ ನಾಮ ಫಲಕ ಅನಾವರಣ ಗೋಳಿಸಲಾಯಿತು.

ನಂತರ ಮಾತನಾಡಿದ ನಿಜಗುಣಾನಂದ ಮಹಾಸ್ವಾಮಿಗಳು ಪಾಲಕರು ಮಕ್ಕಳಿಗೆ ನೀತಿ ಧರ್ಮ ಪಾಲಿಸುವ ಶಿಕ್ಷಣವನ್ನು ಕಲಿಸ ಬೇಕು, ಇತಿಹಾಸ ತಿಳಿಸಿ ಅವುಗಳನ್ನು ಜೀವನದಲ್ಲಿ ಅಳವಡಿಸುವ ಕಾರ್ಯ ಹುಕ್ಕೇರಿ ಎಸ್ ಕೆ ಪಬ್ಲಿಕ್ ಶಾಲೆ ಮಾಡುತ್ತಿದೆ ಎಂದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಸುಹಾಸ ನೂಲಿ, ಸಚೀನ ಹೆದ್ದೂರಶೇಟ್ಟಿ, ಶಿವರುದ್ರ ಶೇಟ್ಟಿ, ಸುರೇಶ ತಾರಳಿ, ಸಂಜಯ ಅಡಿಕೆ, ಮಹಾಲಿಂಗಪ್ಪಾ ಗಂಧ, ಸೋಮಶೇಖರ ಪರಕನಟ್ಟಿ, ವಿರೇಶ ಗಜಬರ, ಚನಬಸು ಗಜಬರ ಕೋ ಆರಡಿನೆಟರ ರೆನಾಲ್ಡೋ, ಉಪ ಪ್ರಾಚಾರ್ಯೆ ಎಚ್ ಅನಿತಾ ಉಪಸ್ಥಿತರಿದ್ದರು.

Tags:

error: Content is protected !!