ವಿಜಯಪುರದ ಜಿಲ್ಲೆಯ ಸಿದ್ದೇಶ್ವರ ಮಹಾಸ್ವಾಮಿಗಳು ನಮ್ಮ ದೇಶಕ್ಕೆ ಮಾದರಿ ಮಹಾಸ್ವಾಮಿಗಳಾಗಿ ಸಮಾಜ ಸುಧಾರಕರಾಗಿ ತಮ್ಮ ಜೀವನವನ್ನು ಸಾಗಿಸಿದರು ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆಯ ಕಾರ್ಯದರ್ಶಿ ಬಿ ಎಲ್ ಸಂತೋಷ ಹೇಳಿದರು.

ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದ ಬೆಟ್ಟದಲ್ಲಿ ಸಿದ್ದೇಶ್ವರ ಮಹಾಸ್ವಾಮಿಗಳ ಗುರು ಸ್ಮರಣೋತ್ಸವ ಅಂಗವಾಗಿ ತಪೋವನ ಲೋಕಾರ್ಪಣೆ ಕಾರ್ಯಕ್ರಮವನ್ನು ಗದಗದ ಶಿವಾನಂದ ಮಠದ ಶಿವಾನಂದ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳ ಮತ್ತು ಅರಳಿಮಠದ ಶ್ರೀಗಳ ಸಮ್ಮುಖದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಗಣ್ಯರು ತಪೋವನವನ್ನು ಲೋಕಾರ್ಪಣೆ ಮಾಡಿದರು.
ನಂತರ ಸಮಾರಂಭದಲ್ಲಿ ಭಾರತೀಯ ಜನತಾ ಪಕ್ಷದ ರಾಜ್ಯಾದ್ಯಕ್ಷ ವಿಜಯೇಂದ್ರ ಮಾತನಾಡಿ ಭಗೀರಥ ಮಹರ್ಷಿಗಳು ಗಂಗೆಯನ್ನು ಧರೆಗೆ ತಂದು ಭೂಮಿಯ ಮೇಲೆ ಜೀವರಾಶಿಗಳನ್ನು ಉಳಿಸುವಂತಹ ಕೆಲಸವನ್ನ ಮಾಡಿದರು. ಈ ಶತಮಾನದಲ್ಲಿ ಮಹಾ ಸಂತ ಪರಮಪೂಜ್ಯ ಸಿದ್ದೇಶ್ವರ ಮಹಾಸ್ವಾಮಿಗಳು ಇಂದು ಜ್ಞಾನ ಗಂಗೆಯನ್ನು ಧರೆಗೆ ತಂದು ಮನುಷ್ಯನಲ್ಲಿರುವಂತಹ ಕೊಳಕನ್ನು ತೊಳೆಯುವಂತಹ ಕಾರ್ಯವನ್ನು ಮಾಡಿದ್ದಾರೆ ಹೇಳಿದರು. ಅವರ ನುಡಿಗಳು ನಮ್ಮ ಜಿವನಕ್ಕೆ ಮಾದರಿಯಾಗಿದೆ ಎಂದರು.
ತಪೋವನಕ್ಕೆ ಭೂ ದಾನ ನೀಡಿದ ಬಸವರಾಜ ಹುಂದ್ರಿಯವರನ್ನು ಗಣ್ಯರು ಸತ್ಕರಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಬಿ ಎಲ್ ಸಂತೋಷ ಮಾತನಾಡಿ ಸಿದ್ದೇಶ್ವರ ಮಹಾಸ್ವಾಮಿಗಳು ವೈಕುಂಟ ಏಕಾದಶಿ ದಿನದಂದು ದೇಹ ತ್ಯಾಗ ಮಾಡಿದ ಮಹಾನ್ ಸ್ವಾಮಿಜಿಗಳು ಸದಾ ತಮ್ಮ ಮೃದು ನುಡಿಗಳಿಂದ ಸಮಾಜ ಸುಧಾರಕರಾಗಿ ದೇಶಾಭಿಮಾನದಿಂದ ಜೀವನ ಸಾಗಿಸಿ ನಮಗೆ ಮಾರ್ಗದರ್ಶನ ನೀಡಿದ ಸಂತ ನಮಗೆಲ್ಲಾ ಮಾದರಿಯಾಗಿದ್ದರು, ಅವರ ಸ್ಮರಣಾರ್ಥ ಇಂದು ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿ ತಪೋವನ ವನ್ನು ನಿರ್ಮಿಸುತ್ತಿರುವದು ನಮಗೆಲ್ಲಾ ಸಂತೋಷ ತಂದಿದೆ,ಇದಕ್ಕೆ ಭೂ ದಾನ ಮಾಡಿದ ಈ ಭಾಗದ ಮುಖಂಡ ಬಸವರಾಜ ಹುಂದ್ರಿಯವರು ಯಾವದೆ ಫಲಾಪೆಕ್ಷೆ ಇಲ್ಲದೆ ಅವರ ಸ್ವಂತ ಜಮೀನು ನೀಡಿದ್ದು ಗಮನಾರ್ಹ ವಾಗಿದೆ ಎಂದರು.
ಈ ಸಂದರ್ಭದಲ್ಲಿ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ ಅವರು ಮಾತನಾಡಿ ಸಿದ್ಧೇಶ್ವರ ಸ್ವಾಮಿಗಳು ಭಾರತೀಯ ಸ್ವಾಮೀಜಿಗಳನ್ನು ನಿಶ್ಚಿಂತಿಯನ್ನಾಗಿ ಮಾಡಿ ಹೋಗಿದ್ದಾರೆ. ಯಾವಾಗಲೂ ಒಡೆಯುವಂತಹ ಕೆಲಸ ಮಾಡಬಾರದು ಕೂಡಿಸುವಂತಹ ಕೆಲಸ ಮಾಡಬೇಕು ಆ ಕೆಲಸವನ್ನು ಪರಮಪೂಜ್ಯರವರು ಮಾಡಿದರು ಅದೇ ರೀತಿಯಾಗಿ ಪರಮಪೂಜ್ಯರವರು ನಾವೆಲ್ಲ ಒಂದು ಎಂದು ಹೇಳಿದ್ದಾರೆ ಒಂದು ಒಂದು ಅನ್ನುವವರ ಜೊತೆ ಬಂಧು ಅಗಲಿಲ್ಲ ಅಂದರೆ ಹೇಗೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ದುರ್ಯೋಧನ ಐಹೋಳೆ, ನಿಖಿಲ್ ಕತ್ತಿ, ಮಹೇಶ ತೆಂಗಿನಕಾಯಿ, ಅಭಯ ಪಾಟೀಲ, ಮಾಜಿ ಸಂಸದ ರಮೇಶ ಕತ್ತಿ, ಮಾಜಿ ಶಾಸಕರಾದ ಎ ಬಿ ಪಾಟೀಲ, ಸಂಜಯ ಪಾಟೀಲ, ವಿಶ್ವನಾಥ ನಾಯಿಕ, ಪಿ ರಾಜೀವ, ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆಯ ಗಣ್ಯರು ಉಪಸ್ಥಿತರಿದ್ದರು.
