Belagavi

ಎಂ.ಕೆ. ಹುಬ್ಬಳ್ಳಿಯ ಶ್ರೀ ಗಂಗಾಂಬಿಕಾ ಶಾಲೆಯಲ್ಲಿ ಸಂಭ್ರಮದ ರೈತರ ದಿನಾಚರಣೆ; ಮಣ್ಣಿನ ಮಕ್ಕಳಾದ ಪುಟಾಣಿಗಳು..!

Share

‘ರೈತ ದೇಶದ ಬೆನ್ನೆಲುಬು, ಅನ್ನದಾತ ಒಕ್ಕದಿದ್ದರೆ ಜಗವೇ ಬಿಕ್ಕುವುದು’ ಎಂಬ ಮಾತಿನಂತೆ ರೈತರ ಶ್ರಮವನ್ನು ಗೌರವಿಸಲು ಎಂ. ಕೆ. ಹುಬ್ಬಳ್ಳಿಯ ಶ್ರೀ ಗಂಗಾಂಬಿಕಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರೀಯ ರೈತರ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

ಈ ಕಾರ್ಯಕ್ರಮದ ವಿಶೇಷ ಆಕರ್ಷಣೆಯೆಂದರೆ ಶಾಲೆಯ ಮುದ್ದು ವಿದ್ಯಾರ್ಥಿಗಳು ರೈತರ ವೇಷಭೂಷಣಗಳನ್ನು ಧರಿಸಿ, ಕೈಯಲ್ಲಿ ನೇಗಿಲು ಹಿಡಿದು ಸಂಭ್ರಮಿಸಿದ್ದು. ವಿದ್ಯಾರ್ಥಿಗಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡಿಸುವ ಮತ್ತು ರೈತರ ಬಗ್ಗೆ ಗೌರವ ಬೆಳೆಸುವ ನಿಟ್ಟಿನಲ್ಲಿ ಈ ವಿಶಿಷ್ಟ ಪ್ರಯತ್ನ ಮಾಡಲಾಗಿತ್ತು.
ಶಾಲೆಯ ಅಧ್ಯಕ್ಷರು ಹಾಗೂ ಹಿರಿಯ ವಕೀಲರಾದ ಉಮೇಶ್ ಸಿ. ಹಿರೇಮಠ ಮತ್ತು ಉಪಾಧ್ಯಕ್ಷರಾದ ಮಮತಾ ಉಮೇಶ್ ಹಿರೇಮಠ ಅವರು ಜಂಟಿಯಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದ ಪ್ರಗತಿಯಲ್ಲಿ ರೈತರ ಪಾತ್ರ ದೊಡ್ಡದಿದೆ, ಅದನ್ನು ಮುಂದಿನ ಪೀಳಿಗೆಗೆ ತಿಳಿಸುವುದು ಶಾಲೆಯ ಉದ್ದೇಶವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಲೆಯ ಪ್ರಧಾನ ಗುರುಮಾತೆಯಾದ ಶ್ರೀಮತಿ ಶೃತಿ ಸಚಿನ್ ಪಾಟೀಲ್, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು. ವಿಶೇಷವಾಗಿ ಎಂ.ಕೆ. ಹುಬ್ಬಳ್ಳಿ ಪಟ್ಟಣದ ಪ್ರಗತಿಪರ ರೈತರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಗೌರವಿಸಲಾಯಿತು.

Tags:

error: Content is protected !!