ಚಿಕ್ಕೋಡಿ ತಾಲೂಕಿನ ಹಿರೇಕೊಡಿ ಗ್ರಾಮದ ಹೆಚ್. ಎಸ್. ದೇಸಾಯಿ ಚಾರಿಟೇಬಲ್ ಫೌಂಡೇಶನ ವತಿಯಿಂದ ಗ್ರಾಮದ ಸರ್ಕಾರಿ ಉರ್ದು ಶಾಲೆಯಲ್ಲಿ ಮಕ್ಕಳ ಉಚಿತ ಆರೋಗ್ಯ ತಪಾಸಣೆ ಶಿಬಿರ ಜರುಗಿತು.
ಎಚ್. ಎಸ್ .ದೇಸಾಯಿ ಚಾರಿಟೇಬಲ್ ಫೌಂಡೇಶನ್ ವತಿಯಿಂದ ನಡೆದ ಆರೋಗ್ಯ ತಪಾಸನೆ ಶಿಬಿರದಲ್ಲಿ ಸುಮಾರು 100 ಕ್ಕಿಂತ ಹೆಚ್ಚು ಚಿಕ್ಕ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಯಿತು. ಇದರಲ್ಲಿ ರಕ್ತ ತಪಾಸನೆ, ಬ್ಲಡ್ ಗ್ರೂಪ್ ತಪಾಸಣೆ ಸೇರಿದಂತೆ ಇನ್ನಿತರ ಆರೋಗ್ಯ ತಪಾಸನೆಗಳು ಮಾಡಲಾಯಿತು.
ಸಂದರ್ಭದಲ್ಲಿ ಫೌಂಡೇಶನದ ಸಂಸ್ಥಾಪಕ ಹಫೀಜ್ ಮೊಹಮ್ಮದ್ ಸೈಯದ್ ಕಾದರಪಾಷಾ ದೇಸಾಯಿ ಹಾಗೂ ಮೌಲಾನಾ ಮಹಮ್ಮದ್ ಶೋಯೆಬ ಖಾದರಪಾಷಾ ದೇಸಾಯಿ ಮಾತನಾಡಿ ನಮ್ಮ ಫೌಂಡೇಶನ್ ವತಿಯಿಂದ ಹಿರೆಕೋಡಿ ಗ್ರಾಮದ ಸರ್ಕಾರಿ ಶಾಲೆಯ ಚಿಕ್ಕ ಮಕ್ಕಳ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಂಡಿದ್ದೇವೆ. ಮುಂದಿನ ದಿನಮಾನಗಳಲ್ಲಿ ಗ್ರಾಮದ ಉರ್ದು ಕನ್ನಡ ಸೇರಿದಂತೆ ಎಲ್ಲಾ ಶಾಲೆಗಳಲ್ಲಿ ಚಿಕ್ಕ ಮಕ್ಕಳ ಆರೋಗ್ಯ ತಪಾಸನೆ ಮಾಡಲಾಗುವುದು. ಅದೇ ರೀತಿ ಗ್ರಾಮದ ವಿಧವಾ ಮಹಿಳೆಯರಿಗೆ , ವೃದ್ಧರಿಗೆ ಆರ್ಥಿಕ ನೆರವು ನೀಡಲಾಗುವುದು. ಅದೇ ರೀತಿ ಮುಂದಿನ ದಿನಮಾನಗಳಲ್ಲಿ ಮತ್ತಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಸಿಮ ಸಲೀಂ ಪಟೇಲ್, ಸಿರಾಜ್ ಜಕ್ರಿಯಾ ಪಟೇಲ್, ನೋಮನ ಪಟೇಲ್, ಹಫೀಜ್ ಸುನೇರ ಪಟೆಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಒಟ್ಟಾರೆ ಹಿರೆಕೊಡಿ ಗ್ರಾಮದ ಹೆಚ್. ಎಸ್ .ದೇಸಾಯಿ ಚಾರಿಟೇಬಲ್ ಫೌಂಡೇಶನದ ಕಾರ್ಯ ಇನ್ನಿತತರಿಗೆ ಮಾದರಿಯಾಗಿದೆ.

