ಪ್ರತಿಯೊಬ್ಬರು ಪ್ರಾಮಾಣಿಕತೆಯಿಂದ ಜೀವನ ಸಾಗಿಸುವ ಜೊತೆಗೆ ಶ್ರದ್ಧೆ ಭಕ್ತಿಯಿಂದ ಗುರು-ಹಿರಿಯರನ್ನು, ತಂದೆ-ತಾಯಿಗಳನ್ನು ಗೌರವದಿಂದ ಕಾಣಬೇಕು ಮತ್ತು ವಿದ್ಯಾರ್ಥಿಗಳು ಸುಳ್ಳ ಮಾತನಾಡದೇ ತಮ್ಮ ಪ್ರಾಮಾಣಿಕತೆ ಬೆಳಿಸಿಕೊಳ್ಳಬೇಕು ಇದೇ ಸಂದೇಶವನ್ನು ನಡೆದಾಡುವ ದೇವರು ಸಿದ್ದೇಶ್ವರ ಮಹಾಸ್ವಾಮಿಗಳು ನೀಡಿದ್ದಾರೆ. ಇದನ್ನು ಪ್ರಾಮಾಣಿಕವಾಗಿ ಪಾಲನೆ ಮಾಡಿದಾಗ ಮಾತ್ರ ಮಾಹನ್ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸದಂತಾಗುತ್ತದೆ ಎಂದು ಕೊಲ್ಲಾಪೂರ-ಕನ್ಹೇರಿ ಮಠದ ಜಗದ್ಗುರು ಅದೃಷ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.


ಅವರು, ಬುಧವಾರ ದಿ. 31 ರಂದು ತಾಲೂಕಿನ ಜುಗೂಳ ಗ್ರಾಮದಲ್ಲಿ ಪಪೂ ಸಿದ್ದೇಶ್ವರ ಶ್ರೀಗಳ ತೃತೀಯ ಗುರುನಮನ ಮಹೋತ್ಸವ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ, ಆಶೀರ್ವಚನ ನೀಡುತ್ತಿದ್ದರು.

ವೇದಾಂತ ಕೇಸರಿ ಮಲ್ಲಿಕಾರ್ಜುನ ಮಹಾಸ್ವಾಮಿಜೀ ಹಾಗೂ ನಡೆದಾಡುವ ದೇವರು ಪಪೂ ಸಿದ್ದೇಶ್ವರ ಶ್ರೀಗಳು ಜುಗೂಳ ಗ್ರಾಮದ ಜೊತೆಗೆ ಬಹಳ ಅವಿನಾವಭಾವ ಹೊಂದಿದ್ದರು. ಮಲ್ಲಿಕಾರ್ಜುನ ಶ್ರೀಗಳು ಕೃಷ್ಣಾ ನದಿ ತೀರದ ಜುಗೂಳದಲ್ಲಿ ಸುಮಾರು 75 ವರ್ಷಗಳ ಹಿಂದೆ ಗ್ರಾಮದಲ್ಲಿ ವಾಸ್ತವ್ಯ ಮಾಡಿ, ಇಲ್ಲಿಯ ಜನರಿಗೆ ಆಧ್ಯಾತ್ಮಿಕದಡೆಗೆ ಕೊಂಡೈಯ್ಯಲು ವಿಷೇಶವಾಗಿ ಶ್ರಮಿಸಿದ್ದರು. ಅವರ ಶಿಷ್ಯನಾಗಿ ನಾನು ಇದೇ ಜುಗೂಳ ಗ್ರಾಮದಿಂದ ಆಧ್ಯಾತ್ಮಕ ಶಿಷ್ಯನಾಗಿ ಜುಗೂಳ ಗ್ರಾಮದಲ್ಲಿ ಓದಿದ್ದೇನೆ ಎಂದರು. ಈ ಗ್ರಾಮದ ಶ್ರೀಗಳಿಗೆ ತವರು ಗ್ರಾಮವಾಗಿದೆ ಎಂದು ಅವರು, ವಿದ್ಯಾರ್ಥಿಗಳಲ್ಲಿ ಯಾವ ರೀತಿ ಪ್ರಾಮಾಣಿಕತೆ ಇರಬೇಕೆಂಬ ಕೆಲ ದೃಷ್ಟಾಂತಗಳನ್ನು ಹೇಳಿ, ಮಾರ್ಗದರ್ಶನ ನೀಡಿದರು.
ವಿಜಯಪೂರ ಜ್ಞಾನ ಯೋಗಾಶ್ರಮದ ಪಪೂ ಬಸವಲಿಂಗ ಮಹಾಸ್ವಾಮೀಜಿ ಮಾತನಾಡಿ, ಸಿದ್ದೇಶ್ವರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಾವು ಬೆಳೆದಿದ್ದೇವೆ. ಅವರ ಪ್ರತಿಯೊಂದು ನಡೆ-ನುಡಿ, ಸಮೀಪದಿಂದ ಆಲಿಸಿದ್ದೇನೆ. ಅವರಂತಹ ಗುರುಗಳು ಈ ವರೆಗೆ ನಾನು ಕಂಡಿಲ್ಲ ಎಂದ ಅವರು, ಜುಗೂಳ ಗ್ರಾಮದಲ್ಲಿ ಕಳೆದ ಮೂರು ವರ್ಷಗಳಿಂದ ಗುರುನಮನ ಮಹೋತ್ಸವ ಆಚರಿಸುತ್ತಿದ್ದೀರಿ. ಇದಕ್ಕೆ ದಾನಿಗಳು ಮುಂದೆ ಬಂದಿದ್ದು, ಬರುವ ವರ್ಷ ಮಲ್ಲಿಕಾರ್ಜುನ ಸ್ವಾಮಿಜಿಗಳು ಈ ಗ್ರಾಮಕ್ಕೆ ಪಾದಾರ್ಪಣೆ ಮಾಡಿ 75 ಪೂರ್ಣಗೊಳ್ಳಲಿದ್ದು, ಇದರ ಸ್ಮರಣಾರ್ಥವಾಗಿ ಅದ್ದೂರಿ ಕಾರ್ಯಕ್ರಮವನ್ನು ಆಚರಿಸೋಣವೆಂದರು.
ಈ ವರ್ಷದ ಕಾರ್ಯಕ್ರಮಕ್ಕೆ ಅಶೋಕ ಸುಂಕೆ ದಂಪತಿಗಳು, ಅಶೋಕ ಕಾಗವಾಡೆ ದಂಪತಿಗಳು, ಚಿದಾನಂದ ಮಿಣಚೆ ದಂಪತಿಗಳು ಮತ್ತು ಕಲ್ಲಪ್ಪಾ ಘಟಗೆ ದಂಪತಿಗಳು ತಲಾ 51 ಸಾವಿರದಂತೆ ದೇಣಿಗೆ ನೀಡಿದ್ದು, ಅವರನ್ನು ಸನ್ಮಾನಿಸಲಾಯಿತು. ಬರುವ ವರ್ಷ ನಡೆಯುವ ಕಾರ್ಯಕ್ರಮಕ್ಕೆ ರಿತೇಶ ಪಾಟೀಲ, ಮನೋಹರ ಪಾಟೀಲ, ಕಲ್ಲಪ್ಪಾ ಘಟಗೆ ಮತ್ತು ಡಾ. ಮಲ್ಲೇಶ ಕಾಗವಾಡೆ ಇವರು ತಲಾ 51 ಸಾವಿರದಂತೆ ದೇಣಿಗೆ ಘೋಷಣೆ ಮಾಡಿದರು. ಇವರನ್ನು ಸ್ವಾಮಿಜಿಗಳಿಂದ ಗೌರವಿಸಲಾಯಿತು.
ಸಮಾರಂಭದ ಸಾನಿಧ್ಯವನ್ನು ಪರಮಾನಂದವಾಡಿ ಗುರುದೇವ ಬ್ರಹ್ಮಾನಂದ ಮಠದ ಡಾ. ಅಭಿನವ ಬ್ರಹ್ಮಾನಂದ ಶ್ರೀಗಳು, ಕಾಗವಾಡ ಗುರುದೇವಾಶ್ರಮದ ಯತೀಶ್ವರಾನಂದ ಶ್ರೀಗಳು, ಸದಲಗಾ ಗೀತಾಶ್ರಮದ ಡಾ. ಶ್ರದ್ಧಾನಂದ ಶ್ರೀಗಳು, ಟಾಕಳಿ ಗುರುದೇವಾಶ್ರಮದ ಶಿವದೇವ ಶ್ರೀಗಳು, ತಿಕೋಟಾ ವಿರಕ್ತಮಠದ ಚನ್ನಮಲ್ಲಿಕಾರ್ಜುನ ಶ್ರೀಗಳು ವಹಿಸಿದ್ದರು.
ಕಾರ್ಯಕ್ರಮ ಯಶಸ್ವಿಗೊಳಿಸಲು ಪಿಕೆಪಿಎಸ್ ಅಧ್ಯಕ್ಷ ಅಣ್ಣಾಸಾಬ ಪಾಟೀಲ, ಅನೀಲ ಕಡೋಲೆ, ತಾತ್ಯಾಸಾಬ ಪಾಟೀಲ, ಸಿದಗೌಡಾ ಪಾಟೀಲ, ಪ್ರಕಾಶ ಪಾಟೀಲ, ನರಸಿಂಗ ಮಿಣಚೆ, ಕಿರಣ ಮಿಣಚೆ, ರುದ್ರಗೌಡಾ ಪಾಟೀಲ, ಬಸವರಾಜ ನಂದಾಳೆ, ಚಿದಾನಂದ ಪಾಟೀಲ, ರಾಜು ಮಿರ್ಜೆ ಸೇರಿದಂತೆ ಗ್ರಾಮಗ ಎಲ್ಲ ಸಂಘ-ಸAಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರು ಶ್ರಮಿಸಿದರು.
