Chikkodi

ಡಿ.27-28 ರಂದು ಚಿಕ್ಕೋಡಿಯಲ್ಲಿ ಸತೀಶ ಶುಗರ್ ಅವಾರ್ಡನ ಗ್ರ್ಯಾಂಡ್ ಫಿನಾಲೆ

Share

ಚಿಕ್ಕೋಡಿ:ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಸಚಿವ ಸತೀಶ ಜಾರಕಿಹೊಳಿ,ಸಂಸದೆ ಪ್ರಿಯಂಕಾ ಜಾರಕಿಹೊಳಿ,ರಾಹುಲ ಜಾರಕಿಹೊಳಿಯವರ ದೂರದೃಷ್ಟಿಯಿಂದ ಸತೀಶ ಶುಗರ ಅವಾರ್ಡ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಇದೇ ಡಿಸೆಂಬರ್ ೨೭-೨೮ ರಂದು ಸಾಯಂಕಾಲ 5 ಗಂಟೆಗೆ ಚಿಕ್ಕೋಡಿಯ ಕಿವಡ್ ಮೈದಾನದಲ್ಲಿ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಹೇಳಿದರು.

ಅವರು ಚಿಕ್ಕೋಡಿ ಪಟ್ಟಣದ ಸಂಸದರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು ಚಿಕ್ಕೋಡಿ, ರಾಯಬಾಗ,ಅಥಣಿ,ಕಾಗವಾಡ,ನಿಪ್ಪಾಣಿ ತಾಲೂಕಿನ ವ್ಯಾಪ್ತಿಯ ಪ್ರಾಥಮಿಕ-ಫ್ರೌಢ ಶಾಲೆಯ ಹಾಗೂ ಕಾಲೇಜಿನ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.ಪ್ರಾಥಮಿಕ,ಫ್ರೌಢ ಕಾಲೇಜು ವಿದ್ಯಾರ್ಥಿಗಳಿಗೆ ಗಾಯನ,ಜಾನಪದ ಗಾಯನ,ಸಮೂಹ ನೃತ್ಯ,ಜಾನಪದ ನೃತ್ಯ,ಭಾಷಣಗಳು ಪ್ರತ್ಯೇಕವಾಗಿ ಪ್ರಾಥಮಿಕ ಹಂತದ ಸ್ಪರ್ಧೆಗಳಲ್ಲಿ ಆಯ್ಕೆಮಾಡಲಾಗಿದೆ.

ಗ್ರ್ಯಾಂಡ್ ಫಿನಾಲೆನಲ್ಲಿ ವಿಜೇತರಾದ ತಂಡಕ್ಕೆ ಪ್ರಥಮ,ದ್ವೀತಿಯ,ತೃತಿಯ ಬಹುಮಾನ ಪಡೆದವರಿಗೆ ನಗದು ರೂಪದಲ್ಲಿ ಬಹುಮಾನ ನೀಡಲಾಗುವುದು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮಾಡಲಾಗುವುದು ಎಂದರು. ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ.ಸುಮಾರು ೮ ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ ಎಂದರು‌.

ಈ ಸಂದರ್ಭದಲ್ಲಿ ಮಹಾವೀರ ಮೊಹಿತೆ,ಪ್ರಭಾಕರ ಕೋರೆ,ಸುರೇಶ ಘರಬುಡೆ,ಗಜಾನನ ಮಂಗಸೂಳಿ,ರಾಮಾ ಮಾನೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!