BELAGAVI

ಜ್ಞಾನದೀಪ ಎಜ್ಯುಕೇಷನ್ ಟ್ರಸ್ಟ್’ನ ಸುವರ್ಣ ಮಹೋತ್ಸವ

Share

ತಂದೆ-ತಾಯಿಗಳು ಟಿ.ವ್ಹಿ ಸಿರಿಯಲ್’ಗಳಲ್ಲಿ ಕಳೆದು ಹೋಗದೇ ತಮ್ಮ ಮಕ್ಕಳೊಂದಿಗೆ ಸ್ನೇಹಿತರಾಗಿ ಬೆರೆತು ಅವರ ಸಮಸ್ಯೆಗಳನ್ನು ಅರಿತು ಅವರಿಗೆ ಒಳ್ಳೆಯ ಮಾರ್ಗದರ್ಶನ ಮಾಡಿ ಯಶಸ್ವಿ ನಾಗರೀಕರನ್ನಾಗಿಸಬೇಕೆಂದು ರಾಜ್ಯಸಭಾ ಸದಸ್ಯ ರಾಜ್ಯಸಭಾ ಸದಸ್ಯ ಪದ್ಮಶ್ರೀ ಅಡ್ವೋಕೇಟ್ ಉಜ್ವಲ್ ನಿಕಮ್ ಅವರು ಹೇಳಿದರು.

ಬೆಳಗಾವಿಯ ಜ್ಞಾನದೀಪ ಎಜ್ಯುಕೇಷನ್ ಟ್ರಸ್ಟ್’ನ ಸುವರ್ಣ ಮಹೋತ್ಸವ ಕಾರ್ಯಕ್ರಮವು ಅತ್ಯಂತ ಸಡಗರ ಸಂಭ್ರಮದಿಂದ ನಡೆಯಿತು. ಮುಖ್ಯ ಅತಿಥಿಗಳಾಗಿ ರಾಜ್ಯಸಭಾ ಸದಸ್ಯ ಪದ್ಮಶ್ರೀ ಅಡ್ವೋಕೇಟ್ ಉಜ್ವಲ್ ನಿಕಮ್ ಅವರು ಉಪಸ್ಥಿತರಿದ್ಧರು. ಅತಿಥಿಗಳಾಗಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಉಪಸ್ಥಿತರಿದ್ಧರು. ಉಪನ್ಯಾಸಕರಾಗಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಸಿ.ಎಂ. ತ್ಯಾಗರಾಜ್ ಉಪಸ್ಥಿತರಿದ್ಧರು. ಟ್ರಸ್ಟಿನ ಅಧ್ಯಕ್ಷರಾದ ಚಂದ್ರಹಾಸ್ ಅನ್ವೇಕರ್ ಅವರು ಅಧ್ಯಕ್ಷತೆ ವಹಿಸಿದ್ದರು. ಉಪಸ್ಥಿತ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಸುವರ್ಣ ಮಹೋತ್ಸವವನ್ನು ಆಚರಿಸಿದರು.

ಮುಖ್ಯ ಅತಿಥಿಗಳಾಗಿ ರಾಜ್ಯಸಭಾ ಸದಸ್ಯ ಪದ್ಮಶ್ರೀ ಅಡ್ವೋಕೇಟ್ ಉಜ್ವಲ್ ನಿಕಮ್ ಅವರು ಜ್ಞಾನವನ್ನು ಹಲವು ಸಂಪನ್ಮೂಲಗಳಿಂದ ಪಡೆಯಬಹುದು ಆದರೇ, ಬುದ್ಧಿವಂತಿಕೆಯನ್ನು ನಾವೇ ಬೆಳೆಸಿಕೊಳ್ಳಬೇಕಾಗುತ್ತದೆ. ನಮ್ಮ ಕೌಶಲ್ಯ ಮತ್ತು ಬುದ್ಧಿವಂತಿಕೆಗಳನ್ನು ವಿಕಸಿತಗೊಳಿಸಿಕೊಳ್ಳಬೇಕು. ಸೋಲು ಅಪರಾಧವಲ್ಲ. ಆದರೇ, ಪ್ರಯತ್ನಗಳನ್ನು ಬಿಟ್ಟು ಬಿಡುವುದು ಅಪರಾಧ. ವೃತ್ತಿಯಲ್ಲಿ ಪ್ರಾಮಾಣಿಕತೆ, ಶಿಸ್ತು ಮತ್ತು ನಿಸ್ವಾರ್ಥ ಸೇವೆ ನಮ್ಮನ್ನು ಪರಿಪೂರ್ಣರನ್ನಾಗಿಸುತ್ತದೆ. ಜೀವನದಲ್ಲಿ ಗುರಿ ಇಟ್ಟುಕೊಳ್ಳಬೇಕು. ತಂದೆ-ತಾಯಿಗಳು ಟಿ.ವ್ಹಿ ಸಿರಿಯಲ್’ಗಳಲ್ಲಿ ಕಳೆದು ಹೋಗದೇ ತಮ್ಮ ಮಕ್ಕಳೊಂದಿಗೆ ಸ್ನೇಹಿತರಾಗಿ ಬೆರೆತು ಅವರ ಸಮಸ್ಯೆಗಳನ್ನು ಅರಿತು ಅವರನ್ನು ಒಳ್ಳೆಯ ದಾರಿಯಲ್ಲಿ ತೆಗೆದುಕೊಂಡು ಹೋಗಬೇಕು ಎಂದರು.

ಇದಕ್ಕೂ ಮುನ್ನ ಮಾತನಾಡಿದ ಶಾಸಕ ಅಭಯ್ ಪಾಟೀಲ್ ಅವರು, ಜ್ಞಾನದೀಪ ಏಜ್ಯುಕೇಷನ್ ಟ್ರಸ್ಟ್’ನ 50 ವರ್ಷದ ಅವಿರತ ಸೇವೆ ಪ್ರಶಂಸನೀಯವಾಗಿದೆ. ಹಲವಾರು ವಿದ್ಯಾರ್ಥಿಗಳಿಗೆ ಶಿಕ್ಷಣ ದಾಸೋಹವನ್ನು ನೀಡಿ ಸಾಕ್ಷರರನ್ನಾಗಿಸಿದ ಶಿಕ್ಷಕರಿಗೆ ನಮ್ಮ ಧನ್ಯವಾದಗಳು. ಇಂದು ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಹಲವು ಉನ್ನತ ಸ್ಥಾನಕ್ಕೆರಿದ್ದು, ಇವರಿಗೆ ಶಿಕ್ಷಣ ನೀಡಿದ ಶಿಕ್ಷಕರನ್ನು ಇಂದು ನೆನಪಿಸುವ ದಿನವಾಗಿದೆ. ಶಾಲೆಯೂ ಇಂದು ಹಲವರನ್ನು ಉನ್ನತಸ್ಥಾನಕ್ಕೇರಿಸಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದೆ. ಈಗ ಕಲಿತ ಶಾಲೆಗೆ ಏನನ್ನಾದರೂ ಕೊಡುಗೆ ನೀಡುವುದು ಹಳೆಯ ವಿದ್ಯಾರ್ಥಿಗಳ ಕರ್ತವ್ಯವಾಗಿದೆ ಎಂದರು.
ನಂತರ ವಿವಿಧ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವಸಂತ ಜೋಷಿ, ನವೀನಾ ಶೆಟ್ಟಿಗಾರ್, ಸುಧಾಕರ ದೇಸಾಯಿ, ಇಂದ್ರನೀಲ್ ಅನ್ವೇಕರ, ಮೋಹನ್ ಸುತಾರ್ ಸೇರಿದಂತೆ ವಿದ್ಯಾರ್ಥಿಗಳು ಇನ್ನುಳಿದವರು ಉಪಸ್ಥಿತರಿದ್ಧರು

Tags:

error: Content is protected !!