BELAGAVI

ಗೋವಾ ಮದ್ಯ ಸಾಗಾಟ: ಸ್ವಿಫ್ಟ್ ಕಾರ್ ಸಮೇತ ಓರ್ವನ ಬಂಧನ

Share

ಬೆಳಗಾವಿಯಲ್ಲಿ ಅಕ್ರಮ ಗೋವಾ ಮದ್ಯ ಮಾರಾಟಗಾರನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಬಂಧಿಸಿ ರೂ 3.45 ಲಕ್ಷ ಮೌಲ್ಯದ ವಸ್ತು ಜಪ್ತಿ ಮಾಡಿದ್ದಾರೆ.

ಅಬಕಾರಿ ಇಲಾಖೆಯ ಅಧಿಕಾರಿಗಳು ದಿನಾಂಕ 08-12-2025 ರಂದು ಬೆಳಗಾವಿ ಶಹರದ ಬೆಂಗಳೂರು-ಪುಣೆ ಎನ್.ಎಚ್-4 ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ (ಯಡಿಯೂರಪ್ಪ ಮಾರ್ಗ) ನಡೆಸಿದ ಕಾರ್ಯಾಚರಣೆಯಲ್ಲಿ, ಗೋವಾ ರಾಜ್ಯದಲ್ಲಿ ಮಾರಾಟಕ್ಕೆಂದು ನಮೂದಿಸಲಾದ 138.060 ಲೀಟರ್ ಮದ್ಯವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಮಾನ್ಯ ಅಬಕಾರಿ ಅಪರ ಆಯುಕ್ತರು (ಅಪರಾಧ) ಮತ್ತು ಜಂಟಿ ಆಯುಕ್ತರ ಮಾರ್ಗದರ್ಶನದಂತೆ ನಡೆದ ಈ ಕಾರ್ಯಾಚರಣೆಯಲ್ಲಿ, ಮಂಜುನಾಥ ಮಲ್ಲಗೌಡ ಗಿಡಗೇರಿ (26), ಸಾ: ಮಹಾದ್ವಾರ ರೋಡ್, ಬೆಳಗಾವಿ, ಇವರು ಚಲಾಯಿಸುತ್ತಿದ್ದ GA-09 A-3810 ನೋಂದಣಿ ಸಂಖ್ಯೆಯ ಬಿಳಿ ಬಣ್ಣದ ಸ್ವಿಫ್ಟ್ ಕಾರ್ ಅನ್ನು ತಡೆದು ಪರಿಶೀಲಿಸಲಾಯಿತು. ಯಾವುದೇ ರಹದಾರಿ ಪತ್ರವಿಲ್ಲದೆ ಒಟ್ಟು 15 ರಟ್ಟಿನ ಪೆಟ್ಟಿಗೆಗಳು ಮತ್ತು 06 ಬಾಟಲಿಗಳಲ್ಲಿ ತುಂಬಿದ್ದ ಮದ್ಯವನ್ನು ಅಕ್ರಮ ಮಾರಾಟದ ಉದ್ದೇಶದಿಂದ ಸಾಗಿಸುತ್ತಿರುವುದು ಪತ್ತೆಯಾಗಿದೆ.

ಕೃತ್ಯದ ಸ್ಥಳದಲ್ಲಿಯೇ ಆರೋಪಿಗೆ ಬಿ.ಎನ್.ಎಸ್.ಎಸ್ ಕಾಯ್ದೆ 2023ರ ಕಲಂ 35(3) ರಂತೆ ನೋಟಿಸ್ ಜಾರಿ ಮಾಡಲಾಗಿದೆ. ಈ ಸಾಗಾಟವು ಕರ್ನಾಟಕ ಅಬಕಾರಿ ಕಾಯ್ದೆ 1965ರ ಹಲವು ಕಲಂಗಳ ಉಲ್ಲಂಘನೆಯಾಗಿದ್ದು, ಕಲಂ 32(1), 34, 38(ಎ) ಮತ್ತು 43ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಅಬಕಾರಿ ನಿರೀಕ್ಷಕರು ಘಟನೆಯ ವಿಡಿಯೋ ಮತ್ತು ಆಡಿಯೋವನ್ನು ಮೊಬೈಲ್‌ನಲ್ಲಿ ದಾಖಲಿಸಿಕೊಂಡಿದ್ದು, ಜಿಪಿಎಸ್ ಕ್ಯಾಮೆರಾ ಮೂಲಕ ಸ್ಥಳದ ಛಾಯಾಚಿತ್ರಗಳನ್ನು ತೆಗೆದಿದ್ದಾರೆ (ಸ್ಥಳ: 15’49’56.05128 N, 74’32’49.83194 E). ಒಟ್ಟು ₹3,45,200/- ಮೌಲ್ಯದ ಮದ್ಯ ಮತ್ತು ವಾಹನವನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಲಾಗಿದೆ. ಸ್ವಿಫ್ಟ್ ಕಾರಿನ ಮಾಲೀಕನಿಗಾಗಿ ಶೋಧ ಮುಂದುವರೆದಿದೆ.

Tags:

error: Content is protected !!