ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂಜಿನಿಯರಿಂಗ್ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಕಿತ್ತೂರು ಪಟ್ಟಣದಲ್ಲಿ ಬಹು ದಿನಗಳ ಬೇಡಿಕೆಯಾದ 100 ಹಾಸಿಗಳ ತಾಲೂಕ ಆಸ್ಪತ್ರೆ ನಿರ್ಮಾಣ ಕಾಮಗಾರಿಕೆಯನ್ನು ಇವತ್ತು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಹಾಗೂ ಕಿತ್ತೂರು ಕ್ಷೇತ್ರದ ಶಾಸಕರಾದ ಬಾಬಾಸಾಹೇಬ್ ಪಾಟೀಲ್ ಹಾಗೂ ಕಿತ್ತೂರಿನ ಕಾಂಗ್ರೆಸ್ ಮುಖಂಡರು ಸೇರಿಕೊಂಡು ಆಸ್ಪತ್ರೆಯ ನಿರ್ಮಾಣ ಕಾಮಗಾರಿಕೆಗೆ ಶಂಕುಸ್ಥಾಪನೆ ಮಾಡಲಾಯಿತು


ಇದೇ ಸಂದರ್ಭದಲ್ಲಿ ದಿನೇಶ್ ಗುಂಡೂರಾವ್ ಆರೋಗ್ಯ ಸಚಿವರು ಕಿತ್ತೂರು ಶಾಸಕರು ಬಾಬಾಸಾಹೇಬ್ ಪಾಟೀಲ್ ಹರ್ಷ ಗುಪ್ತ ಸರ್ಕಾರದ ಪ್ರಧಾನ ಕಾರ್ಯದರ್ಶಿಯಾದ ಆರೋಗ್ಯ ಇಲಾಖೆ ಬೆಂಗಳೂರು ಅವಿನಾಶ ಮೆನನ್ ರಾಜೇಂದ್ರನ ರಾಷ್ಟ್ರೀಯ ಆರೋಗ್ಯ ಅಭಿಯಾನ ಬೆಂಗಳೂರು ಬೈಲಹೊಂಗಲ ಟಿಎಚ್’ಓ ಸಂಜಯ್ ಸಿದ್ದಣ್ಣವರ ಡಿಸಿಸಿ ಬ್ಯಾಂಕ್ ನಿರ್ದೇಶಕ ನಾನಾಸಾಹೇಬ್ ಪಾಟೀಲ್ ಹಾಗೂ ಕಿತ್ತೂರು ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

ಈ ಸಂದರ್ಭದಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ ಕಿತ್ತೂರು ಕ್ಷೇತ್ರದಲ್ಲಿ ಈಗಾಗಲೇ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಡ ಕಾಮಗಾರಿಕೆಯನ್ನು ನಡೆಸಲಾಗುತ್ತಿತ್ತು ಆದರೆ ಅದು ಅವೈಜ್ಞಾನಿಕ ರೀತಿಯಲ್ಲಿ ನಡೆಯುತ್ತಿತ್ತು ಹಾಗೂ ಸೂಕ್ತವಲ್ಲದ ಸ್ಥಳದಲ್ಲಿ ನಿರ್ಮಾಣವಾಗುತ್ತಿತ್ತು ಹೀಗಾಗಿ ಆ ಕಾಮಗಾರಿಯನ್ನು ನಿಲ್ಲಿಸಿ ಬೇರೊಂದು ಸ್ಥಳದಲ್ಲಿ ಅಂದ್ರೆ ಜನರಿಗೆ ಅನುಕೂಲವಾಗಲೆಂದು ಪಟ್ಟಣದಲ್ಲಿ ನಿರ್ಮಿಸಲು ಸ್ಥಳಾವಕಾಶ ನೋಡಲಾಯಿತು ಅದೇ ರೀತಿ ಒಳ್ಳೆಯ ಸ್ಥಳಾವಕಾಶ ಸಿಕ್ಕಿದೆ ಹಾಗೂ ಕರ್ನಾಟಕದ ಪ್ರತಿಯೊಂದು ತಾಲೂಕು ಆಸ್ಪತ್ರೆಯಲ್ಲಿ ಎಲ್ಲಾ ಆರೋಗ್ಯ ಸೇವೆಗಳನ್ನು ಒದಗಿಸಲು ನಮ್ಮ ಸರ್ಕಾರ ಈಗಾಗಲೇ ತೀರ್ಮಾನ ಕೈಗೊಂಡಿದೆ ಕಿತ್ತೂರು ಕ್ಷೇತ್ರದಲ್ಲಿ ನಿರ್ಮಾಣವಾಗುತ್ತಿರುವ ಈ ಕಟ್ಟಡವನ್ನು 18 ತಿಂಗಳಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಹೇಳಿದ್ದರು ಈ ಆಸ್ಪತ್ರೆಗಾಗಿ 3 ಎಕರೆ 20 ಗುಂಟೆ ಜಾಗದಲ್ಲಿ ಒಳ್ಳೆಯ ರೀತಿಯಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು
ಇದೇ ಸಂದರ್ಭದಲ್ಲಿ ಬಾಬಾ ಸಾಹೇಬ್ ಪಾಟೀಲ್ ಮಾತನಾಡಿ ಕಿತೂರು ಕ್ಷೇತ್ರದ ಬಹುದಿನಗಳ ಬೇಡಿಕೆಯಾದ ತಾಲೂಕ ಆಸ್ಪತ್ರೆಯನ್ನು ಜನರಿಗೆ ಅನುಕೂಲವಾಗಲೆಂದು ಪಟ್ಟಣದಲ್ಲಿ ನಿರ್ಮಾಣವಾಗುತ್ತಿದೆ ಒಂದು ಒಳ್ಳೆಯ ಸಿಹಿ ಸುದ್ದಿ ಈ ಆಸ್ಪತ್ರೆಗಾಗಿ ಕಿತ್ತೂರು ಕ್ಷೇತ್ರದಲ್ಲಿ ದೊಡ್ಡ ಹೋರಾಟವೂ ಕೂಡ ನಡೆದಿತ್ತು ಆ ಹೋರಾಟದ ಪ್ರತಿಫಲ ಈಗ ತಾಲೂಕ ಆಸ್ಪತ್ರೆಯು ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವುದು ಮತ್ತೊಂದು ಹೆಮ್ಮೆಯ ವಿಷಯ ಎಂದು ತಿಳಿಸಿದರು.ಹಿಂದಿನ ಸರ್ಕಾರದಲ್ಲಿ ನಿರ್ಮಾಣವಾಗುತ್ತಿರುವಂತ ತಾಲೂಕ ಆಸ್ಪತ್ರೆಯೂ ಕಾಡು ಪ್ರಾಣಿಗಳು ಓಡಾಡುವಂತ ಸ್ಥಳದಲ್ಲಿ ನಿರ್ಮಾಣವಾಗುತ್ತಿತ್ತು. ಹೀಗಾಗಿ ಆ ಸ್ಥಳವನ್ನು ಬಿಟ್ಟು ಬೇರೊಂದು ಸ್ಥಳಕ್ಕೆ ಹಾಗೂ ಕಿತ್ತೂರು ಪಟ್ಟಣದಲ್ಲಿ ನಿರ್ಮಾಣವಾಗುತ್ತಿದೆ ಎಂದು ತಿಳಿಸಿದ್ದರು
