ಮರ್ಯಾದೆ ಹತ್ಯೆ ಪ್ರಕರಣ ಖಾಸಗಿ ಆಸ್ಪತ್ರೆಗೆ ಬಿಟಿನೀಡಿ ಘಟನೆಯಲ್ಲಿ ಗಾಯಗೊಂಡ ಕುಟುಂಬದವರ ಆರೋಗ್ಯವನ್ನು ಮಾಜಿ ಸಚಿವ
ರಮೇಶ್ ಜಾರಕಿಹೋಳಿ ಅವರು ವಿಚಾರಿಸಿದರು.

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಇಂತಹ ಕರಾಳ ಘಟನೆ ದಲಿತರ ಮೇಲೆ ದಾಳಿ ಆಗಿದೆ. ಅವರು ಬೇಗ ಕುಟುಂಬಸ್ಥರು ಗುಣಮುಖವಾಗಲಿ.ಪೊಲೀಸ್ ಇಲಾಖೆ ಸಹಾಯದಿಂದ ವಿವೇಕಾನಂದ ಕುಟುಂಬ ಬದುಕುಳಿದಿದೆ.ಆದರೆ ಜಿಲ್ಲಾಡಳಿತ ಬಗ್ಗೆ ಸಾಕಷ್ಟು ದೂರು ಕೇಳಿಬಂದಿವೆ ಈ ಬಗ್ಗೆ ಕ್ರಮ ಕೈಗೊಳ್ಳಲು ನಾನು ಸಂಬಂಧಿಸಿದ ಅಧಿಕಾರಿಗಳಿಗೆ ಗಮನಕ್ಕೆ ತರುತ್ತೆನೆ ಎಂದರು. ಈ ವಿಚಾರದಲ್ಲಿ ರಾಜಕೀಯ ಬೇಡ ಗಾಯಗೊಂಡಿರುವ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದ ಅವರು ವೈಯಕ್ತಿಕವಾಗಿ ಆರ್ಥಿಕ ಸಹಾಯ ಮಾಡುತ್ತೆನೆ ಹಾಗೂ ಸರ್ಕಾರದಿಂದ ಸಹ ಸಹಾಯ ಮಾಡಲು ಒತ್ತಾಯ ಮಾಡುವೆ ಎಂದು ತಿಳಿಸಿದರು.
