Dharwad

ಧಾರವಾಡದ ತಪೋವನದ ಕ್ಲಾಸಿಕ್ ಇಂಟರನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಫೂಡ್ ಫೆಸ್ಟ್….

Share

ಎತ್ತ ನೋಡಿದರತ್ತ ಬಾಯಲ್ಲಿ ನೀರೊರೆಸುವ ಖಾದ್ಯ.. ಚೈನೀಸ್, ಪಂಜಾಬಿ, ರಾಜಸ್ಥಾನಿ ಶೈಲಿ ಭಕ್ಷ್ಯಗಳ ಜೊತೆಗೆ ಭಾರತೀಯ ಸಂಸ್ಕೃತಿಯ ರೊಟ್ಟಿ, ಚಪಾತಿ, ಪಲಾವು ಸೇರಿದಂತೆ ವಿವಿಧ ತರಹದ ಪಲ್ಯ ನೋಡುಗರ ಬಾಯಲ್ಲಿ ನೀರು ತರಿಸಿದವು. ಶನಿವಾರ ನಡೆದ ಈ ಫುಡ್ ಫೆಸ್ಟ್ ಕುರಿತು ಒಂದು ಚಿಕ್ಕ ವರದಿ ಇಲ್ಲಿದೆ ನೋಡಿ.

ವೈ- ಎಸ್ ಇದು ಧಾರವಾಡದ ತಪೋವನ ಬಳಿ ಇರುವ ಕ್ಲಾಸಿಕ್ ಇಂಟರನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಏರ್ಪಡಿಸಿದ್ದ ಫುಡ್ ಫೆಸ್ಟ್‌ನಲ್ಲಿ ಕಂಡು ಬಂದ ದೃಶ್ಯ. ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲೂ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕು ಎಂದು ಕ್ಲಾಸಿಕ್ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಕಳೆದ ಎರಡು ದಿನಗಳಿಂದ ವಿವಿಧ ಕಾರ್ಯಕ್ರಮ ಆಯೋಜಿಸಿದೆ. ಮೊದಲ ದಿನ ವಿಜ್ಞಾನ ಮಾದರಿಗಳ ವಸ್ತು ಪ್ರದರ್ಶನ ನಡೆಸಿದರೆ ಎರಡನೇ ದಿನ ಫುಡ್ ಫೆಸ್ಟ್ ನಡೆಸುವ ಮೂಲಕ ಮಕ್ಕಳಲ್ಲಿ ಹಣಕಾಸಿನ ಜ್ಞಾನದ ಜೊತೆಗೆ ಆಹಾರದ ಮಹತ್ವವನ್ನೂ ತಿಳಿಸುವ ಪ್ರಯತ್ನ ಮಾಡಿತು. ಫುಡ್ ಫೆಸ್ಟ್‌ನಲ್ಲಿ ಮಕ್ಕಳು ಬಗೆ ಬಗೆಯ ಖಾದ್ಯಗಳನ್ನು ಸಿದ್ಧಪಡಿಸಿಕೊಂಡು ಬಂದಿದ್ದರು.

ಮಕ್ಕಳಿಗೆ ಅವರ ತಾಯಂದಿರು ಕೂಡ ನೆರವಾಗಿದ್ದರು. ಗೋಬಿ ಮಂಚೂರಿ, ಪಾನಿಪುರಿ, ಇಟಾಲಿಯನ್ ಫುಡ್, ಸಿಹಿ ಖಾದ್ಯ ಸೇರಿದಂತೆ ಇತರ ಆಹಾರದ ಜೊತೆಗೆ ನಮ್ಮ ಉತ್ತರ ಕರ್ನಾಟಕದ ಖಡಕ್ ಜೋಳದ ರೊಟ್ಟಿ, ಎಣಗಾಯಿ ಪಲ್ಯ, ಮಸಾಲಾ ರೈಸ್, ಪಲಾವು ಸೇರಿದಂತೆ ಇತ್ಯಾದಿ ಖಾದ್ಯಗಳು ಬಾಯಿ ಚಪ್ಪರಿಸಿ ತಿನ್ನುವಂತೆ ಮಾಡಿದವು. ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್.ಪಾಟೀಲ ಸೇರಿದಂತೆ ಇತರ ಗಣ್ಯರು ಫುಡ್‌ ಫೆಸ್ಟ್ ಉದ್ಘಾಟಿಸಿ ಒಂದು ಸುತ್ತು ಹಾದು ಬಂದರು. ಅಲ್ಲದೇ ಅವರೂ ಸಹ ಬಗೆ ಬಗೆಯ ಖಾದ್ಯಗಳ ರುಚಿ ಕೂಡ ಸವಿದರು. ಒಟ್ಟಾರೆ ಕ್ಲಾಸಿಕ್ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಡೆಸಿದ ಈ ಫುಡ್ ಫೆಸ್ಟ್ ಎಲ್ಲರ ಗಮನಸೆಳೆಯುವಲ್ಲಿ‌ ಯಶಸ್ವಿಯಾಯಿತು.

Tags:

error: Content is protected !!