ಅಗ್ನಿವೀರ ಯೋಜನೆಯ ಬಗೆಗೆ ತಪ್ಪು ಕಲ್ಪನೆಗಳನ್ನು ಇಟ್ಟುಕೊಂಡ ಜನರ ನಡುವೆ ಲಕ್ಷಾಂತರ ಯುವಕರು ಇವತ್ತು ಅಗ್ನಿವೀರ ಯೋಜನೆಯಲ್ಲಿ ಅಗ್ನಿವೀರರಾಗಿ ದೇಶ ಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ. ದೇಶ ಸೇವೆಗಾಗಿ ತಾವು ಮುಂದು ಬಂದಿದ್ದು ದೇಶ ಸೇವೆ ಮಾಡಲು ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಹಾಗೂ ಹೆತ್ತ ತಂದೆ ತಾಯಿಗಳಿಗೆ ತಮ್ಮ ಗ್ರಾಮಕ್ಕೆ, ಜಿಲ್ಲೆ, ರಾಜ್ಯಕ್ಕೆ ಇಡೀ ದೇಶಕ್ಕೆ ಹೆಮ್ಮೆ ತರುವಂತಹ ಸೈನಿಕರು ನೀವಾಗಿ ಎಂದು ಸತ್ಕಾರ ಸಮಾರಂಭವನ್ನು ಉದ್ದೇಶಿಸಿ ಮಹಾಒಕ್ಕೂಟದ ಜಿಲ್ಲಾಧ್ಯಕ್ಷ ಜಗದೀಶ ಪೂಜೇರಿ ಮಾತನಾಡಿದರು.


ಇವತ್ತು ಬೆಳಗಾವಿ ಜಿಲ್ಲೆ ಮಾಜಿ ಸೈನಿಕರ ಸಂಘಟನೆಗಳ ಮಹಾಒಕ್ಕೂಟದ ವತಿಯಿಂದ ಇತ್ತೀಚಿಗೆ ಭಾರತೀಯ ಸೇನೆಗೆ ಆಯ್ಕೆಯಾದಂತಹ ಅಗ್ನಿವೀರರಿಗೆ ಸತ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಗೌರವಾಧ್ಯಕ್ಷರಾದ ರಮೇಶ ಚೌಗಲಾ, ವಿಕಾಸ ಜಂಗಳಿ ಮಹೇಶ ಕಮ್ಮಾರ ಮಾತನಾಡಿ ಯುವ ಸೈನಿಕರಿಗೆ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ಮಾಡಿದರು. ಕಾರ್ಯಕ್ರಮದಲ್ಲಿ ಮಹಾಒಕ್ಕೂಟದ ಅಧ್ಯಕ್ಷರಾದ ಜಗದೀಶ ಪೂಜೇರಿ, ಗೌರವಾಧ್ಯಕ್ಷರಾದ ರಮೇಶ ಚೌಗಲಾ, ಉಪಾಧ್ಯಕ್ಷರಾದ ಸಂಗಪ್ಪ ಮೇಟಿ, ಸಹ ಕಾರ್ಯದರ್ಶಿ ಸಂತೋಷ ಮಠಪತಿ, ಜಂಟಿ ಕಾರ್ಯದರ್ಶಿಗಳಾದ ಮಡಿವಾಳಪ್ಪ ಕಲಬಾವಿ, ಮಹೇಶ್ ಕಮ್ಮಾರ, ಗೋಕಾಕ ತಾಲೂಕು ಘಟಕದ ಅಧ್ಯಕ್ಷರಾದ ಫಕೀರಪ್ಪ ಗೌಡರ, ಮಮದಾಪುರ, ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಬಸಪ್ಪ ಬರಬಳ್ಳಿ, ರಾಮತೀರ್ಥ ನಗರ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ರಾಜೇಂದ್ರ ಹಾಲಗಿ, ಪ್ರಾದೇಶಿಕ ಸೇನಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ವಿಕಾಸ ಜಂಗಳಿ, ಹಿರಿಯರಾದ ಅಶೋಕ ಮಜಗಿ, ರಾಮಚಂದ್ರ ಸುತಾರ, ಭೀಮರಾಯ ಬಡಿಗೇರ, ಕೆಂಪಯ್ಯ ನೆಪೇರಿಮಠ, ಮಹಿಳಾ ಘಟಕದ ಅಧ್ಯಕ್ಷೆ ಸುನೀತಾ ಪಟ್ಟಣಶೆಟ್ಟಿ ಅಗ್ನಿವೀರರಾಗಿ ಆಯ್ಕೆಯಾದ ಜಿಲ್ಲೆಯ ಕಿತ್ತೂರು ಖಾನಾಪುರ, ಇಟಗಿ, ಹುಲಿಕವಿ, ತೋಲಗಿ, ಬಸವನ ಕುಡಚಿ, ನಂದಿಹಳ್ಳಿ ಗ್ರಾಮದ ಹಲವಾರು ಯುವಕರು ಪಾಲ್ಗೊಂಡಿದ್ದರು.
