Bailahongala

ಜಿಲ್ಲಾ ವಿಭಜನೆಯಾದರೇ ಮೊದಲೂ ಬೈಲಹೊಂಗಲಕ್ಕೆ ಆದ್ಯತೆ ನೀಡಿ…

Share

ಬೆಳಗಾವಿ ಜಿಲ್ಲೆಯನ್ನು ವಿಭಜಿಸುವುದಾದರೇ, ಬೈಲಹೊಂಗಲಕ್ಕೆ ಜಿಲ್ಲೆಯ ಸ್ಥಾನವನ್ನು ನೀಡಲೂ ಮೊದಲೂ ಆದ್ಯತೆ ನೀಡಬೇಕೆಂದು ಆಗ್ರಹಿಸಿ ಇಂದು ಬೈಲಹೊಂಗಲ್ ಪಟ್ಟಣವನ್ನು ಬಂದ್ ಮಾಡಿ ಪ್ರತಿಭಟನೆಯನ್ನು ನಡೆಸಲಾಯಿತು.

ಬೈಲಹೊಂಗಲ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ನಾಗರಿಕರು ಮತ್ತು ಯುವಕರು ಭಾರಿ ಸಂಖ್ಯೆಯಲ್ಲಿ ಜಮಾವಣೆಗೊಂಡು ಘೋಷಣೆಗಳನ್ನು ಕೂಗಿ ಪ್ರತಿಭಟನೆಯನ್ನು ನಡೆಸಿದರು. ಈ ಕುರಿತಾದ ಮನವಿಯನ್ನು ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.

ಈ ವೇಳೆ ಇನ್ ನ್ಯೂಸ್’ನೊಂದಿಗೆ ಮಾತನಾಡಿದ ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ್ ಅವರು, ಆಡಳಿತದ ಹಿತದೃಷ್ಠಿಯಿಂದ ಬೈಲಹೊಂಗಲವನ್ನು ಜಿಲ್ಲೆಯನ್ನಾಗಿಸಬೇಕು. ಬ್ರಿಷರ ಕಾಲದಿಂದಲೂ ಬೈಲಹೊಂಗಲ ಜಿಲ್ಲೆಗೆ ಗುರಿಯಿತ್ತು. ಬೇರೆಯವರಿಗೆ ಜಿಲ್ಲೆ ಸ್ಥಾನ ನೀಡಬಾರದೆಂಬ ಭಾವನೆ ನಮ್ಮದಲ್ಲ. ಆದರೇ, ನಮಗೂ ಜಿಲ್ಲೆಯ ಸ್ಥಾನ ನೀಡಿ. ಬೆಳಗಾವಿ ಜಿಲ್ಲೆ ದೊಡ್ಡ ಜಿಲ್ಲೆಯಾಗಿದ್ದು, ಹೊಸ 4 ಜಿಲ್ಲೆಗಳನ್ನು ರಚಿಸಿದರೂ ಯಾವುದೇ ತೊಂದರೆಯಾಗಲ್ಲ. ಈ ರೀತಿ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದು, ಈ ಬಾರಿಯೂ ಮಾತನಾಡುವುದು ಎಂದರು.

ಇನ್ನು ಶಂಕರ್ ಮಾಡಲಗಿ ಅವರು 30 ವರ್ಷಗಳಿಂದ ಜಿಲ್ಲಾ ಕೇಂದ್ರಕ್ಕಾಗಿ ಹೋರಾಟ ನಡೆಸಲಾಗುತ್ತಿದೆ. ಪ್ರತಿ ಅಧಿವೇಶನದ ವೇಳೆ ಸರ್ಕಾರಗಳು ತಮ್ಮನ್ನು ಚರ್ಚೆಗೆ ಕರೆಯುವುದಾಗಿ ತಿಳಿಸುತ್ತಾರೆ. ಒಂದು ವೇಳೆ ಬೆಳಗಾವಿ ವಿಭಜನೆ ಮಾಡುವುದೇ ಆದರೇ, ಮೊದಲೂ ಬೈಲಹೊಂಗಲನ್ನು ಪ್ರತ್ಯೇಕ ಜಿಲ್ಲೆಯನ್ನಾಗಿಸಲಿ ಎಂದರು.

ಬೈಲಹೊಂಗಲ್ ಜಿಲ್ಲೆಯನ್ನಾಗಿ ಘೋಷಿಸಲೇಬೇಕೆಂದು ಪಟ್ಟಣವನ್ನು ಬಂದ್ ಮಾಡಿ ಪ್ರತಿಭಟಿಸಲಾಗುತ್ತಿದೆ. ಎಲ್ಲರೂ ತಮ್ಮ ದೈನಂದಿನ ವ್ಯವಹಾರಗಳನ್ನು ಬಂದ್ ಮಾಡಿ ಬಂದ್’ಗೆ ಬೆಂಬಲ ಸೂಚಿಸಿದ್ದಾರೆ. ಬೈಲಹೊಂಗಲ ಉಪವಿಭಾಗವಾಗಿದ್ದು, ತನ್ನದೇಯಾದ ಇತಿಹಾಸವನ್ನು ಹೊಂದಿದೆ. ಸವದತ್ತಿ, ಗೋಕಾಕ್, ರಾಮದುರ್ಗ ಇನ್ನುಳಿದವ ತಾಲೂಕುಗಳಿಗೆ ಕೇಂದ್ರಬಿಂದುವಾಗಿದ್ದು, ಆಡಳಿತ ದೃಷ್ಟಿಯಿಂದ ಇದನ್ನು ಜಿಲ್ಲೆಯನ್ನಾಗಿಸಬೇಕು. ಸಿಎಂ ಅವರನ್ನ ಅಧಿವೇಶನದ ಕಾಲದಲ್ಲಿ ಮತ್ತೋಮ್ಮೆ ಭೇಟಿಯಾಗಿ ಮನವಿ ಮಾಡುತ್ತೇವೆ ಎಂದು ಶಿವರಂಜನ್ ಬೊಳನ್ನವರ ಹೇಳಿದರು.

ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು, ವಿವಿಧ ಸಂಘಗಳ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಭಾಗಿಯಾಗಿದ್ಧರು.

Tags:

error: Content is protected !!