Kagawad

ಕಾಗವಾಡದ ಗುರುದೇವ ಆಶ್ರಮದಲ್ಲಿ ಎಂಟು ದಿನ ಗುರು ಸ್ಮರಣೋತ್ಸವ ಕಾರ್ಯಕ್ರಮ

Share

ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮೀಜಿ ಹಾಗೂ ಮಾತಪಸ್ವಿ ಸಿದ್ದೇಶ್ವರ ಮಹಾ ಸ್ವಾಮೀಜಿ ಇವರನ್ನು ಸ್ಮರಿಸುವ ಗುರು ಸ್ಮರಣೋತ್ಸವ ಕಾರ್ಯಕ್ರಮ ಕಾಗವಾಡದ ಗುರುದೇವ್ ಆಶ್ರಮದಲ್ಲಿ ಗುರುವಾರ ದಿನಾಂಕ 25 ರಿಂದ ಜನವರಿ 1ರ ವರಿಗೆ ವಿವಿಧ ಕಾರ್ಯಕ್ರಮಗಳಿಂದ ಜರುಗಲಿದೆ, ಎಂದು ಕೊಲ್ಲಾಪುರ ಕನೇರಿ ಮಠದ
ಬಸವರಾಜದೇವರು ಕಾಗವಾಡದಲ್ಲಿ ಹೇಳಿದರು.

ಗುರುವಾರ ರಂದು ಕಾಗವಾಡದ ಗುರುದೇವ ಆಶ್ರಮದಲ್ಲಿ ಗುರು ಸ್ಮರಣೋತ್ಸವ ಬಗ್ಗೆ ವಿವರವಾದ ಮಾಹಿತಿ ನೀಡುವಾಗ ಸದಲಗಾ ಗೀತಾಶ್ರಮದ ಡಾಕ್ಟರ ರದ್ದಾನಂದ ಸ್ವಾಮೀಜಿ ಇವರು ಪ್ರವಚನ ನೀಡಲಿದ್ದಾರೆ,

ಶುಕ್ರವಾರ ರಂದು ಕೊಡೆಕಲ ಬೂದಿಹಾಳ ಮಠದ ಗಾಂಗೆಯುಷಿತ ಸ್ವಾಮೀಜಿ ಇವರು ಪ್ರವಚನ ನೀಡಲಿದ್ದಾರೆ,

ಅತ್ತಿಗೇರಿ ಮಠದ ಅಧ್ಯಾತ್ಮಂದ ಸ್ವಾಮೀಜಿ, ಇವರು ಪ್ರವಚನ ನೀಡಲಿದ್ದಾರೆ,

ಪೂರ್ಮಾನಂದ ತಪಸಿ ಆಶ್ರಮದ ಪರಮಪೂಜ್ಯ ಮಾತೋಶ್ರೀ
ಜ್ಞಾನಾತ್ಮತಾಯಿ, ಇವರು ಪ್ರವಚನ ನೀಡಲಿದ್ದಾರೆ,

ಮಂಗಳವಾರ ರಂದು ವಿರಕ್ತಮಠ ಬಿಳೂರದ ರಾಜ ಯೋಗಿ ಗುರುಚನಬಸವ ಮಹಾಸ್ವಾಮಿಜಿಗಳು ಪ್ರವಚನ ನೀಡಲಿದ್ದಾರೆ.
ಬುಧವಾರ ದಿನಾಂಕ 31ರಂದು ಜ್ಞಾನ ಯೋಗ ಆಶ್ರಮ ಲಕ್ಷಾನಟ್ಟಿ ಶಿವಾನಂದ ಮಹಾಸ್ವಾಮೀಜಿ ಇವರು ಪ್ರವಚನ ನೀಡಲಿದ್ದಾರೆ.
ಜನವರಿ ಒಂದರಂದು ಹಳೆ ಹುಬ್ಬಳ್ಳಿ ನೀಲಕಂಠ ಮಠದ ಶ್ರೀ ಶ್ರೀ 1008 ಶ್ರೀ ಮಾನ ಜಗದ್ಗುರು ಶಿವಶಂಕರ್ ಶಿವಾಚಾರ್ಯ ಮಹಾಸ್ವಾಮಿಗಳು ಇವರು ಸಾನಿಧ್ಯ ವೈಸಿ ಆಶೀರ್ವಚನ ನೀಡಲಿದ್ದಾರೆ.

ಬೇರೆ ಬೇರೆ ಮಠಗಳ ಮಹಾಸ್ವಾಮೀಜಿಗಳು ಒಂದುಗೂಡಿ ಗುರು ಸ್ಮರಣೋಸ್ತವ ನಿಮಿತ್ಯ ಪ್ರವಚನ ನೀಡಲಿದ್ದಾರೆ ಇದರ ಸದುಪಯೋಗ ಎಲ್ಲ ಸದ್ಭಕ್ತರು ಪಡೆದುಕೊಳ್ಳಬೇಕೆಂದು ಬಸವರಾಜದೇವರು ಸ್ವಾಮೀಜಿ ಕರೆ ನೀಡಿದ್ದಾರೆ.

ಶಿವಾನಂದ ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಶ್ರೀ ಗುರುದೇವ ಆಶ್ರಮದ ಸದ್ಭಕ್ತರಾದ ಜೆ ಕೆ ಪಾಟೀಲ ಇವರು ಮಾಹಿತಿ ನೀಡುವಾಗ ಗುರುದೇವ ಆಶ್ರಮದಲ್ಲಿ ಗುರುವಾರ ದಿನಾಂಕ 1 ರಂದು
ಗುರು ಸ್ಮರಣೋಸ್ತವ ನಿಮಿತ್ಯ ಜಪ ಯಜ್ಞ ಹಾಗೂ ಆಶೀರ್ವಚನ ಕಾರ್ಯಕ್ರಮ ನೆರವಿರಲಿದೆ.

ಶುಕ್ರವಾರ ದಿನಾಂಕ 2 ರಂದು ಬೆಳಗ್ಗೆ ಶ್ರೀ ಮಲ್ಲಿಕಾರ್ಜುನ್ ಮಹಾಸ್ವಾಮೀಜಿಗಳ ಪಾದುಕುಗಳ ಮಹಾಪೂಜೆ ಕಣೆರಿ ಮಠದ ಅದೃಶ್ಯ ಕಾಣಸಿದ್ದೇಶ್ವರ ಮಹಾ ಸ್ವಾಮೀಜಿಗಳ ಸಾನಿಧ್ಯದಲ್ಲಿ ಜರುಗಲಿದೆ.

ಅದೇ ದಿನ ಶುಕ್ರವಾರ ಬೆಳಗ್ಗೆಯಿಂದ ಸಂಜೆವರೆಗೆ ಅಂಕಲಿಯ ಡಾ ಮಗದುಮ್ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷಧ ವಿತರಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ಬೇರೆ ಬೇರೆ ಕಾಯಿಲೆಗಳ ಬಗ್ಗೆ ತಪಾಸಣೆ ಹಾಗೂ ಉಪಚಾರ ವ್ಯವಸ್ಥೆ ನೀಡಲಾಗುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಆಹ್ವಾನಿಸಿದ್ದಾರೆ.

ಗುರು ಸ್ಮರಣೋತ್ಸವ ನಿಮಿತ್ಯವಾಗಿ ಕಾಗವಾಡದಲ್ಲಿ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮಕ್ಕಾಗಿ ಸ್ಥಳೀಯ ಬೇರೆ ಬೇರೆ ಸಂಘಟನೆಗಳು, ಧರ್ಮ ಪ್ರೇಮಿಗಳು ಕಾರ್ಯಕ್ರಮ ಎಷ್ಟು ಗಳಿಸಲು ಮುಂದಾಗಿದ್ದಾರೆ.

Tags:

error: Content is protected !!