ಮಕ್ಕಳಲ್ಲಿ ಓದಿನ ಜೊತೆಗೆ ರಾಷ್ಟ್ರಪ್ರೀತಿಯನ್ನೂ ಬೆಳೆಸಿದಾಗ ಅಂತಹ ಶಿಕ್ಷಣ ಸಾರ್ಥಕವೆನಿಸುತ್ತದೆ. ಸಂತಮೀರಾ ಶಾಲೆಯ ಶಿಕ್ಷಣದಲ್ಲಿ ಭಾರತೀಯತೆ, ಸಂಸ್ಕೃತಿ, ಕಲೆಗಳನ್ನು ಕಾಣಲು ಸಾಧ್ಯ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಲೀಲಾವತಿ ಹಿರೇಮಠ ಹೇಳಿದ್ದಾರೆ.


ಆನಗೋಳದ ಜನಕಲ್ಯಾಣ ಟ್ರಸ್ಟ್‌ನ ಸಂತ ಮೀರಾ ಇಂಗ್ಲಿಷ್ ಮೀಡಿಯಂ ಶಾಲೆ ವಾರ್ಷಿಕೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಶಿಕ್ಷಣ ಸಂಸ್ಥೆಗಳು ಕೇವಲ ಓದಿಗಷ್ಟೇ ಮಕ್ಕಳನ್ನು ಸೀಮಿತಗೊಳಿಸದೆ ಸರ್ವಾಂಗೀಣ ವಿಕಸನದ ಕಡೆಗೆ ಗಮನಹರಿಸಬೇಕು. ಸಂತಮೀರಾ ಶಾಲೆ ಆ ದಿಸೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಶಿಕ್ಷಣವನ್ನು ಬಿಸಿನೆಸ್ ಎನ್ನುವ ರೀತಿಯಲ್ಲಿ ನೋಡುತ್ತಿಲ್ಲ. ಇಲಾಖೆಯೊಂದಿಗೂ ಶಾಲೆ ಉತ್ತಮ ಸಮನ್ವಯ ಹೊಂದಿದೆ. ಎಂದೂ ಶಾಲೆಯ ಕುರಿತು ದೂರುಗಳು ಬಂದಿಲ್ಲ ಎಂದು ಅವರು ಹೇಳಿದರು.
ಉದ್ಯಮಿ ಶ್ರೀಧರ ಉಪ್ಪಿನ್ ಮಾತನಾಡಿ, ರಾಷ್ಟ್ರದ ಭವಿಷ್ಯ ಮಕ್ಕಳಲ್ಲಿ ಅಡಗಿದೆ. ಹಾಗಾಗಿ ಉತ್ತಮ ಶಿಕ್ಷಣದೊಂದಿಗೆ ಬೆಳೆಸಿದಾಗ ರಾಷ್ಟ್ರದ ಭವಿಷ್ಯವೂ ಉತ್ತಮವಾಗುತ್ತದೆ. ಅಂತಹ ಕೆಲಸವನ್ನು ಸಂತಮೀರಾ ಶಾಲೆ ಮಾಡುತ್ತಿದೆ ಎಂದರು.

ಶಾಲೆಯ ಅಧ್ಯಕ್ಷ ಪರಮೇಶ್ವರ ಹೆಗಡೆ ಸ್ವಾಗತಿಸಿದರು. ಉಪಮೇಯರ್ ವಾಣಿ ಜೋಶಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯೆ ಸುಜಾತಾ ದಪ್ತಾರದಾರ ವರದಿ ಓದಿದರು. ವಿದ್ಯಾರ್ಥಿಗಳಿಂದ ನೃತ್ಯ, ಗೀತಾಗಾನ, ನಾಟಕ ಹಾಗೂ ದೇಶಭಕ್ತಿ ಗೀತೆ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಆಡಳಿತ ಮಂಡಳಿಯ ಸದಸ್ಯರು, ಶಾಲೆಯ ನಿರ್ವಹಣಾಧಿಕಾರಿ ಆರ್.ಕೆ. ಕುಲಕರ್ಣಿ, ಸಹ ಮುಖ್ಯೋಪಾಧ್ಯಾಯಿನಿ ಋತುಜಾ ಜಾಧವ, ಶಾಲೆಯ ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.
