ಶತಮಾನ ಕಂಡಿರುವ ಪಟ್ಟಣದ ಚಿಕ್ಕೋಡಿ ತಾಲ್ಲೂಕು ಶಿಕ್ಷಣ ಸಂಸ್ಥೆಯ ಸರ್ಕಾರಿ ಅನುದಾನಿತ ಆರ್. ಡಿ. ಪದವಿಪೂರ್ವ ಮಹಾವಿದ್ಯಾಲಯದ ಹಿರಿಯ ಉಪನ್ಯಾಸಕ ಎ.ಎ. ಕಾಂಬಳೆ ಅವರಿಗೆ ಪ್ರಾಚಾರ್ಯರಾಗಿ ಪದೋನ್ನತಿ ನೀಡಿ, ಕೆಲವೇ ದಿನಗಳ ನಂತರ ಹಿಂಬಡ್ತಿ ನೀಡಲಾಗಿದೆ’ ಎಂದು ಚಿಕ್ಕೋಡಿ ತಾಲ್ಲೂಕು ಅಂಬೇಡ್ಕರ್ ಜನಜಾಗೃತಿ ವೇದಿಕೆಯ ಅಧ್ಯಕ್ಷ ರಾವಸಾಹೇಬ ಫಕೀರೆ, ಮುಖಂಡ ಅಪ್ಪಾಸಾಹೇಬ ಬ್ಯಾಳಿ ಆರೋಪಿಸಿದರು.

ಚಿಕ್ಕೋಡಿ ಪಟ್ಟಣದಲ್ಲಿ ಸುದ್ದಿಗೋಷ್ಠಿಯ ಮಾತನಾಡಿ, ‘ಕಾಂಬಳೆ ಅವರಿಗೆ 2018ರಲ್ಲಿ ಪ್ರಾಚಾರ್ಯರಾಗಿ ಮುಂಬಡ್ತಿ ನೀಡಿ, ಯಾವುದೇ ನೋಟಿಸ್ ನೀಡದೆ ಆಡಳಿತ ಮಂಡಳಿ 2023ರಲ್ಲಿ ಹಿಂಬಡ್ತಿ ನೀಡುವ ಮೂಲಕ ದಲಿತ ವ್ಯಕ್ತಿಗೆ ಅನ್ಯಾಯ ಮಾಡಿದೆ’ಎಂದು ಕಿಡಿಕಾರಿದರು.ಕಾಂಬಳೆ ಅವರಿಗೆ ಮೂರು ತಿಂಗಳೊಳಗೆ ಚಿಕ್ಕೋಡಿ ತಾಲ್ಲೂಕು ಶಿಕ್ಷಣ ಸಂಸ್ಥೆ ನ್ಯಾಯ ಒದಗಿಸಬೇಕು. ಇಲ್ಲದಿ-
ದ್ದಲ್ಲಿ ವಿರುದ್ಧ ಪ್ರತಿಭಟನೆ ಮಾಡಲಾಗುವುದು’ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸುದರ್ಶನ ತಮ್ಮಣ್ಣವರ, ಮಹಾದೇವ ಮುನ್ನೋಳಿಕರ, ನಿರಂಜನ ಕಾಂಬಳೆ, ವಿದ್ಯಾಧರ ಚಿತಳೆ, ನಂದಕುಮಾರ ದರಬಾರೆ, ಭಜರಂಗ ಅಮ್ಮಣಗಿ, ಅಶೋಕ ಮಾಳಗೆ, ಮಾರುತಿ ಕಾಂಬಳೆ, ಮನೋಹರ ಬಾಳನಾಯಕ, ಭೀಮರಾವ ನಾಡಕರ್ಣಿ, ಮನೋಹರ ಮಾಳಕರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
