BELAGAVI

ಹೂಲಿಕಟ್ಟಿಯಲ್ಲಿನ ಕ್ರಷರ್ ಬಂದ್ ಮಾಡಿಸಿ..

Share

ಗೋಕಾಕ್ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿರುವ ಕ್ರಷರ್ ಕಾರ್ಖಾನೆಯಿಂದ ಬೆಳೆಗಳು ಮತ್ತು ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಕೂಡಲೇ ಕ್ರಷರ್ ಬಂದ್ ಮಾಡಬೇಕು ಮತ್ತು ಕಬ್ಬಿನ ಬಾಕಿ ದರ ಪಾವತಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಬೆಳಗಾವಿಯ ಜಿಲ್ಲಾಧಿಕಾರಿಯ ಕಛೇರಿ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಂಡು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು. ನಂತರ ಮಾಧ್ಯಮದೊಂದಿಗೆ ಮಾತನಾಡಿದ ರೈತ ಸಂಘದ ಅಧ್ಯಕ್ಷ ಈ ಕ್ರಷರ್ ಮಿಷನ್ ದಿಂದ ಅಲ್ಲಿರುವಂತಹ ರೈತರ ಜೀವನ ಹಾಳು ಆಗುತ್ತಾ ಇದೆ ಅದಕ್ಕಾಗಿ ಕೂಡಲೇ ಅದನ್ನು ಒಂದು ವಾರದಲ್ಲಿ ಜಿಲ್ಲಾಧಿಕಾರಿಗಳು ಬಂದ್ ಮಾಡಬೇಕು ಇಲ್ಲವಾದಲ್ಲಿ ನಾವೇ ಅದನ್ನು ಬಂದ್ ಮಾಡಿಸುತ್ತೇವೆ. ಅದಕ್ಕೆ ಅನುಮೋದನೆಯನ್ನು ಕೊಟ್ಟಂತಹ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಹೋರಾಟಕ್ಕೆ ಇಳಿಯುತ್ತೇವೆ. ಎಂದು ಹೇಳಿದರು.

ನಂತರ ಕಬ್ಬಿನ ಬೆಳೆ ಬೆಲೆಯ ವಿಷಯವಾಗಿ ಮಾತನಾಡಿದ ಅವರು ಕಳೆದ ದಿನಗಳಲ್ಲಿ ನಿಗದಿತ ಬೆಲೆಗಾಗಿ ರೈತರು ರಾಜ್ಯಾದ್ಯಂತ ಹೋರಾಟ ಮಾಡಿದರು. ನಮಗೆ 3500 ರೂಪಾಯಿ ಇನ್ನೂ ವರೆಗೆ ನಮ್ಮ ಬೇಡಿಕೆ ಇದೆ. ಅದಕ್ಕೆ ಸರ್ಕಾರ ಮಧ್ಯಸ್ಥಿಕೆ ವಹಿಸಿ 3300 ರೂಪಾಯಿ ಮಾಡಿದೆ. ಆದರೆ ಸರ್ಕಾರ ನಿಗದಿ ಪಡಿಸಿದಂತಹ ಬೆಲೆಯನ್ನು ಕೆಲವು ಕಾರ್ಖಾನೆಗಳು ನೀಡುತ್ತಿಲ್ಲ ಸರ್ಕಾರ 3300 ಘೋಷಣೆ ಮಾಡಿದ್ದರೂ 3200 ರೂಪಾಯಿ ಕೊಡ್ತಾ ಇದ್ದಾರೆ. ಮಾನ್ಯ ಜಿಲ್ಲಾಧಿಕಾರಿಗಳು ಹೋರಾಟದಲ್ಲಿ ಭಾಗವಹಿಸಿ ಹೇಗೆ ಬಗೆಹರಿಸಿದಿರೋ ಹಾಗೆಯೇ ಇದರಲ್ಲಿ ಮಧ್ಯಸ್ಥಿಕೆವಹಿಸಿ ಬಗೆಹರಿಸಬೇಕು ಇಲ್ಲವಾದರೆ ಮೊದಲ ಎಲ್ಲಿಗೆ ಬಂದಿದ್ದಿರೋ ಅಲ್ಲಿಗೆ ಮರಳಿ ಬರುವಂತೆ ಆಗುತ್ತೆ. ಎಂದು ಹೇಳಿದರು.
.

Tags:

error: Content is protected !!