BELAGAVI

ಮುಚ್ಚಿ ಹೋದ ಕೊಲೆ ಪ್ರಕರಣ ತಾಯಿಯ ಹೇಳಿಕೆ ಪಡೆದು ಬಯಲಿಗೆಳೆದ ಸಿಪಿಐ ಜಾವೀದ್ ಮುಶಾಪುರೆ

Share

ಮುಚ್ಚಿ ಹೋದ ಕೊಲೆ ಪ್ರಕರಣವನ್ನು ತಾಯಿಯ ಹೇಳಿಕೆ ಪಡೆದು ಬಯಲಿಗೆಳೆಯುವಲ್ಲಿ ಯಮಕನಮರ್ಡಿ ಸಿಪಿಐ ಜಾವೀದ್ ಮುಶಾಪುರೆ ಅವರ ತಂಡ ಯಶಸ್ವಿಯಾಗಿದೆ.

ಯಮಕನಮರ್ಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಸ್ಸಾಪೂರ ಗ್ರಾಮದ ಸಿದ್ಪಪ್ಪಾ ವಿಠ್ಠಲ ರಾಮಾಪುರೆ, ಮತ್ತು ಬಸಲಿಂಗ ವಿಠ್ಠಲ ರಾಮಾಪುರೆ ಇವರಿಬ್ಬರೂ ಅಣ್ಣತಮ್ಮಂದಿದರಾಗಿದ್ದು, ಇಬ್ಬರ ಪಾಲಿಗೆ 4 ಎಕರೆ ಜಮೀನಿದೆ. ಇದರಲ್ಲಿ ಪಾಲು ನೀಡುವಂತೆ ತಮ್ಮ ಬಸಲಿಂಗ ಸರಾಯಿ ಕುಡಿದು ಬಂದು ಅಣ್ಣ ಸಿದ್ದಪ್ಪಾ ದನ ಕಟ್ಟಲು ಬರಬಾರದೆಂದು ಹಾರಿಯಿಂದ ದನ ಕಟ್ಟುವ ಹಕ್ಕಿಯಲ್ಲಿ ನೆಲದ ಮೇಲೆ ಹಾಕಿದ ಕಲ್ಲುಗಳನ್ನು ಕೀಳುತ್ತಿದ್ದ. ಈ ಸಪ್ಪಳ ಕೇಳಿ ಸಿದ್ದಪ್ಪ ಅಲ್ಲಿಗೆ ಬಂದಾಗ ತಮ್ಮ ಬಸಲಿಂಗಪ್ಪ ಪಾಲಿಗಾಗಿ ಮತ್ತೇ ಜಗಳವಾಡುತ್ತಾನೆ. ಆಗ ಅಣ್ಣ ಸಿದ್ಧಪ್ಪ ಅಲ್ಲಿಯೇ ಇದ್ದ ಅದರ ಬಡಿಗೆಯನ್ನು ತೆಗೆದುಕೊಂಡು ಹಲ್ಲೆ ನಡೆಸುತ್ತಾನೆ. ಆಗನ ಬಸಲಿಂಗನ ತಲೆಗೆ, ಹಣಿಗೆ, ಮುಖಕ್ಕೆ, ಬೆನ್ನು, ಭುಜ, ಹೊಟ್ಟೆಗೆ ಮತ್ತು ಕೈ ಕಾಲುಗಳಿಗೆ ಗಾಯಗಳಾಗುತ್ತವೆ. ಇದನ್ನು ಲೆಕ್ಕಿಸದೇ ಅಲ್ಲಿದ್ದ ಕಲ್ಲನ್ನು ಬಸಲಿಂಗನ ತಲೆ ಮೇಲೆ ಎತ್ತಿ ಹಾಕುತ್ತಾನೆ. ಇದರಿಂದ ಗಾಯಗೊಂಡ ಬಸಲಿಂಗನನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತದೆ ಆದರೇ, ಚಿಕಿತ್ಸೆ ಫಲಿಸದೇ ಆತನ ಸಾವನ್ನಪ್ಪುತ್ತಾನೆ. ಈ ವೇಳೆ ಮೈದುನ ಸಿದ್ಧಪ್ಪ ಬಸಲಿಂಗನ ಪತ್ನಿ ವೀಣಾಗೆ ಈ ವಿಷಯವನ್ನು ಬಾಯಿ ಬಿಟ್ಟರೇ, ಕೊಲೆ ಮಾಡುವುದಾಗಿ ಮತ್ತು ಆಸ್ತಿ ಪಾಲು ನೀಡುವುದಿಲ್ಲವೆಂದು ಧಮಕಿ ಹಾಕುತ್ತಾನೆ. ಪೊಲೀಸರು ವೀಣಾ ತನ್ನ ಪತಿ ಹಂಚಿನ ಮೇಲಿಂದ ಬಿದ್ದು ಸಾವನ್ನಪ್ಪಿರುವುದಾಗಿ ವರದಿ ನೀಡಿರುತ್ತಾಳೆ, ಅದರ ಮೇರೆಗೆ ಅದೇ ದಿನ ದಿನಾಂಕ: 18/12/2025 ರಂದು ಯುಡಿ ಪ್ರಕರಣ ದಾಖಲಾಗಿದ್ದು ಇರುತ್ತದೆ. ಹಾಗೂ ಪಿ.ಎಮ್ ಪರೀಕ್ಷೆ ಕೂಡ ಆಗಿರುತ್ತದೆ. ಜನರಲ್ಲಿ ದಾಯಾದಿಗಳ ಕಲಹ ಮತ್ತು ಕೊಲೆಯ ಚರ್ಚೆ ಹೆಚ್ಚಾಗಿರುತ್ತದೆ. ಈ ಹಿನ್ನೆಲೆ ಸಿಪಿಐ ಜಾವೀದ ಎಫ್ ಮುಶಾಪುರಿ ಪಿಐ ಅವರು ಕೊಲೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಿದಾಗ, ಹೆತ್ತ ತಾಯಿ ರತ್ನವ್ವ ಸತ್ಯವನ್ನು ಬಾಯಿಬಿಡುತ್ತಾರೆ. ಆಗ ಅವರಿಂದ ದೂರು ಪಡೆದು ಕೊಲೆ ಪ್ರಕರಣವನ್ನು ದಾಖಲ ಮಾಡಿಕೊಂಡು ಆರೋಪಿತನನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ. ಸಿಪಿಐ ಜಾವೀದ್ ಮುಶಾಪೂರೆ ಅವರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

Tags:

error: Content is protected !!