BELAGAVI

ಬೆಳಗಾವಿ ಡಿಸಿ ವಿರುದ್ಧ ಸಭಾಪತಿಗೆ ಧೈರ್ಯಶೀಲ್ ಮಾನೆ ದೂರು

Share

ಬೆಳಗಾವಿ ಜಿಲ್ಲಾಧಿಕಾರಿಗಳು ಸಂಸದರ ಹಕ್ಕುಚ್ಯುತಿ ಮಾಡಿದ್ದಾರೆಂದು ಲೋಕಸಭಾ ಸಭಾಪತಿಗಳಿಗೆ ದೂರು ನೀಡಿದ ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವ ಧೈರ್ಯಶೀಲ್ ಮಾನೆ ವಿರುದ್ಧ ಬೆಳಗಾವಿಯಲ್ಲಿಂದು ಕರವೇ ಶಿವರಾಮೇಗೌಡ ಬಣದ ವತಿಯಿಂದ ಅಣುಕು ಶವಯಾತ್ರೆ ನಡೆಸಿ, ಪ್ರತಿಭಟನೆ ನಡೆಸಲಾಯಿತು.

ಬೆಳಗಾವಿ ಜಿಲ್ಲಾಧಿಕಾರಿಗಳು ಸಂಸದರ ಹಕ್ಕುಚ್ಯುತಿ ಮಾಡಿದ್ದಾರೆಂದು ಲೋಕಸಭಾ ಸಭಾಪತಿಗಳಿಗೆ ದೂರು ನೀಡಿದ ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವ ಧೈರ್ಯಶೀಲ್ ಮಾನೆ ವಿರುದ್ಧ ಬೆಳಗಾವಿಯಲ್ಲಿಂದು ಕರವೇ ಶಿವರಾಮೇಗೌಡ ಬಣದ ವತಿಯಿಂದ ಅಣುಕು ಶವಯಾತ್ರೆ ನಡೆಸಿ, ಪ್ರತಿಭಟನೆ ನಡೆಸಲಾಯಿತು. ಇದರಿಂದಾಗಿ ರಾಣಿ ಚೆನ್ನಮ್ಮ ವೃತ್ತದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಕರವೇ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೂಡಿ ಅವರು ಮಾತನಾಡಿ, ಬೆಳಗಾವಿ ಜಿಲ್ಲಾಧಿಕಾರಿಗಳು ಒಳ್ಳೆಯ ಜವಾಬ್ದಾರಿ ನಿರ್ವಹಿಸಿದರೂ ಕೂಡ ಅವರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಎಂ.ಇ.ಎಸ್. ಶಿವಸೇನೆಯ ಕಾರ್ಯಕರ್ತರನ್ನು ಬೆಳಗಾವಿಯಿಂದ ಹೊರ ಹಾಕಬೇಕು. ಜಿಲ್ಲಾಧಿಕಾರಿಗಳ ವಿರುದ್ಧ ಅನ್ಯಾಯವಾಗುತ್ತಿರುವಾಗ ಜಿಲ್ಲೆಯ ಸಂಸದರು ಮತ್ತು ಸಚಿವದಯ್ವರು ಸುಮ್ಮನೆ ಕುಳಿತುಕೊಳ್ಳಬಾರದು. ಜಿಲ್ಲಾಧಿಕಾರಿಗಳು ಮಹಾರಾಷ್ಟ್ರದ ನಾಯಕರಿಗೆ ಯಾಕೆ ಅನುಮತಿ ಕೊಡಬೇಕು. ನಾವು ಜಿಲ್ಲಾಧಿಕಾರಿಗಳ ಪರವಾಗಿದ್ದೇವೆ. ಜಿಲ್ಲಾಧಿಕಾರಿಗಳ ಬಳಿ ಹೋಗಿ ಅವರ ನಡೆಯನ್ನು ಗೌರವಿಸಿ ಅವರನ್ನು ಸನ್ಮಾನಿಸಲಾಗುವುದು ಎಂದರು.

ಕರವೇ ಶಿವರಾಮೇಗೌಡ ಬಣದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗಿಯಾಗಿದ್ಧರು.

Tags:

error: Content is protected !!