Vijaypura

ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಖಚಿತ: ಮಾಜಿ ಸಚಿವ ಜನಾರ್ದನ ರೆಡ್ಡಿ ಭವಿಷ್ಯ

Share

ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ತಮ್ಮ ಕುರ್ಚಿಗಳಿಗಾಗಿ ಪರದಾಡುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ವಿಜಯಪುರ ನಗರದಲ್ಲಿ ಬಿಜೆಪಿ ರೈತ ಮೊರ್ಚಾ ಆಯೋಜಿಸಿದ್ದ ಟ್ರ್ಯಾಕ್ಟರ್ ರ‌್ಯಾಲಿಯಲ್ಲಿ ಭಾಗವಹಿಸಿ ಮಾದ್ಯಮಗಳ ಜೊತೆಗೆ ಮಾತನಾಡಿದರು.‌ ಈ ವೇಳೆ ರಾಜ್ಯದಲ್ಲಿ ರೈತರನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ರೈತರಿಗೆ ಅನ್ಯಾಯವಾಗಿದ್ದು, ಅವರು ಬೀದಿ ಬಿದ್ದು ಹೋರಾಟ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಖಚಿತ ಎಂದು ರೆಡ್ಡಿ ಭವಿಷ್ಯ ನುಡಿದರು ‌ಸಾಕಷ್ಟು ಹಾನಿ ಅನುಭವಿಸುತ್ತಿರುವ ರೈತರಿಗೆ ಕೇವಲ ಒಂದು ಗಂಟೆ ಸಮಯ ಕೊಟ್ಟಿದ್ದರೆ ಸಾಕಿತ್ತು ಎಂದರು. ಕನಿಷ್ಠ ಸಚಿವರು ರೈತರ ಹೋರಾಟಕ್ಕೆ ಭೇಟಿ ನೀಡಿ ಸಾಂತ್ವನ ಹೇಳಬಹುದಿತ್ತು. ಜಿಲ್ಲೆಯ ಸಂಬಂಧಪಟ್ಟ ಸಚಿವರು ರೈತರನ್ನು ಕರೆದು ಅವರ ಸಮಸ್ಯೆ ಆಲಿಸಿ ಸಮಾಧಾನ ಹೇಳಬೇಕಿತ್ತು. ಸಿಎಂ ಬದಲಾವಣೆಯಿಂದ ತಮ್ಮ ಸಚಿವ ಸ್ಥಾನ ಹೋಗಬಹುದು ಎಂಬ ಭಯದಿಂದ ಸಚಿವರು ಗೊಂದಲಕ್ಕೆ ಬೀಳುತ್ತಿದ್ದಾರೆ. ರೈತರು ಅಥವಾ ಜನರು ಹಾಳಾದರೂ ಪರವಾಗಿಲ್ಲ, ತಮ್ಮ ಸಚಿವ ಸ್ಥಾನ ಉಳಿದರೆ ಸಾಕು ಎಂದು ಅವರು ಯೋಚಿಸುತ್ತಿದ್ದಾರೆ ಎಂದು ಟೀಕಿಸಿದರು.

Tags:

error: Content is protected !!