BELAGAVI

ಚಿಂತಾಮಣ್’ರಾವ್ ಶಾಲೆಯ ಶತಮಾನೋತ್ಸವ ಸಮಾರಂಭದ ಸಮಾರೋಪ

Share

ಬೆಳಗಾವಿಯ ಶಹಾಪೂರದ ಸರ್ಕಾರಿ ಚಿಂತಾಮಣ್’ರಾವ್ ಶಾಲೆಯ ಶತಮಾನೋತ್ಸವ ಸಮಾರಂಭದ ಸಮಾರೋಪದ ಕಾರ್ಯಕ್ರಮದಲ್ಲಿ ಇಂದು ದಿವಂಗತ ಸಾಂಗಲಿ ಸಂಸ್ಥಾನಿಕ ಚಿಂತಾಮಣ್’ರಾವ್ ಪಟವರ್ಧನರ ಮೂರ್ತಿಯ ಅನಾವರಣದ ಹಿನ್ನೆಲೆ ಭವ್ಯ ಶೋಭಾಯಾತ್ರೆ ನಡೆಸಲಾಯಿತು.

ಬೆಳಗಾವಿ ಸರ್ಕಾರಿ ಚಿಂತಾಮಣ್’ರಾವ್ ಶಾಲೆಯ ಶತಮಾನೋತ್ಸವ ಸಮಾರಂಭದ ಸಮಾರೋಪದ ಕಾರ್ಯಕ್ರಮದ ಹಿನ್ನೆಲೆ ಭವ್ಯ ಶೋಭಾಯಾತ್ರೆ ನಡೆಸಲಾಯಿತು. ಸರಾಫ್ ಗಲ್ಲಿಯ ಕಾರ್ನರ್’ನಿಂದ ಆರಂಭಗೊಂಡ ಶೋಭಾಯಾತ್ರೆಯಲ್ಲಿ ಬೆಳಗಾವಿಯ ಮಹಾಪೌರ ಮಂಗೇಶ್ ಪವಾರ್, ಶಾಸಕರಾದ ಅಭಯ್ ಪಾಟೀಲ್, ಅಮೇರಿಕೆಯ ಸಂಸದರಾದ ಶ್ರೀನಿವಾಸ್ ಠಾಣೆದಾರ ಇನ್ನುಳಿದವರು ಭಾಗಿಯಾಗಿದ್ಧರು. ಪಾರಂಪರೀಕ ವಾದ್ಯಮೇಳಗಳೊಂದಿಗೆ ಬೃಹತ್ ಶೋಭಾಯಾತ್ರೆ ಚಿಂತಾಮಣ್’ರಾವ್ ಶಾಲೆಯ ವರೆಗೆ ಸಾಗಿತು.


ಅಮೇರಿಕೆಯ ಸಂಸದರಾದ ಶ್ರೀನಿವಾಸ್ ಠಾಣೆದಾರ ಚಿಂತಾಮಣ್’ರಾವ್ ಶಾಲೆಯೂ ನನಗೆ ಮೌಲ್ಯಯುತ ಶಿಕ್ಷಣದೊಂದಿಗೆ ಸಂಸ್ಕಾರ ನೀಡಿದೆ. ಈ ಶಾಲೆಯಲ್ಲಿ ಕಲಿತ ನಾನು ಈಗ ವಿದೇಶದಲ್ಲಿ ಜನಸೇವೆಯನ್ನು ಮಾಡುತ್ತಿದ್ದೇನೆ. ಬೆಳಗಾವಿ ದಕ್ಷಿಣ ಭಾಗ ಮತ್ತು ಶಾಲೆಯನ್ನು ಶಾಸಕ ಅಭಯ್ ಪಾಟೀಲ್ ಅವರು ಅಭಿವೃದ್ಧಿ ಪಡಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಆತ್ಮವಿಶ್ವಾಸವು ಎಂತಹದ್ದೇ ಸವಾಲುಗಳನ್ನು ಎದುರಿಸಲು ಸಹಕಾರಿಯಾಗಿದೆ. ಅಮೇರಿಕೆಯಲ್ಲಿ ಮರಾಠಿಗೆ ವಿದೇಶಿ ಭಾಷೆಯ ಸ್ಥಾನವನ್ನು ಕೊಡಿಸಲು ಶ್ರಮಿಸುತ್ತಿರುವುದಾಗಿ ತಿಳಿಸಿದರು.

1995 ಬ್ಯಾಚಿನ ಪ್ರೀತಿ ಕಾಮತ್ ಅವರು ಮುಂಬೈ, ಪುಣೆ, ದೆಹಲಿ, ಕೋಲಕಾತಾ ಸೇರಿದಂತೆ ವಿದೇಶದಲ್ಲಿರುವ ಚಿಂತಾಮಣ್ ಶಾಲೆಯ ಹಳೆಯ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಶಾಸಕ ಅಭಯ್ ಪಾಟೀಲರ ವಿಶೇಷ ಪ್ರಯತ್ನದಿಂದ ಈ ವಿನೂತನ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದರು.

ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರು 1950 ವರ್ಷದ ಬಳಿಕ ಶತಮಾನೋತ್ಸವ ಸಮಾರೋಪದ ಹಿನ್ನೆಲೆ ಚಿಂತಾಮಣರಾವ್ ಶಾಲೆಯಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿದೆ. ಸಾಂಗಲಿಯ ಸಂಸ್ಥಾನಿಕರಾದ ಚಿಂತಾಮಣರಾವ್ ಪಟವರ್ಧನ ಮಹಾರಾಜರ ಮೂರ್ತಿಯ ಅನಾವರಣ ಅಮೇರಿಕೆಯ ಸಂಸದರಾದ ಶ್ರೀನಿವಾಸ್ ಠಾಣೆದಾರ, ಬೆಳಗಾವಿಯ ಸಂಸದ ಜಗದೀಶ್ ಶೆಟ್ಟರ್ ಇಂದು ನಡೆಯಲಿದೆ. ಇದರಲ್ಲಿ ಸಾಂಗಲಿಯ ಸಂಸ್ಥಾನಿಕರಾದ ಜಯಸಿಂಗ್’ರಾಜೇ ಪಟವರ್ಧನ, ರಾಜಲಕ್ಷ್ಮೀ ಪಟವರ್ಧನ , ಪೂರ್ಣಿಮಾರಾಜೆ ಪಟವರ್ಧನ ಇನ್ನುಳಿದವರು ಭಾಗಿಯಾಗಿಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳು ಮತ್ತು ಇನ್ನುಳಿದವರು ಭಾಗಿಯಾಗಿದ್ಧರು.

Tags:

error: Content is protected !!