ಚಿಂತಾಮಣಿರಾವ್ ಶಾಲೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ಧು ನನ್ನ ಸೌಭಾಗ್ಯ; ಸರ್ಕಾರಿ ಶಾಲೆ ಶತಮಾನ ಕಂಡಿದ್ದು ನಮ್ಮ ಹೆಮ್ಮೆ; ಸಂಸದ ಜಗದೀಶ್ ಶೆಟ್ಟರ್


ಇಂದು ಶತಮಾನ ಕಂಡ ಬೆಳಗಾವಿಯ ಚಿಂತಾಮಣರಾವ್ ಪಟವರ್ಧನ ಸರ್ಕಾರಿ ಶಾಲೆಯ ಶತಮಾನೋತ್ಸವ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ದಿವಂಗತ ಚಿಂತಾಮಣರಾವ್ ಪಟವರ್ಧನ ಮಹಾರಾಜರ ಕಂಚಿನ ಪುತ್ಥಳಿಯ ಅನಾವರಣ ಅತ್ಯಂತ ಸಡಗರ ಸಂಭ್ರಮದಿಂದ ನಡೆಯಿತು.
ಇಂದು ಶತಮಾನ ಕಂಡ ಬೆಳಗಾವಿಯ ಚಿಂತಾಮಣರಾವ್ ಪಟವರ್ಧನ ಸರ್ಕಾರಿ ಶಾಲೆಯ ಶತಮಾನೋತ್ಸವ ಸಂಭ್ರಮದ ಸಮಾರೋಪ ಸಮಾರಂಭ ನಡೆಯಿತು. ಈ ಹಿನ್ನೆಲೆ ಶಾಲೆಯನ್ನು ಆರಂಭಿಸಿದ ದಿವಂಗತ ಚಿಂತಾಮಣರಾವ್ ಪಟವರ್ಧನರ ಕಂಚಿನ ಮೂರ್ತಿಯನ್ನು ದಕ್ಷಿಣ ಶಾಸಕ ಅಭಯ್ ಪಾಟೀಲರ ಅಧ್ಯಕ್ಷತೆಯಲ್ಲಿ ಮಹಾಪೌರ ಮಂಗೇಶ್ ಪವಾರ್, ಸಂಸದ ಜಗದೀಶ್ ಶೆಟ್ಟರ್, ಅಮೇರಿಕೆಯ ಸಂಸದ ಶ್ರೀನಿವಾಸ ಠಾಣೇದಾರ, ಸಾಂಗಲಿ ಸಂಸ್ಥಾನಿಕರಾದ ರಾಜಲಕ್ಷ್ಮೀರಾಜೇ ಪಟವರ್ಧನ, ದಾದಾಜೀ ವಿಜಯಸಿಂಗ್ ರಾಜೇ ಪಟವರ್ಧನ, ಪೂರ್ಣಿಮಾರಾಜೆ ಪಟವರ್ಧನ ಸೇರಿದಂತೆ ಇನ್ನುಳಿದವರು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಕ್ರಮದ ರೂವಾರಿಗಳಾದ ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರು ತಾವು ಕಲಿತ ಶಾಲೆಯೂ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಇದರಲ್ಲಿ ಭಾಗಿಯಾಗುತ್ತಿರುವುದು ನಮ್ಮ ಸೌಭಾಗ್ಯ. ಇದಕ್ಕೆ ಸಹಕರಿಸಿದ ಹಳೆಯ ವಿದ್ಯಾರ್ಥಿಗಳಿಗೆ ಮತ್ತು ಗಣ್ಯರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಅಲ್ಲದೇ, ಇನ್ನಷ್ಟು ಅಭಿವೃದ್ಧಿ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದರು.
ರಾಜಲಕ್ಷ್ಮೀರಾಜೇ ಪಟವರ್ಧನ ಹಳೆಯ ವಿದ್ಯಾರ್ಥಿಗಳು ಶತಮಾನೋತ್ಸವದಲ್ಲಿ ಭಾಗಿಯಾಗಿದ್ಧು ಪ್ರಶಂಸನೀಯ. ಈ ಬಾರಿಯಿಂದ ಆಂಗ್ಲ ಭಾಷೆಯಲ್ಲಿ ಪ್ರಾವಿಣ್ಯ ಪಡೆದ ವಿದ್ಯಾರ್ಥಿಗಳಿಗೆ ಪೂರ್ಣಿಮಾ ರಾಜೆ ಪಟವರ್ಧನ ಹೆಸರಿನಲ್ಲಿ 50 ಸಾವಿರ, ವಿಜ್ಞಾನದಲ್ಲಿ ಪ್ರಾವಿಣ್ಯತೆ ಪಡೆದ ವಿದ್ಯಾರ್ಥಿಗೆ 50 ಸಾವಿರ ಶಿಷ್ಯವೇತನ ನೀಡಲಾಗುವುದೆಂದು ಘೋಷಿಸಿದರು.
ದಾದಾಜೀ ವಿಜಯಸಿಂಗ್ ರಾಜೇ ಪಟವರ್ಧನ ಅವರು ಅಜ್ಜನವರು ನೆಟ್ಟ ಸಣ್ಣ ಸಸಿ ಇಂದು ವಟವೃಕ್ಷವಾಗಿದ್ದನ್ನ ಕಂಡು ಸಂತಸವೆನಿಸುತ್ತಿದೆ. ಇದಕ್ಕೆ ಮಾದರಿ ವಿದ್ಯಾರ್ಥಿಗಳು ಲಭಿಸಿದ್ದು, ಪ್ರಶಂಸನೀಯವೆಂದು ಭಾವುಕರಾಗಿ ನುಡಿದರು. ಶಾಲೆಯನ್ನು ಅತ್ಯುತ್ತಮವಾಗಿ ಅಭಿವೃದ್ಧಿಪಡಿಸಿದ ಹಳೆಯ ವಿದ್ಯಾರ್ಥಿಗಳಾದ ಶಾಸಕ ಅಭಯ ಪಾಟೀಲ್ ಕಾರ್ಯವನ್ನು ಪ್ರಶಂಸಿಸಿದರು.
ಅಮೇರಿಕೆಯ ಸಂಸದ ಶ್ರೀನಿವಾಸ ಠಾಣೇದಾರ ಅವರು ಚಿಂತಾಮಣ್’ರಾವ ಶಾಲೆಯೂ ನನಗೆ ಮೌಲ್ಯಯುತ ಶಿಕ್ಷಣವನ್ನು ನೀಡಿದೆ. ಇಂದು ತಾವು ವಿದೇಶದಲ್ಲಿ ಸಂಸದರಾಗಿ ಜನಸೇವೆಯನ್ನು ಸಲ್ಲಿಸಲಾಗುತ್ತಿದೆ. ಇದೆಲ್ಲದ್ದಕ್ಕೂ ತಮಗೆ ಈ ಶಾಲೆಯಲ್ಲಿ ಸಿಕ್ಕ ಶಿಕ್ಷಣವೇ ಅಡಿಪಾಯ ಎಂದರು.
ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರು, ಬೆಳಗಾವಿಯಲ್ಲಿ 15 ದಿನಗಳಲ್ಲಿ ಶತಮಾನೋತ್ಸವ ಕಂಡ ಸರ್ಕಾರಿ ಶಾಲೆಯ 3 ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೇವೆ. ಇಂದು 100 ವರ್ಷಗಳ ಈ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದು ನನ್ನ ಸೌಭಾಗ್ಯ. ಇದು ನೂರು ವರ್ಷಗಳ ಸರ್ಕಾರದ ಸಾಧನೆಯಾಗಿರದೇ, ವಿದ್ಯಾರ್ಥಿಗಳ ಬೆಳವಣಿಗೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪಮಹಾಪೌರರಾದ ವಾಣಿ ಜೋಷಿ, ನಗರಸೇವಕರು ಸೇರಿದಂತೆ ಹಳೆಯ ವಿದ್ಯಾರ್ಥಿಗಳು ಇನ್ನುಳಿದವರು ಭಾಗಿಯಾಗಿದ್ಧರು.
