ಬೆಳಗಾವಿ ತಾಲೂಕಿನ ಕಾಕತಿ ಯಮನಾಪೂರ ಗಲ್ಲಿಯ ರಹಿವಾಸಿ ಶತಾಯುಷಿ ಯಶೋಧಾ ಅಮೃತ ಪಾಟೀಲ್ (105) ಇಂದು ಶನಿವಾರ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.

ಮೃತರು ಓರ್ವ ಸುಪುತ್ರ, ಸೊಸೆ, ಇಬ್ಬರು ಸುಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಸೋಮವಾರ ಡಿಸೆಂಬರ್ 29 ರಂದು ಬೆಳಿಗ್ಗೆ 8 ಗಂಟೆಗೆ ಕಾಕತಿ ಸ್ಮಶಾನಭೂಮಿಯಲ್ಲಿ ಅಸ್ಥಿವಿಸರ್ಜನೆ ನಡೆಯಲಿದೆ. ಮೃತರು ಕಾಕತಿಯ ಪ್ರಸಿದ್ಧ ಮೂರ್ತಿಕಾರ ಜಯವಂತ ಅಮೃತ ಪಾಟೀಲರ ಮಾತೋಶ್ರಿಯಾಗಿದ್ಧರು.
