Bagalkot

ಬಾಗಲಕೋಟೆಯಲ್ಲಿ ಬುದ್ಧಿಮಾಂದ್ಯನ ಮೇಲೆ ಹಲ್ಲೆ ಪ್ರಕರಣ…

Share

ಸಾಮಾನ್ಯ ಮಕ್ಕಳ ಮೇಲೆ ಹಲ್ಲೆ ಮಾಡುವುದೇ ದೊಡ್ಡ ಅಪರಾಧವಾಗಿರುವಾಗ, ಅಸಹಾಯಕ ಬುದ್ಧಿಮಾಂದ್ಯ ಮಕ್ಕಳ ಮೇಲೆ ಇಂತಹ ಕ್ರೌರ್ಯ ಎಸಗುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. 16 ವರ್ಷದ ಬಾಲಕನ ಮೇಲೆ ನಡೆದಿರುವ ಈ ಅಮಾನವೀಯ ಹಲ್ಲೆ ಇಡೀ ಸಮಾಜಕ್ಕೆ ಕಳಂಕ ತರುವಂತದ್ದಾಗಿದ್ದು, ಇಲಾಖೆಯ ಸಚಿವೆಯಾಗಿ ನಮಗೂ ಇದು ಮುಜುಗರ ಉಂಟುಮಾಡುವ ಘಟನೆಯಾಗಿದೆ”. ಈ ಸಂಸ್ಥೆಯು ಸರ್ಕಾರದ ಯಾವುದೇ ಅನುಮತಿ ಇಲ್ಲದೆ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವುದು ತನಿಖೆಯಲ್ಲಿ ತಿಳಿದುಬಂದಿದ್ದು, ಮಕ್ಕಳ ರಕ್ಷಣಾ ಹಕ್ಕುಗಳ ಸಂಪೂರ್ಣ ಉಲ್ಲಂಘನೆಯಾಗಿದೆ ತಕ್ಷಣವೇ ಸ್ಥಳಕ್ಕೆ ಮಕ್ಕಳ ರಕ್ಷಣಾ ಅಧಿಕಾರಿಗಳು, ಡಿಡಿ ಹಾಗೂ ಎಸ್ಪಿ ಅವರನ್ನು ಕಳುಹಿಸಿ ವರದಿ ಪಡೆಯುವಂತೆ ಸೂಚಿಸಿದ್ದು, “ಜಿಲ್ಲಾಧಿಕಾರಿ ಹಾಗೂ ಎಸ್ಪಿಯವರೊಂದಿಗೆ ನಾನು ಈಗಾಗಲೇ ಮಾತನಾಡಿದ್ದು, ಈ ಅನಧಿಕೃತ ವಸತಿ ಶಾಲೆಯನ್ನು ತಕ್ಷಣವೇ ಮುಚ್ಚಿಸಲು ಕಟ್ಟುನಿಟ್ಟಿನ ಆದೇಶ ನೀಡಿದ್ದೇನೆ. ಅಲ್ಲಿರುವ ಇತರ ಮಕ್ಕಳನ್ನು ಪೋಷಕರ ಅನುಮತಿಯ ಮೇರೆಗೆ ಸರ್ಕಾರಿ ಅನುದಾನಿತ ರಕ್ಷಣಾ ನಿಲಯಗಳಿಗೆ ಶಿಫ್ಟ್ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಹಲ್ಲೆ ಎಸಗಿದ ಆರೋಪಿಗಳ ವಿರುದ್ಧ ಕೇವಲ ಸಾಮಾನ್ಯ ಪ್ರಕರಣವಲ್ಲದೆ, ಮಕ್ಕಳ ರಕ್ಷಣಾ ಕಾಯ್ದೆಯಡಿ ಕಠಿಣ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು,” ಎಂದು ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

Tags:

error: Content is protected !!