hubbali

ಮೊಬೈಲ್ ಬಳಕೆ ಬಿಡು ಎಂದಿದಕ್ಕೆ ಬಾಲಕ ಆತ್ಮಹತ್ಯೆ ಯತ್ನ

Share

ಮೊಬೈಲ್ ಬಳಕೆ ಹಾಗೂ ಚಾಟ್ ಮಾಡುವುದನ್ನು ಬಿಡು ಎಂದು ಬೈದಿದ್ದಕ್ಕೆ ನೊಂದ ಬಾಲಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಅರುಣಗೌಡ(16) ಮೃತ ಪಟ್ಟ ಬಾಲಕ. ಮನೆಯಲ್ಲಿ ಬುದ್ದಿವಾದ ಹೇಳಿದಕ್ಕೆ ವಿಷ ಸೇವಿಸಿ ಅಸ್ವಸ್ಥನಾಗಿದ್ದ. ಆತನನ್ನು ನಗರದ ಕೆಎಂಸಿಆರ್‌ಐ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಬುಧವಾರ ತಡರಾತ್ರಿ ಮೃತಪಟ್ಟಿದ್ದಾನೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!