ಖಾನಾಪೂರ ಪೊಲೀಸ್ರು ತಮ್ಮ ಮೂಲ ಕರ್ತವ್ಯಗಳಿಂದ ದೂರ ಸರಿದಿದ್ದಾರೆಯೇ? ಎಂಬ ಪ್ರಶ್ನೆ ಕಾಡತೊಡಗಿದೆ.!ಪೊಲೀಸರು – ಜನರ ರಕ್ಷಕರು, ಸೇವಕರು ಮತ್ತು ನಂಬಿಕೆಯ ಆಧಾರ”ಆದರೆ ಬ್ಲಾಕ್ ಕಾಂಗ್ರೆಸ್ ದಿಂದ ಹೋರಾಟದ ಎಚ್ಚರಿಕೆ

ಆಂಕರ್ :- ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪೊಲೀಸರು ಕೇವಲ ಕಾನೂನು ಜಾರಿಗೆ ತರುವ ಅಧಿಕಾರಿಗಳು ಮಾತ್ರವಲ್ಲ, ಅವರು ಜನರ ರಕ್ಷಕರು, ಸೇವಕರು ಹಾಗೂ ನಂಬಿಕೆಯ ಆಧಾರವಾಗಿದ್ದಾರೆ. ನಾಗರಿಕರ ಜೀವನ ಆಸ್ತಿ ಮತ್ತು ಮೂಲಭೂತ ಹಕ್ಕುಗಳ ರಕ್ಷಣೆ ಮಾಡುವುದು ಅವರ ಪ್ರಮುಖ ಕರ್ತವ್ಯವಾಗಿದೆ.
ದೈನಂದಿನ ಜೀವನದಲ್ಲಿ ನಾಗರಿಕರು ಅಪಘಾತ, ಅಪರಾಧ, ವಿವಾದಗಳು, ನೈಸರ್ಗಿಕ ವಿಪತ್ತುಗಳು ಮುಂತಾದ ಸಂದರ್ಭಗಳಲ್ಲಿ ಸಂಕಷ್ಟಕ್ಕೆ ಸಿಲುಕುತ್ತಾರೆ ಸ್ವಾಭಾವಿಕ ಅಂಥ ಸಂದರ್ಭಗಳಲ್ಲಿ ಮೊದಲಾಗಿ ಸಹಾಯಕ್ಕೆ ಧಾವಿಸುವವರು ಪೊಲೀಸರು. ಅಪರಾಧಗಳನ್ನು ತಡೆಯುವುದು, ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಮತ್ತು ಸಮಾಜದಲ್ಲಿ ಭದ್ರತೆಯ ಭಾವನೆ ನಿರ್ಮಾಣ ಮಾಡುವುದು ಪೊಲೀಸ್ ದಳದ ಪ್ರಮುಖ ಕಾರ್ಯವಾಗಿದೆ.
ಅದರ ಜೊತೆಗೆ, ಪೊಲೀಸರಿಗೆ ಜನರೊಂದಿಗೆ ಶಿಷ್ಟ, ವಿನಯಶೀಲ ಮತ್ತು ಸಂವೇದನಾಶೀಲವಾಗಿ ವರ್ತಿಸುವುದು ಕೂಡ ಅಷ್ಟೇ ಅಗತ್ಯವಾಗಿದೆ. ಮಹಿಳೆಯರು, ಹಿರಿಯ ನಾಗರಿಕರು ಹಾಗೂ ದುರ್ಬಲ ವರ್ಗಗಳೊಂದಿಗೆ ಗೌರವದಿಂದ ನಡೆದು ಅವರ ನಂಬಿಕೆಯನ್ನು ಗಳಿಸುವುದೇ ಪೊಲೀಸ್ ಸೇವೆಯ ನಿಜವಾದ ಗುರುತು. ನಿಷ್ಪಕ್ಷಪಾತತೆ, ಪ್ರಾಮಾಣಿಕತೆ ಮತ್ತು ಕಾನೂನಿನ ಚೌಕಟ್ಟಿನಲ್ಲಿ ಕೈಗೊಳ್ಳುವ ಕ್ರಮಗಳಿಂದಲೇ ಜನರು ಪೊಲೀಸ್ ಮೇಲಿನ ನಂಬಿಕೆ ಬಲವಾಗುತ್ತದೆ.
ಸ್ವಲ್ಪ ಮಟ್ಟಿಗೆಲ್ಲಿ ಹೇಳುವುದಾದರೆ, ಪೊಲೀಸ್ ಮತ್ತು ಜನರ ನಡುವಿನ ಸಂಬಂಧ ಪರಸ್ಪರ ನಂಬಿಕೆಯ ಮೇಲೆ ಆಧಾರಿತವಾಗಿರಬೇಕು. ಆಗ ಮಾತ್ರ ಸುರಕ್ಷಿತ, ನ್ಯಾಯಯುತ ಮತ್ತು ಶಕ್ತಿಶಾಲಿ ಸಮಾಜ ನಿರ್ಮಾಣ ಸಾಧ್ಯ. ಆದ್ದರಿಂದ ಪೊಲೀಸರು ನಿಜವಾದ ಅರ್ಥದಲ್ಲಿ ಜನರ ರಕ್ಷಕರು, ಸೇವಕರು ಮತ್ತು ನಂಬಿಕೆಯ ಆಧಾರರಾಗಿದ್ದಾರೆ.
ಆದರೆ ಖಾನಾಪೂರ ಪೊಲೀಸರು ಇದಕ್ಕೆ ಸಂಪೂರ್ಣ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ – ಇದು ನಿಜ ಎಂದು ಖಾನಾಪೂರ ಬ್ಲಾಕ್ ಕಾಂಗ್ರೆಸ್ ವತಿಯಿಂದ ವರಸಫ್ ವಾರ್ ಪ್ರಾರಂಭಿಸಿದ್ದು ಇದರ ವಿರುದ್ಧ ಯಾವುದೇ ಮುಲಾಜಿಲ್ಲದೆ ಖಾನಾಪೂರ ಪೋಲಿಸ್ ಠಾಣೆಯ ವಿರುದ್ಧ ಎಲೇ,ಎಲ್ಲೆಯಾಗಿ ಹೋರಾಟದ ಕಿಚ್ಚು ಹೋರ ಹಾಕುತಿದ್ದು
ಅನ್ಯಾಯ–ಅತ್ಯಾಚಾರ,
ಅವಮಾನಕಾರಿ ಭಾಷೆ,
ಮಧ್ಯವರ್ತಿಗಳ ಸಮ್ಮುಖದಲ್ಲಿ ನ್ಯಾಯ ಬಗೆಹರಿಸುವುದು,
ದೂರುದಾರರ ವಿರುದ್ಧ ಕಿರುಕುಳ,
ಅಕ್ರಮ ವ್ಯವಹಾರಗಳಿಗೆ ಮೃದು ನಿಲುವು –
ಇವೆಲ್ಲದರ ಸುಂದರ ಮಿಶ್ರಣವೇ ಖಾನಾಪುರ ಪೊಲೀಸ್ ಠಾಣೆ ಎಂದರೆ ತಪ್ಪಾಗಲಾರದು! ಎಂದು ಲೇವಡಿ ಮಾಡಿದೆ
ಕಡುಬಡವರು, ಸಾಮಾನ್ಯ ಜನತೆ, ಕೂಲಿ ಕಾರ್ಮಿಕರು, ರೈತರಿಗಾಗಿ ನಮ್ಮ ಹೆಮ್ಮೆಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಸರ್ಕಾರವು ಹಗಲಿರುಳು ದುಡಿಯುತ್ತಿರುವಾಗ, ನಮ್ಮ ಸರ್ಕಾರದ ನೀತಿಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುವುದು ಖಾನಾಪೂರ ಪೊಲೀಸ್ರಿಂದ ಎಂದು ಕಾಣಿಸುತ್ತಿದೆ.!
ಇದು ಅತ್ಯಂತ ದುಃಖದ ಸಂಗತಿಯಾಗಿದೆ.
ಹೊಸ ವರ್ಷದಲ್ಲಿ ಖಾನಾಪೂರ ಬ್ಲಾಕ್ ಕಾಂಗ್ರೆಸ್ ಕಾನೂನು ಕಾಪಾಡಲು ಕಾನೂನು ಮಾರ್ಗದಲ್ಲಿ ಖಂಡಿತವಾಗಿ ಹೋರಾಟ ನಡೆಸಲಿದ್ದೆವೆ ಎಂದು ಸಾವಿರಾರು ವರಸಫ್ ಗ್ರುಪ್ ಗಳಲ್ಲಿ ತನ್ನ ಆಕ್ರೋಶ ಭರಿತ ಸಂದೇಶವನ್ನು ರವಾನಿಸಿದೆ ಒಟ್ಟಿನಲ್ಲಿ ಖಾನಾಪೂರ ಪೋಲಿಸ್ ಠಾಣೆಯ ವಿರುದ್ಧ ಪ್ರತಿ ದಿನವೂ ಒಂದೊಂದು ಆಕ್ರೋಶದ ಸಂದೇಶ ಸಾರುವ ನಿಟ್ಟಿನಲ್ಲಿ ಖಾನಾಪೂರ ತಾಲೂಕಾ ಬ್ಲಾಕ್ ಕಾಂಗ್ರೆಸ್ ಮುಂದಾಗಿದೆ ಜನಸಾಮಾನ್ಯರ ಹಿತಕ್ಕಾಗಿ ಒಂದು ಹೆಜ್ಜೆ ಇದು ಕಾಂಗ್ರೆಸ್ ಪಕ್ಷದ ಧೈಯ ಆಗಿದೆ.
