Vijaypura

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಟ್ರ್ಯಾಕ್ಟರ್ ರ‌್ಯಾಲಿ; ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ಮುಖಂಡರು

Share

ಬೆಳೆಹಾನಿ ಪರಿಹಾರ ನೀಡುವಲ್ಲಿ ವಿಳಂಬ ಸೇರಿದಂತೆ ರೈತ ವಿರೋಧಿ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಇಂದು ರೈತರ ಸಮ್ಮುಖದಲ್ಲಿ ಟ್ರ್ಯಾಕ್ಟ‌ರ್ ರ್ಯಾಲಿ ಹಾಗೂ ಬೃಹತ್‌ ಪ್ರತಿಭಟನಾ ಸಭೆ ನಡೆಯಿತು. ಈ ಸಂದರ್ಭದಲ್ಲಿ ರಾಜ್ಯ ರೈತ ಮೊರ್ಚಾ ಅಧ್ಯಕ್ಷ ಪೊಲೀಸರ ವಿರುದ್ಧ ಕಿಡಿಕಾರಿದ ಘಟನೆಯೂ ನಡೆಯಿತು.

ಪ್ರತಿಭಟನೆಯಲ್ಲಿ ವಿಜಯಪುರ ನಗರ ಪ್ರವೇಶಿಸಲು ಜಿಲ್ಲಾ ಪೊಲೀಸರು 15 ಟ್ರಾಕ್ಟರ್ ನಗರ ಪ್ರವೇಶಕ್ಕೆ ಅನುಮತಿಸಿದ್ದರು. ಆದ್ರೆ ಬಿಜೆಪಿ ರೈತ ಮೊರ್ಚಾ 40 ಟ್ರಾಕ್ಟರ್‌ಗಳಿಗೆ ಅನುಮತಿ ಕೇಳಿತ್ತು. ಎಸ್ಪಿ ಲಕ್ಷ್ಮಣ ನಿಂಬರಗಿ 40 ಟ್ರಾಕ್ಟರ್ ನಗರ ಪ್ರವೇಶಕ್ಕೆ ನಿರಾಕರಿಸಿ ನಗರದ ಹೊರ ಭಾಗದಲ್ಲಿ ಪ್ರತಿಭಟನಾ ರ್ಯಾಲಿಯಲ್ಲಿ 40 ಟ್ರಾಕ್ಟರ್ ಗೆ ಅನುಮತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ರೈತ ಮೊರ್ಚಾ ಪದಾಧಿಕಾರಿಗಳು ಪೊಲೀಸರ ವಿರುದ್ಧ ಕಿಡಿಕಾರಿದರು. ಬಳಿಕ ಬೆಂಗಳೂರು ಟೋಲ್ ಕೇಂದ್ರದಿಂದ ರ್ಯಾಲಿ ಆರಂಭವಾಗಿ ಗಣೇಶ ನಗರ, ಜಲನಗರ, ಶಿವಾಜಿ ವೃತ್ತ, ಬಸವೇಶ್ವರ ವೃತ್ತ ಸೇರಿದಂತೆ ಅನೇಕ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಡಾ.ಬಿ.ಆ‌ರ್. ಅಂಬೇಡ್ಕರ ವೃತ್ತಕ್ಕೆ ತಲುಪಿದರು. ಅಲ್ಲಿ ಬೃಹತ್‌ ಪ್ರತಿಭಟನಾ ಸಭೆ ನಡೆಯಿತು. ದೇಶದ ಬೆನ್ನೆಲುಬಾಗಿರುವ ರೈತರ ಬೆನ್ನಿಗೆ ಚೂರಿ ಹಾಕುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಬೆಳೆಹಾನಿ ಪರಿಹಾರ ಹಣ ರೈತರ ಕೈ ಸೇರಿಲ್ಲ, ರೈತರಿಗೆ ನೀಡಬೇಕಾದ ಹಾಲಿನ ಪ್ರೋತ್ಸಾಹ ಧನ ಇನ್ನೂ ನೀಡಿಲ್ಲ. ₹700 ಕೋಟಿ ಗಳಷ್ಟು ಪ್ರೋತ್ಸಾಹ ಧನ ರೈತರಿಗೆ ಇನ್ನೂ ದೊರಕಿಲ್ಲ ಎಂದರು. ಈ ಸಂದರ್ಭದಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ, ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ,ಮಾಜಿ ಸಚಿವರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್ ಕೆ ಬೆಳ್ಳುಬ್ಬಿ, ಮಾಜಿ ಶಾಸಕ ರಮೇಶ ಭೂಸನೂರ ಸೇರಿದಂತೆ ಅನೇಕ ಹಿರಿಯ ನಾಯಕರು ಹೋರಾಟದಲ್ಲಿ ಭಾಗವಹಿಸಿದ್ದರು.

Tags:

error: Content is protected !!