ಚಿಕ್ಕೋಡಿ: ತಾಲೂಕಿನ ಅಂಕಲಿ ಗ್ರಾಮದ ಅಂಬೇಡ್ಕರಕ್ ವೃತ್ತದಲ್ಲಿ ಶುಕ್ರವಾರ ಸಂಜೆ ದ್ವಿಚಕ್ರವಾಹನ ಜರಿದು ಟ್ರಕ್ ಕೆಳಗೆ ಸಿಲುಕಿದ್ದರಿಂದ ವಾಹನ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ಪತ್ನಿ ಮತ್ತು ಪುತ್ರಿ ಗಾಯಗೊಂಡ ಘಟನೆ ನಡೆದಿದೆ.

ಮಾಂಜರಿ ಗ್ರಾಮದ ಶಕೀಲ ಅಬ್ಬಾಸ ಮುಲ್ಲಾ(40) ಎಂಬುವರೆ ಮೃತಪಟ್ಟ ವ್ಯಕ್ತಿ. ಪತ್ನಿ ಮತ್ತು ಪುತ್ರಿ ಚಿಕ್ಕೋಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
