ಜೈ ಭೀಮ ಭಾರತೀಯ ಹಿಂದೂ ಢೋರ ಸಮಾಜ ಸೇವಾ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ

ಸವದತ್ತಿ ಯಲ್ಲಮ್ಮನ ದೇವಸ್ಥಾನದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಹಾಗೂ ಭಕ್ತರ ಮೇಲಿನ ದೌರ್ಜನ್ಯವನ್ನು ತಡೆಯುವಂತೆ ಆಗ್ರಹಿಸಿ ಇಂದು ಜೈ ಭೀಮ ಭಾರತೀಯ ಹಿಂದೂ ಢೋರ ಸಮಾಜ ಸೇವಾ ಸಂಘ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸವದತ್ತಿ ಯಲ್ಲಮ್ಮನ ದೇವಸ್ಥಾನದ ದೇವಿಯ ದರ್ಶನಕ್ಕೆ ವಿಶೇಷ ಸೌಲಭ್ಯದ ಹೆಸರಿನಲ್ಲಿ ಇಲ್ಲಿಗೆ ಬರುವ ಭಕ್ತರನ್ನು ಲೂಟಿ ಮಾಡುತ್ತಿದ್ದಾರೆ. ಇದು ಕಾನೂನಿನ ಪ್ರಕಾರ ಅಪರಾಧವಾಗಿದೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ. ವೃದ್ಧರು, ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ವಿಶೇಷ ಸರದಿ ಸಾಲಿನ ಸೌಲಭ್ಯ ಇಲ್ಲ. ದೇವಸ್ಥಾನದ ಆಡಳಿತ ಮಂಡಳಿ ಸಂಪೂರ್ಣ ಭ್ರಷ್ಟಾಚಾರದಿಂದ ತುಂಬಿದೆ. ಆಡಳಿತ ಮಂಡಳಿಯ ಸುಧಾರಣೆ ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ರಾಜು ಟೊಂಬರೆ, ಗೋಪಾಪ ಪಿಂಪರೆ, ಅನಿಲ್ ಚೌಗುಲಾ, ಶಿವಕುಮಾರ ಹೂಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸವದತ್ತಿಯ ಯಲ್ಲಮ್ಮ ದೇವಿಯ ದೇವಸ್ಥಾನದ ಸುತ್ತಲೂ ಸ್ವಚ್ಛತೆ ಇಲ್ಲ ಶೌಚಾಲಯಗಳು ಸರಿ ಇಲ್ಲ ಅಲ್ಲಿರುವಂತ ಜನ ಎಲ್ಲದಕ್ಕೂ ಹಣ ಕೇಳುತ್ತಾರೆ ಶೌಚಾಲಯಗಳು ಉಚಿತ ಮಾಡಬೇಕು ಅಲ್ಲಿರುವಂತ ಉಳಿದುಕೊಳ್ಳುವಂತಹ ರೂಮ್ ಗಳಿಗೆ ತುಂಬಾ ಹಣ ಕೇಳುತ್ತಾರೆ.
ಈ ಸಂದರ್ಭದಲ್ಲಿ ದೇವ ಸೇವಕಿ ಮಾತನಾಡಿ ಇಲ್ಲಿ ಸ್ವಚ್ಛತೆ ಏನೂ ಇಲ್ಲ ಎಲ್ಲದಕ್ಕೂ ಬರೀ ದುಡ್ಡು ದುಡ್ಡು ಅನ್ನುತ್ತಾರೆ, ಎಲ್ಲ ರೀತಿಯಲ್ಲಿ ಅನುಕೂಲ ಮಾಡಿ ಕೊಡಬೇಕು ದೇವಿಯ ದರ್ಶನ ಪಡೆಯಬೇಕೆಂದರೆ ಒಬ್ಬರಿಂದ 500 ರೂಪಾಯಿ ತೆಗೆದುಕೊಳ್ಳುತ್ತಾರೆ ಬಡವರು ಎಲ್ಲಿಂದ ದುಡ್ಡು ಕೊಡಬೇಕು. ಎಂದು ಆಕ್ರೋಶ ವ್ಯಕ್ತಪಡಿಸಿದರು.
