Belagavi

ಬಿ.ಕೆ. ಮಾಡೆಲ್ ಶಾಲೆಯ ಸುವರ್ಣ ಮಹೋತ್ಸವ ಜಗತ್ತಿನಲ್ಲೇ ಅತ್ಯಂತ ಜ್ಞಾನವಂತರಿರುವ ಭೂಮಿ ಎಂದರೇ, ಭಾರತ; ಕೇಂದ್ರ ಸಚಿವ ಪ್ರಲ್ಹಾದ ಜೋಷಿ

Share

ನಮ್ಮ ದೇಶದಲ್ಲಿ ಶಿಕ್ಷಣಕ್ಕೆ ಸಿಕ್ಕ ಪ್ರಧಾನತೆ ಬೇರೆ ಯಾವ ದೇಶದಲ್ಲಿಲ್ಲ. ದೇಶದಲ್ಲೇ ಐತಿಹಾಸಿಕ ಪುರಾಣತನ ವಿದ್ಯಾಲಯಗಳಿದ್ದವು. ಜಗತ್ತಿನಲ್ಲೇ ಅತ್ಯಂತ ಜ್ಞಾನವಂತರಿರುವ ಭೂಮಿ ಎಂದರೇ, ಭಾರತ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಹೇಳಿದರು.

ಬೆಳಗಾವಿಯ ಬೆಲಗಾಮ್ ಎಜ್ಯುಕೇಷನ್ ಸೊಸೈಟಿಯ ಬಿ.ಕೆ. ಮಾಡೆಲ್ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದ ಎರಡನೇಯ ದಿನವನ್ನ ಉದ್ಧೇಶಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರು, ನಮ್ಮ ದೇಶದಲ್ಲಿ ಶಿಕ್ಷಣಕ್ಕೆ ಸಿಕ್ಕ ಪ್ರಧಾನತೆ ಬೇರೆ ಯಾವ ದೇಶದಲ್ಲಿಲ್ಲ. ದೇಶದಲ್ಲೇ ಐತಿಹಾಸಿಕ ಪುರಾಣತನ ವಿದ್ಯಾಲಯಗಳಿದ್ದವು. ಜಗತ್ತಿನಲ್ಲೇ ಅತ್ಯಂತ ಜ್ಞಾನವಂತರಿರುವ ಭೂಮಿ ಎಂದರೇ, ಭಾರತ. ಮಾನವಿಯತೇಯ ಸಂದೇಶವನ್ನು ಇಡೀ ದೇಶಕ್ಕೆ ಸಾರಿರುವುದು ನಮ್ಮ ದೇಶ. ನಮ್ಮ ದೇಶದಲ್ಲಿ ಬ್ರಿಟಿಷರ ಕಾಲದಲ್ಲಿ ಶಾಲೆಗಳು ಬಂದಿರಲಿಲ್ಲ. 18ನೇ ಶತಮಾನಗಳಿಗಿಂತಲೂ ಮೊದಲೂ ಶಾಲೆಗಳಿದ್ದವು. 2047 ವರ್ಷದಲ್ಲಿ ವಿಕಸಿತ ಶಕ್ತಿಯಾಗಿ ನಮ್ಮ ದೇಶ ಮುಂದಾಗಬೇಕಿದೆ. ದೇಶದಲ್ಲಿ ಬದಲಾವಣೆಗೆ ಮುಂದಾಗಬೇಕು. ಇಂದು ಭಾರತ ಅಭಿವೃದ್ಧಿಯಾಗಿದ್ದು, ಇಡೀ ಜಗತ್ತೆ ನಮ್ಮ ದೇಶವನ್ನು ತಿರುಗಿ ನೋಡುತ್ತಿದೆ ಎಂದರು.

ಮಾಜಿ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ್ ಕೋರೆ ಅವರು ಮೊದಲೆಲ್ಲ ಶಿಕ್ಷಣ ಸಂಸ್ಥೆಗಳಿಗೆ ಹಲವರು ತ್ಯಾಗ ಮಾಡಿದ್ದಾರೆ. ಆದರೇ, ಈಗೀನ ಶಿಕ್ಷಣ ಸಂಸ್ಥೆಗಳು ಕೆಲ ಕುಟುಂಬಗಳಿಗೆ ಸೀಮಿತವಾಗಿವೆ. ಕೆ.ಎಲ್.ಇ ಸಂಸ್ಥೆಯಾಗಲಿ ಬಿ.ಕೆ. ಮಾಡೆಲ್ ಸಂಸ್ಥೆಯಾಗಲಿ ಶಿಕ್ಷಕರೇ ಹುಟ್ಟು ಹಾಕಿದ ಸಂಸ್ಥೆಗಳು. ಸಾವಿರಾರು ವಿದ್ಯಾರ್ಥಿಗಳಿಗೆ ಇದು ಶಿಕ್ಷಣ ದಾಸೋಹವನ್ನು ನೀಡಿದೆ ಎಂದರು.

ವೇದಿಕೆಯ ಮೇಲೆ ಮಹಾಪೌರ ಮಂಗೇಶ್ ಪವಾರ್, ಉಪಮಹಾಪೌರ ವಾಣಿ ಜೋಷಿ, ಮಾಜಿ ಶಾಸಕ ಸಂಜಯ್ ಪಾಟೀಲ್, ಸಂಸ್ಥೆಯ ಅಧ್ಯಕ್ಷ ಅವಿನಾಶ ಪೋದಾರ, ದೀಪಕ ಕರಂಜಿಕರ, ವಿದ್ಯಾರ ಮುರಕುಂಬಿ, ಎಸ್.ಎನ್. ಶಿವಣಗಿ, ಸುಧೀರ್ ಕುಲಕರ್ಣಿ, ಅರವಿಂದ ಹುಣಗುಂದ, ಕೆ.ಎನ್. ಪೈ, ಎಸ್.ಎ. ಚಾಟೆ, ಎಸ್.ಎನ್. ಜೋಷಿ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!