Belagavi

ಕಾಕತಿ ಪೊಲೀಸರ ಭರ್ಜರಿ ಕಾರ್ಯಾಚರಣೆ ; 10 ಬೈಕಗಳೊಂದಿಗೆ ಕಳ್ಳನ ಬಂಧನ ಶಹಾಪುರ ಪೊಲೀಸರಿಂದ ಮಾರಕಾಸ್ತ್ರ ಹೊಂದಿದ್ದ ವ್ಯಕ್ತಿಯ ಬಂಧನ

Share

ಬೆಳಗಾವಿ ನಗರದ ಕಾಕತಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸತತವಾಗಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವಡಗಾಂವದ ವಿಷ್ಣುಗಲ್ಲಿ ನಿವಾಸಿ ಮುಜಿಪ್ ಮಂಜೂರ ಅಹಮ್ಮದ ಶೇಖ (21) ಬಂಧಿತ ಆರೋಪಿ. ಕಳೆದ ಡಿಸೆಂಬರ್ 21ರಂದು ಅಬ್ದುಲರಶಿದ ಇಮಾಸಾಬ ಡೊನಕರ ಎಂಬುವವರು ನೀಡಿದ ದೂರಿನನ್ವಯ ತನಿಖೆ ಕೈಗೊಂಡ ಪಿ.ಐ. ಸುರೇಶ ಪಿ. ಶಿಂಗಿ ನೇತೃತ್ವದ ತಂಡವು ಈ ಕಾರ್ಯಾಚರಣೆ ನಡೆಸಿದೆ. ವಿಚಾರಣೆ ವೇಳೆ ಆರೋಪಿಯು ಕಾಕತಿ, ಹಿರೇಬಾಗೇವಾಡಿ, ಮಾಳಮಾರುತಿ, ಮಾರಿಹಾಳ ಹಾಗೂ ಪುಣೆ ನಗರದಿಂದ ಒಟ್ಟು 10 ಬೈಕ್‌ಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಂಧಿತನಿಂದ ಸುಮಾರು 7 ಲಕ್ಷ ರೂಪಾಯಿ ಮೌಲ್ಯದ 6 ಹೀರೊ ಹೊಂಡಾ ಸ್ಪ್ಲೆಂಡರ್ ಹಾಗೂ 4 ಸುಜುಕಿ ಎಕ್ಸೆಸ್ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತಂಡದ ಸಮಯೋಚಿತ ಕಾರ್ಯವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.
ಬೆಳಗಾವಿ: ನಗರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಶಹಾಪುರ ಪೊಲೀಸರು ನಡೆಸಿದ ಗಸ್ತು ಕಾರ್ಯಚರಣೆಯ ವೇಳೆ ಮಾರಕಾಸ್ತ್ರ ಹೊಂದಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬೆಳಗಾವಿಯ ಖಾನಭಾಗ ನಿವಾಸಿ ಗಿರೀಶ ಮಹಾಬಳೇಶ್ವರ ಲಕ್ಕನ್ನವರ (24) ಬಂಧಿತ ಆರೋಪಿ. ಡಿಸೆಂಬರ್ 24ರಂದು ಹಳೆ ಪಿ.ಬಿ ರಸ್ತೆಯ ಹತ್ತಿರ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಈತನನ್ನು ಸಿಪಿಸಿ ಇಜೇತ ಕಿತ್ತೂರ ಮತ್ತು ತಂಡದವರು ಪರಿಶೀಲಿಸಿದಾಗ, ಆತನ ಬಳಿ ಹರಿತವಾದ ಚಾಕು ಪತ್ತೆಯಾಗಿದೆ. ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಹೆಚ್ಚುತ್ತಿರುವ ಅಹಿತಕರ ಘಟನೆಗಳನ್ನು ತಡೆಯಲು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಈ ಸಂಬಂಧ ಶಹಾಪುರ ಠಾಣೆಯಲ್ಲಿ ಇಂಡಿಯನ್ ಆರ್ಮ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.

Tags:

error: Content is protected !!