Uncategorized

ಅಂಜುಮನ್ ಎ ಇಸ್ಲಾಂ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಬೃಹತ್ ವಿಜ್ಞಾನ ವಸ್ತು ಪ್ರದರ್ಶನ

Share

ಬೆಳಗಾವಿಯ ಅಂಜುಮನ್ ಎ ಇಸ್ಲಾಂ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.

ಇಂದು ಬೆಳಗಾವಿಯ ಅಂಜುಮನ್ ಎ ಇಸ್ಲಾಂ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಇದನ್ನ ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತರ ಶಾಸಕ ಆಸಿಫ್ ಸೇಠ್ ಅವರು ಮಾತನಾಡಿ
ಇಂದು ಮಕ್ಕಳು ರೋಬೋಟಿಕ್ ಕಾರ್ ಸೇರಿದಂತೆ ವಿವಿಧ ಬಗೆಯ ವಿಜ್ಞಾನ ವಸ್ತುಗಳನ್ನ ಪ್ರದರ್ಶಿಸಿದ್ದಾರೆ. 25 ವಿದ್ಯಾರ್ಥಿಗಳಿಗೆ ಕಲಿಯುತ್ತಿದ್ದ ಸಂಸ್ಥೆಯಲ್ಲಿ ಇಂದು ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಯಶಸ್ಸಿಗೆ ಕಾರಣ ಪಾಲಕರು ಹಾಗೂ ಶಿಕ್ಷಕ ವರ್ಗದವರ ಪ್ರಾಮಾಣಿಕ ಪ್ರಯತ್ನ ಎಂದರು. ಬೈಟ್

ಯುವ ಮುಖಂಡ ಅಮಾನ್ ಸೇಠ್ ಅವರು ಈ ಭವ್ಯ ವಸ್ತು ಪ್ರದರ್ಶನವನ್ನ ಕಂಡು ಹರ್ಷ ವ್ಯಕ್ತಪಡಿಸಿದ್ದರು. ಇಷ್ಟೊಂದು ದೊಡ್ಡ ಮಟ್ಟದಲ್ಲಿ ಪ್ರದರ್ಶನವನ್ನ ಆಯೋಜಿಸಲು ಮಕ್ಕಳು ಹಾಗೂ ಪಾಲಕರು ಶಿಕ್ಷಕರು ತೆಗೆದುಕೊಂಡ ಶ್ರಮವನ್ನ ಪ್ರಶಂಶಿಸಿದರು. ಬೈಟ್

ಇನ್ನು ಅಂಜುಮನ್ ಇಂಗ್ಲಿಷ್ ಮೀಡಿಯಂ ಶಾಲೆಯ ಪ್ರಾಂಶುಪಾಲರಾದ ಸಮೀರ್ ಅವರು ಇನ್ ನ್ಯೂಸ್ ಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು. ಇದು ಕೇವಲ ವಿಜ್ಞಾನ ವಸ್ತು ಪ್ರದರ್ಶನವಾಗಿರದೆ ಫಿಸಿಕ್ಸ್, ಕೆಮೆಸ್ಟ್ರಿ, ಆರ್ಟ್ಸ್, ಇಂಗ್ಲಿಷ್ ಇನ್ನುಳಿದ ವಿಷಯಗಳನ್ನು ತಿಳಿಸುವ ಪ್ರದರ್ಶನವಾಗಿದ್ದು, ಸುಮಾರು 150 ವಿದ್ಯಾರ್ಥಿಗಳಿಂದ 200 ಕ್ಕೂ ಹೆಚ್ಚು ವಸ್ತುಗಳನ್ನ ಪ್ರದರ್ಶಿಸಲಾಗಿದೆ ಎಂದರು. ಬೈಟ್

ಸಂಸ್ಥೆಯ ಉಪಾಧ್ಯಕ್ಷರಾದ
ಜವುದ್ದಿನ್ ಹಾಫಿಜ್, ಕಾರ್ಯದರ್ಶಿ ಸಮೀವುಲ್ಲಾ ಮಾಡಿವಾಲೆ ಶಿಕ್ಷಕರು ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಪಾಲಕರು ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ದರು.

Tags:

error: Content is protected !!