Belagavi

ಬಾಗಲಕೋಟೆಯ ಮುಮರಡಿ ಕೊಪ್ಪದಲ್ಲಿ ಖದೀಮರ ಅಟ್ಟಹಾಸ; ದರ್ಗಾ ಮತ್ತು ಮನೆಗಳ ಬೀಗ ಮುರಿದು ಕಳ್ಳತನ…!

Share

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಮುಮರಡಿ ಕೊಪ್ಪ ಗ್ರಾಮದಲ್ಲಿ ತಡರಾತ್ರಿ ಖದೀಮರು ಅಟ್ಟಹಾಸ ಮೆರೆದಿದ್ದಾರೆ. ಗ್ರಾಮದ ದರ್ಗಾ ಹಾಗೂ ಮನೆಗಳ ಬೀಗ ಮುರಿದು ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಮುಮರಡಿ ಗ್ರಾಮದ ಪ್ರಸಿದ್ಧ ದರ್ಗಾದಲ್ಲಿದ್ದ ಕಾಣಿಕೆ ಪೆಟ್ಟಿಗೆಯ ಬೀಗ ಮುರಿದಿರುವ ಕಳ್ಳರು, ಪೆಟ್ಟಿಗೆಯನ್ನು ಹೊತ್ತೊಯ್ದಿದ್ದಾರೆ. ದರ್ಗಾ ಮಾತ್ರವಲ್ಲದೆ, ಗ್ರಾಮದ ಹಲವು ಬೀಗ ಹಾಕಿದ ಮನೆಗಳನ್ನೂ ಗುರಿಯಾಗಿಸಿಕೊಂಡಿದ್ದ ಖದೀಮರು, ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಗ್ರಾಮದ ನಿವಾಸಿ ಯರಗೊಪ್ಪ ಎಂಬುವವರ ಮನೆಯಲ್ಲಿ ಅಕ್ರಮವಾಗಿ ನುಗ್ಗಿದ ಕಳ್ಳರು, ಸುಮಾರು 6 ಗ್ರಾಂ ತೂಕದ ಚಿನ್ನದ ಸರವನ್ನು ದೋಚಿ ಪರಾರಿಯಾಗಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ವಿಷಯ ತಿಳಿಯುತ್ತಿದ್ದಂತೆಯೇ ಬಾದಾಮಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರ ಸುಳಿವು ಪತ್ತೆಹಚ್ಚಲು ಶ್ವಾನದಳ ಮೂಲಕ ತನಿಖೆ ಚುರುಕುಗೊಳಿಸಲಾಗಿದೆ. ಈ ಕುರಿತು ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!