ಬೆಳಗಾವಿಯ ಬಸವಣ ಕುಡಚಿಯ ಶ್ರೀ ರೇಣುಕಾ ಯಲ್ಲಮ್ಮನ ಭಕ್ತರು ಮುತ್ತೈದೆ ಹುಣ್ಣಿಮೆಯ ಜಾತ್ರೆಗೆ ಸವದತ್ತಿ ಗುಡ್ಡದ ಕಡೆಗೆ ರವಾನೆಯಾದರು.

ಬೆಳಗಾವಿಯ ಬಸವಣ ಕುಡಚಿ ಗ್ರಾಮದಲ್ಲಿ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮನ ಭಕ್ತರು ಅಪಾರ ಸಂಖ್ಯೆಯಲ್ಲಿದ್ದಾರೆ. ಶ್ರೀ ರೇಣುಕಾದೇವಿಯ ಜಾತ್ರಾ ಮಹೋತ್ಸವದಲ್ಲಿ ಮಹತ್ವದ ಜಾತ್ರೆಯಾದ ಮುತ್ತೈದೆ ಹುಣ್ಣಿಮೆಯ ಜಾತ್ರೆಗೆ ಬಸವಣ ಕುಡಚಿಯಿಂದ ಸುಮಾರು 55 ವಾಹನಗಳಲ್ಲಿ 2500 ಭಕ್ತರು ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಪ್ರಯಾಣ ಬೆಳೆಸಿದ್ದಾರೆ. ಉಧೋ ಉಧೋ ಎನ್ನುತ್ತ ಭಂಡಾರ ತೂರತ್ತ ಭಕ್ತರು ತಾಯಿ ಎಲ್ಲಮ್ಮನನ್ನ ಕಾಣಲು ಗುಡ್ದಕ್ಕೆ ತೆರಳುತ್ತಿದ್ದಾರೆ. ಈ ಭಕ್ತರು ಸುಮಾರು ದಿನಗಳ ಕಾಲ ಗುಡ್ದದಲ್ಲಿ ವಾಸ್ತವ್ಯವನ್ನು ಹೂಡಿ, ದೇವಿಯ ಮುತ್ತೈದೆ ಕಾರ್ಯದಲ್ಲಿ ಭಾಗಿಯಾಗಿ, ಹಡ್ಡಲಿಗೆ ತುಂಬಿ ಗ್ರಾಮಕ್ಕೆ ಮರಳಿ ಮತ್ತೇ ಹಡ್ಡಲಿಗೆ ತುಂಬಲಿದ್ದಾರೆ.
