hubbali

ಪಾರ್ಕಿಂಗ್ ವಿಚಾರಕ್ಕೆ ಮುಗ್ಧ ಕುಟುಂಬದ ಮೇಲೆ ಗ್ಯಾಂಗ್ ಕಟ್ಟಿಕೊಂಡು ಹಲ್ಲೆ

Share

ಇವರು ತಾವಾಯ್ತು, ತಮ್ಮ ಮನೆ ಆಯಿತು ಅಂತ ಇದ್ದವರು, ಅಕ್ಷಯ ಪಾರ್ಕ್ ಅಪಾರ್ಟ್ಮೆಂಟ್‌ದಲ್ಲಿ ಇವರದೇ ಪಾರ್ಕಿಂಗ್ ಜಾಗವನ್ನೇ ಅತಿಕ್ರಮಣ ಮಾಡಿಕೊಂಡಿದ್ದಲ್ಲದೆ, ಆ ಕುಟುಂಬದ ಮೇಲೆ ವಿನಾಯಕ ಗಾಡಿವಡ್ಡರ ಎಂಬಾತ ಗ್ಯಾಂಗ್ ಕಟ್ಟಿಕೊಂಡು ಬಂದು ಹಲ್ಲೆ ಮಾಡಿದ್ದು, ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ್ರೂ ಕೂಡ ಇನ್ನೂವರೆಗೂ ಕ್ರಮ ಕೈಗೊಂಡಿಲ್ಲವೆಂದ ನೊಂದ ಕುಟುಂಬ ಆರೋಪ ಮಾಡುತ್ತಿದೆ.

ಹೌದು,,,, ಹೀಗೆ ಕೈ ಕಟ್ಟಿಕೊಂಡು ಕಣ್ಣೀರು ಹಾಕುತ್ತಿರುವ ಈ ಅಜ್ಜಿಯ ಹೆಸರು ಅಕ್ಕಮಹಾದೇವಿ ವಸ್ತ್ರದ ಅಂತ, ಇವರು ನಾಲ್ಕೈದು ವರ್ಷಗಳಕಂದ ಅಕ್ಷಯ ಪಾರ್ಕ್‌ ಅಪಾರ್ಟ್ಮೆಂಟ್‌ದಲ್ಲೆ ಮನೆ ತೆಗೆದುಕೊಂಡಿರುತ್ತಾರೆ, ಇವರಿಗೆ ವಾಹನ ನಿಲ್ಲಿಸಲು ಜಾಗ ಕೂಡ ಇತ್ತು, ಅದಕ್ಕೆ ಶೆಡ್ ಹಾಕಿಕೊಂಡಿದ್ದರು. ಆದ್ರೆ ಬೇರೆ ಅಪಾರ್ಟ್ಮೆಂಟ್‌ದಲ್ಲಿರು ವಿನಾಯಕ ಗಾಡಿವಡ್ಡರ್ ಅವರಿಗೆ ಧಮ್ಕಿ ಹಾಕಿ ಅವರ ಪಾರ್ಕಿಂಗ್ ಜಾಗವನ್ನೇ ಅತಿಕ್ರಮಣ ಮಾಡಿಕೊಂಡಿದ್ದಲ್ಲೆ, ಅಜ್ಜಿ ಮತ್ತು ಅವರ ಮಗನ ಮೇಲೆ ಮನಸೋಇಚ್ಚೆಯಾಗಿ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಈ ಕುರಿತು ಗೋಕುಲ್ ರೋಡ್ ಪೊಲೀಸ್ ದೂರು ನೀಡಿದ್ರೂ ಕೂಡ ಪೊಲೀಸರು ಅವರ ಮೇಲೆ ಆಕ್ಷನ್ ತೆಗೆದುಕೊಳ್ಳುತ್ತಿಲ್ಲವೆಂದು ನೊಂದ ಕುಟುಂಬ ಆರೋಪ ಮಾಡುತ್ತಿದೆ. ಅಜ್ಜಿ ಮತ್ತು ಅವರ ಮಗನ ಮೇಲೆ ವಿನಾಯಕ ಗಾಡಿವಡ್ಡರ, ಆನಂದ ಗಾಡಿವಡ್ಡರ, ಬಸಪ್ಪ ಗಾಡಿವಡ್ಡರ, ಗೋಪಾಲ ಸೇರಿದಂತೆ ಇಬ್ಬರ ಮೇಲೆ ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದ್ರೆ ಪೊಲೀಸರು ಅವರ ಕ್ರಮ ಕೈಗೊಳ್ಳುತ್ತಿಲ್ಲವೆಂದು ನೊಂದ ಕುಟುಂಬ ಆರೋಪ ಮಾಡುತ್ತಿದೆ.

ಇನ್ನು ಅಕ್ಕಮಹಾದೇವಿ ಅಜ್ಜಿಯ ಮನೆಗೆ ಇವರು ನುಗ್ಗಿ ಹಲ್ಲೆ ಮಾಡಲು ಯತ್ನಿಸಿದ್ದಾರೆ, ಅದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಜ್ಜಿಯ ಮಗ ಮಂಜುನಾಥನನ್ನು ಅಕ್ಷಯ ಪಾರ್ಕ್ ಸರ್ಕಲ್‌ ಬಳಿ ಕಟ್ಟಿಗೆಯಿಂದ ಹಿಗ್ಗಾಮುಗ್ಗ ಹಲ್ಲೆ ಮಾಡಿದ್ದಾರಂತೆ, ಅಜ್ಜಿಯ ಕೈ ಮುರಿದಿದ್ದು, ಮುಖ, ಕಾಲಿಗೆ ಗಾಯಗಳಾಗಿವೆ. ಇನ್ನಾದರೂ ಗೋಕುಲ ರೋಡ್ ಠಾಣೆ ಪೊಲೀಸರು ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.

Tags:

error: Content is protected !!