ಬಾಗಲಕೋಟೆ ಜಿಲ್ಲೆಯ ಅಮೀನಗಡ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಅಂತರ್’ಜಿಲ್ಲಾ ಬೈಕ್ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯಿಂದ ಬರೋಬ್ಬರಿ 11,95,000 ರೂಪಾಯಿ ಮೌಲ್ಯದ 21 ಬೈಕ್ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬಿಜಾಸಪೂರ ಗ್ರಾಮದ ನಿವಾಸಿ ಹುಲಗಪ್ಪ ಹನುಮಂತ ಮೋಡೆಕರ್ ಬಂಧಿತ ಆರೋಪಿ. ಈತ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ಬೈಕ್ ಕಳ್ಳತನ ಮಾಡುತ್ತಿದ್ದ ಎನ್ನಲಾಗಿದೆ. ಬಂಧಿತನಿಂದ 6 ಪಲ್ಸರ್, 6 ಹೋಂಡಾ ಶೈನ್, 3 ಹೆಚ್.ಎಫ್ ಡಿಲಕ್ಸ್, 2 ಸ್ಪ್ಲೆಂಡರ್ ಪ್ಲಸ್, 2 ಯುನಿಕಾರ್ನ್, 1 ಗ್ಲಾಮರ್ ಹಾಗೂ 1 ಹೀರೋ ಹೋಂಡಾ ಬೈಕ್ ಸೇರಿದಂತೆ ಒಟ್ಟು 21 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದ್ದು, ಪೊಲೀಸರ ಈ ಸಮಯೋಚಿತ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

