Bagalkote

ಇಳಕಲ್ ಬಸ್’ನಲ್ಲಿ ಮಹಿಳೆಯ ಮಾಂಗಲ್ಯ ಸರ ಕಳ್ಳತನ.

Share

ಇಳಕಲ್ ಬಸ್ ನಿಲ್ದಾಣದಲ್ಲಿ ಬಸ್ ಹತ್ತುತ್ತಿದ್ದ ಮಹಿಳೆಯೊಬ್ಬರ ಬ್ಯಾಗಿನಿಂದ 40 ಗ್ರಾಂ ಚಿನ್ನದ ಮಾಂಗಲ್ಯ ಸರ ಕಳವು ಮಾಡಿರುವ ಘಟನೆ ನಡೆದಿದೆ.

ಬಾಗಲಕೋಟೆ ತಾಲ್ಲೂಕಿನ ಮಲ್ಲಾಪುರ ಗ್ರಾಮದ ಬಸಮ್ಮ ರಾಜನಾಳ ಎಂಬುವರು ಗಜೇಂದ್ರಗಡಕ್ಕೆ ತೆರಳಲು ಇಳಕಲ್ ಬಸ್ ನಿಲ್ದಾಣದಲ್ಲಿ ಸಿಂದಗಿದಿಂದ ಬ್ಯಾಡಗಿ ಬಸ್ ಹತ್ತುತ್ತಿದ್ದರು. ಇದೇ ವೇಳೆ, ಚಾಣಾಕ್ಷತನದಿಂದ ಖದೀಮರು ಬ್ಯಾಗ್ ಜಿಪ್ ತೆರೆದು ಒಳಗಿದ್ದ 40 ಗ್ರಾಂ ಚಿನ್ನದ ಮಾಂಗಲ್ಯ ಸರ, 1,500 ನಗದು ಹಾಗೂ ಆಧಾರ್ ಕಾರ್ಡ್ ಅನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಕಳ್ಳತನವಾದ ಮಾಂಗಲ್ಯ ಸರದ ಮೌಲ್ಯ ಲಕ್ಷಾಂತರ ರೂಪಾಯಿಗಳಷ್ಟಿದೆ ಎಂದು ಮಹಿಳೆ ತಿಳಿಸಿದ್ದಾಳೆ.

ಬಸ್ ಹತ್ತಿದ ನಂತರ ಬ್ಯಾಗ್’ನ ಜಿಪ್ ಓಪನ್ ಆಗಿರುವುದನ್ನು ಮಹಿಳೆಯ ಸಂಬಂಧಿಕರು ಗಮನಿಸಿ, ಬ್ಯಾಗ್ ಒಳಗೆ ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಬಸ್ ಚಾಲಕ ಬಸ್ಸನ್ನು ಇಳಕಲ್ ನಗರ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ.

ಪೊಲೀಸರು ಬಸ್’ನಲ್ಲಿದ್ದ ಎಲ್ಲ ಪ್ರಯಾಣಿಕರು ಮತ್ತು ಅವರ ಬ್ಯಾಗ್’ಗಳನ್ನು ಪರಿಶೀಲಿಸಿದರೂ ಚಿನ್ನ ಪತ್ತೆಯಾಗಿಲ್ಲ. ಈ ಬಗ್ಗೆ ಇಳಕಲ್ಲ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!