Dharwad

ಧಾರವಾಡ ಅಳ್ನಾವರರಸ್ತೆಯ ಮುಗದ ಬಳಿ ಭೀಕರ ಅಪಘಾತ…

Share

ಮ್ಯಾಂಗನೀಸ್ ಹೊತ್ತೊಯ್ಯುತ್ತಿದ್ದ ಟಿಪ್ಪರ್‌ಗೆ ಕ್ಯಾಂಟ‌ರ್ ವಾಹನವೊಂದು ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿರುವ ಘಟನೆ ಧಾರವಾಡ-ಅಳ್ಳಾವರ ರಸ್ತೆಯಲ್ಲಿರುವ ಮುಗದ ಗ್ರಾಮದ ಬಳಿ ಸಂಭವಿಸಿದೆ.

ವೈ- ಧಾರವಾಡ ತಾಲೂಕಿನ ಮುಗದ ಗ್ರಾಮದ ಹೊರವಲಯದ ಅಳ್ನಾವರ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಮ್ಯಾಂಗನೀಸ್ ಹೊತ್ತೊಯ್ಯುತ್ತಿದ್ದ ಟಿಪ್ಪ‌ರ್ ಹಾಗೂ ಕ್ಯಾಂಟ‌ರ್ ವಾಹನ ಮುಖಾಮುಖಿ ಡಿಕ್ಕಿಯಾಗಿವೆ. ಪರಿಣಾಮ ಎರಡೂ ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ರಸ್ತೆಯ ಮೇಲೆ ಮ್ಯಾಂಗನೀಸ್ ಹರಡಿದ್ದು, ಎರಡೂ ವಾಹನಗಳು ರಸ್ತೆಯ ಮೇಲೆಯೇ ಬಿದ್ದಿವೆ. ಈ ಅಪಘಾತದಲ್ಲಿ ಓರ್ವ ಚಾಲಕ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದ್ದು, ಹಲವರಿಗೆ ಗಂಭೀರ ಗಾಯವಾಗಿದೆ ಎಂದು ಹೇಳಲಾಗುತ್ತಿದೆ. ಅಪಘಾತದಿಂದಾಗಿ ಧಾರವಾಡ-ಅಳ್ಳಾವರ ರಸ್ತೆ ಕೆಲಕಾಲ ಬಂದ್‌ ಆಗಿತ್ತು. ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ವಾಹನ ಹಾಗೂ ಮ್ಯಾಂಗನೀಸ್ ತೆರವುಗೊಳಿಸುವ ಕೆಲಸ ಮಾಡಿ, ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿದ್ದಾರೆ.

Tags:

error: Content is protected !!