ಖಾನಾಪೂರ ತಾಲೂಕಿನ ಸಾವರಗಾಳಿ ಯಿಂದ ನಂದಗಡದ ವಾಡಿಮಾಳ ಗವಳಿವಾಡಾ ಪ್ರದೇಶದಲ್ಲಿ ಆನೆಗಳು ಪ್ರವೇಶಿಸಿದ್ದು. ಭತ್ತ ಬೆಳೆಯ ಬಣವಿಗಳನ್ನು ಹಾಳು ಮಾಡುತ್ತಿವೆ ಸುಮಾರು ನಾಲ್ಕುರಿಂದ ಆರು ಆನೆಗಳ ತಂಡ ಇದಾಗಿದ್ದು ಒಂದು ಎರಡು ಆನೆಗಳು ಹಿಂದೆ ಆಗಿ ತಂಡದಿಂದ ಮಾರ್ಪಟ್ಟಿವೆ ಇದರ ಮೊದಲು ನಾವಗಾ ಅರಣ್ಯ ಪ್ರದೇಶದಲ್ಲಿ ಈ ಆನೆಗಳು ಕಾಣಿಸಿದವು ಈಗ ಸಾವರಗಾಳಿ ಮಾರ್ಗ ನಂದಗಡದ ಗವಳಿವಾಡಾ ಪ್ರದೇಶದಲ್ಲಿ ಬಂದಿವೆ ಅಲ್ಲಿನ ಭತ್ತ ಬೆಳೆಯನ್ನು ನಾಶ ಮಾಡುವ ಪರಿ ನಿರ್ಮಾಣವಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳಾದ ಮಾಧುರಿ ದಳವಾಯಿ, ಅರಣ್ಯ ಗಸ್ತು ಪಾಲಕರಾದ ಪ್ರಶಾಂತ್ ಶಂಕರ ತಾರಿಹಾಳ ಗುರು ಕುಂಬಾರ ಸೇರಿದಂತೆ ಇನ್ನಿತರರು ಅರಣ್ಯ ಪ್ರದೇಶದಲ್ಲಿನ ರೈತರಿಗೆ ಜನವಸತಿ ಪ್ರದೇಶಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.


