Dharwad

ಸುಜುಕಿ ಸ್ವಿಫ್ಟ್ ಕಾರಿನ ಎಂಜಿನ ತಾಂತ್ರಿಕ ದೋಷದಿಂದ ಏಕಾಏಕಿ ಬೆಂಕಿ..

Share

ಸುಜುಕಿ ಸ್ವಿಫ್ಟ್ ಕಾರಿನ ಎಂಜಿನ ತಾಂತ್ರಿಕ ದೋಷದಿಂದ ಕಾರ್‌ಗೆ ಏಕಾ ಏಕಿ ಬೆಂಕಿ ಹೊತ್ತಿಕೊಂಡು ಧಗಧಗನೇ ಹೊತ್ತಿ ಉರಿದ ಘಟನೆ ಧಾರವಾಡ ಜನನಿಬಿಡ ಪ್ರದೇಶ ಕೆಸಿಡಿ ಕಾಲೇಜು ತೆರಳುವ ಮಂದಾರ ಹೋಟೆಲ್ ಬಳಿ ನಡೆದಿದ್ದು, ಬಾರಿ ಅನಾಹುತವೊಂದು ತಪ್ಪಿದೆ.‌

ವೈ- ಹು-ಧಾ ಮುಖ್ಯ ರಸ್ತೆಯ ನಗರದ ಕೋರ್ಟ ವೃತದಿಂದ ಕರ್ನಾಟಕ್ ಕಾಲೇಜು ರಸ್ತೆ ಮಾರ್ಗದ ಮಂದಾರ ಹೋಟೆಲ್ ಸಮೀಪ ಈ ದುರ್ಘಟನೆ ನಡೆದಿದೆ. ಧಾರವಾಡದಿಂದ ಅಳ್ಳಾವರಕ್ಕೆ ಹೊರಟಿದ್ದ GA-06 D-3919 ನಂಬರ್‌ನ ಶಿಫ್ಟ್ ಕಾರಿನ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ಆ ಕಾರು ನಡು ರಸ್ತೆಯಲ್ಲೇ ಧಗ ಧಗನೇ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಿಜಾಮುದ್ದೀನ್ ಎಂಬುವವರಿಗೆ ಸೇರಿದ ಕಾರು ಹೊತ್ತಿ ಉರಿದಿದೆ. ನಿಜಾಮುದ್ದೀನ್ ಹಾಗೂ ಅವರ ಇನ್ನೊಬ್ಬ ಸ್ನೇಹಿತರು ಕಾರು ತೆಗೆದುಕೊಂಡು ಅಳ್ಳಾವರದಿಂದ ಧಾರವಾಡಕ್ಕೆ ಬಂದಿದ್ದರು. ಧಾರವಾಡದಲ್ಲಿ ಕೆಲಸ ಮುಗಿಸಿಕೊಂಡು ವಾಪಸ್ ಧಾರವಾಡದ ಕಡೆಗೆ ಹೊರಟಿದ್ದ ಸಂದರ್ಭದಲ್ಲಿ ಧಾರವಾಡದ ಮಂದಾರ ಹೋಟೆಲ್ ಬಳಿ ಕಾರಿನಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ಕೂಡಲೇ ನಿಜಾಮುದ್ದೀನ್‌ ಅವರು ಕೆಳಗಿಳಿದು ಕಾರಿನ ಬಾನೆಟ್ ಓಪನ್ ಮಾಡಿದಾಗ ಕಾರಿನ ಎಂಜಿನ್‌ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಅವರು ತಮ್ಮ ಸ್ನೇಹಿತನನ್ನೂ ಕೆಳಗಿಳಿಸಿದ್ದರಿಂದ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೂ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.‌ ಧಾರವಾಡ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Tags:

error: Content is protected !!