M K HUBLI

ಮಲಪ್ರಭಾ ಸಕ್ಕರೆ ಕಾರ್ಖಾನೆ ರಾಣಿ ಶುಗರ್ಸ್ ಕ್ರಷಿಂಗ್ ಒಂದು ಲಕ್ಷ ಕ್ವಿಂಟಲ್ ಸಕ್ಕರೆ ಉತ್ಪಾದನೆ

Share

ಕಿತ್ತೂರು ತಾಲೂಕಿನ ಎಂ. ಕೆ. ಹುಬ್ಬಳ್ಳಿ ಪಟ್ಟಣದಲ್ಲಿರುವ ಮಲಪ್ರಭಾ ಸಕ್ಕರೆ ಕಾರ್ಖಾನೆಯು ಈ ಬಾರಿ ಸಕ್ಕರೆ ಉತ್ಪಾದನೆಯಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಕಳೆದ ನವೆಂಬರ್ 17ರಂದು ಕ್ರಷಿಂಗ್ ಹಂಗಾಮು ಆರಂಭವಾಗಿದ್ದು, ಕೇವಲ ಒಂದು ತಿಂಗಳ ಅವಧಿಯಲ್ಲಿ ಬರೊಬ್ಬರಿ ಒಂದು ಲಕ್ಷ ಕ್ವಿಂಟಲ್ ಸಕ್ಕರೆ ಉತ್ಪಾದನೆಯಾಗುವ ಮೂಲಕ ಹೊಸ ದಾಖಲೆ ಬರೆದಿದೆ. ಕಾರ್ಖಾನೆಯ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವಿನ ಸೌಹಾರ್ದಯುತ ವಾತಾವರಣ ಮತ್ತು ರೈತರ ಸಹಕಾರದಿಂದ ಈ ಪ್ರಗತಿ ಸಾಧ್ಯವಾಗಿದೆ. ಈ ಮೈಲಿಗಲ್ಲನ್ನು ಸಂಭ್ರಮಿಸಲು ಆಡಳಿತ ಮಂಡಳಿ ಹಾಗೂ ಕಾರ್ಮಿಕರು ಇಂದು ಕಾರ್ಖಾನೆಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಕಾರ್ಖಾನೆಯ ಎಂ.ಡಿ. ಮೋಹನ ಹಿರೇಮಠ ಮಾತನಾಡಿ ಮಲಪ್ರಭಾ ಸಕ್ಕರೆ ಕಾರ್ಖಾನೆ ಈ ವರ್ಷ ಒಂದು ಲಕ್ಷ ಕ್ವಿಂಟಲ್ ಸಕ್ಕರೆ ಉತ್ಪಾದನೆಯಾಗಿದ್ದು ಇಲ್ಲಿವರೆಗೆ ಇನ್ನು ಕೂಡ ಕಾರ್ಖಾನೆಯೂ ಫೆಬ್ರುವರಿ ವರೆಗೂ ಕಾರ್ಖಾನೆ ಚಾಲನೆ ಇರುತ್ತದೆ ಇದರಿಂದಾಗಿ ಈ ವರ್ಷ ನಮ್ಮ ಭರವಶಕ್ಕಿಂತ ಹೆಚ್ಚು ಸಕ್ಕರೆ ಉತ್ಪಾದನೆ ಆಗಬಹುದು ಹಾಗೂ ಈ ಬಾರಿ ರೈತರು ಮಲಪ್ರಭಾ ಸಕ್ಕರೆ ಕಾರ್ಖಾನೆಗೆ ಹೆಚ್ಚು ಕಬ್ಬನ್ನು ತರುವುದ್ರಿಂದ ಇನ್ನೂ ಕೂಡ ನಮಗೆ ಹೆಚ್ಚಿನ ಪ್ರೋತ್ಸಾಹ ರೈತರಿಂದ ಸಿಗುತ್ತಿದೆ ಇಲ್ಲಿ ದುಡಿಯುತ್ತಿರುವಂತ ಕಾರ್ಮಿಕರು ಕೂಡ ಹೆಚ್ಚಿನ ಶ್ರಮವಹಿಸಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ ಕಳೆದ ಬಾರಿ ಕಾರ್ಖಾನೆ ಮುಚ್ಚುವ ಸ್ಥಿತಿಗೆ ತಲುಪಿತ್ತು ಆದರೆ ಈ ಬಾರಿ ರೈತರಲ್ಲಿ ಹಾಗೂ ಕಾರ್ಮಿಕರಲ್ಲಿ ಒಂದು ಹೊಸ ಬೆಳವಣಿಗೆ ಬಂದಿದೆ ಎಂದು ತಿಳಿಸಿದ್ದರುಕಾರ್ಖಾನೆ ಆಡಳಿತ ಮಂಡಳಿ ಕಾರ್ಮಿಕರ ವೇತನವನ್ನು ಈ ವರ್ಷ ಪೂರ್ಣ ಪ್ರಮಾಣದಲ್ಲಿ ನೀಡುತ್ತೇವೆ ಹಾಗೂ ರೈತರ ಬಾಕಿ ಬಿಲ್ಲನ್ನು ಕೂಡ ನೀಡಿ ಮೂರು ವರ್ಷದಲ್ಲಿ ಸಕ್ಕರೆ ಕಾರ್ಖಾನೆಯನ್ನು ದೊಡ್ಡಮಟ್ಟದಲ್ಲಿ ಬೆಳವಣಿಗೆ ಮಾಡುತ್ತೇವೆ ಎಂದು ತಿಳಿಸಿದರು ಈ ಬಾರಿ ನಮ್ಮ ಸಕ್ಕರೆ ಕಾರ್ಖಾನೆಯಿಂದ ರಿಕವರಿ ಕೂಡ ಜಾಸ್ತಿ ಪ್ರಮಾಣದಲ್ಲಿ ಬರುತ್ತಿದೆ ಎಂದು ತಿಳಿಸಿದರು. ಮಲಪ್ರಭಾ ಸಕ್ಕರೆ ಕಾರ್ಖಾನೆಗೆ ಈಗಿರುವ ಅಧ್ಯಕ್ಷರಾದ ಚನ್ನರಾಜ ಹಟ್ಟಿಹೊಳಿ ಅವರು ಸಾಕಷ್ಟು ಅನುಭವಳ್ಳುವಂತವರು ಇರುವುದರಿಂದ ಈಗಾಗಲೇ ಎರಡು ಸಕ್ಕರೆ ಕಾರ್ಖಾನೆ ನಡೆಸಿದ ಅನುಭವ ಅವರಿಗೆ ಇದೆ ಹೀಗಾಗಿ ಈ ಬಾರಿಯ ಸಕ್ಕರೆ ಕಾರ್ಖಾನೆ ಉತ್ಪಾದನೆಯಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ ಹಾಗೂ ಯಾವ ರೀತಿಯಲ್ಲಿ ಕಾರ್ಖಾನೆ ಅಭಿವೃದ್ಧಿ ಹಾದಿಯಲ್ಲಿ ತೆಗೆದುಕೊಂಡು ಹೋಗಬೇಕು ಅವರಿಗೆ ಸಂಪೂರ್ಣ ಮಾಹಿತಿ ಇದೆ ಹೀಗಾಗಿ ನಮ್ಮ ಸಕ್ಕರೆ ಕಾರ್ಖಾನೆ ಮೂರ್ನಾಲ್ಕು ವರ್ಷದಲ್ಲಿ ಉತ್ತಮ ರೀತಿಯಲ್ಲಿ ಸಾಧನೆ ಮಾಡಲಿದೆ ಎಂದು ತಿಳಿಸಿದರು

ಈ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾನಾಸಾಹೇಬ್ ಪಾಟೀಲ್ ಹಾಗೂ ಸಕ್ಕರೆ ಕಾರ್ಖಾನೆಯ ಎಂ ಡಿ ಮೋಹನ ಹಿರೇಮಠ ಮತ್ತು ಸಕ್ಕರೆ ಕಾರ್ಖಾನೆಯ ಸದಸ್ಯರು ಹಾಗೂ ಕಾರ್ಖಾನೆಯ ಎಲ್ಲ ಕಾರ್ಮಿಕರು ಭಾಗವಹಿಸಿದ್ದರು.

Tags:

error: Content is protected !!