ವೈದ್ಯೋ ನಾರಾಯಣೋ ಹರಿ ಅಂತೀವಿ ಆದರೆ ಜೀವ ಉಳಿಸಬೇಕಿದ್ದ ವೈದ್ಯನೇ ಚಿನ್ನ ಮತ್ತು ಹಣಕ್ಕಾಗಿ ತನ್ನ ಹೆಂಡತಿಯನ್ನೆ ಕತ್ತು ಹಿಚುಕಿ ಕೊಲೆ ಮಾಡಿರುವ ಆರೋಪ ಒಂದು ಕೇಳಿ ಬಂದಿದೆ. ಮಗಳ ಸಾವಿನ ನ್ಯಾಯ ದೊರಕಿಸಬೇಕು ಎಂದು ಕುಟುಂಬಸ್ಥರು ಒತ್ತಾಯ ಮಾಡಿದ್ದಾರೆ. ಈಗ ಪೊಲೀಸರು ವೈದ್ಯನ ತಮ್ಮನನ್ನು ಬಂಧಿಸಿ ಡ್ರೀಲ್ ನಡೆಸುತ್ತಿದ್ದಾರೆ. ಈ ಕುರಿತು ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್…

ವಿಜಯಪುರ ನಗರದ ಗೌರಿ ಶಂಕರ ಬಡವಾಣೆಯಲ್ಲಿ ಸೋಮವಾರ ಸವಿತಾ ಎಂಬ ಮಹಿಳೆಯನ್ನು ಆಕೆಯ ಪತಿ ಹಾಗೂ ಕುಟುಂಬಸ್ಥರು ಸೇರಿ ಕೊಲೆ ಮಾಡಿದ ಆರೋಪ ಕೇಳಿ ಬಂದಿದೆ. ಬಿಎಎಮ್ ಎಸ್ ಡಾಕ್ಟರ್ ಆಗಿದ್ದ ರಾಜಶೇಖರ ಶಿರಶ್ಯಾಡ ತನ್ನ ಪತ್ನಿ ಸವಿತಾ ಶಿರಶ್ಯಾಡ ಳನ್ನು ಕೊಲೆ ಮಾಡಿ ಪರಾರಿಯಾಗಿದ್ದು ವಿವಾಹಿತ ಮಹಿಳೆಗೆ ವರದಕ್ಷಿಣೆ ಕಿರುಕುಳ ಕೊಡಲಾಗುತ್ತಿತ್ತು ಎಂದು ಮೃತ ಮಹಿಳೆಯ ಕುಟುಂಬಸ್ಥರು ಆರೊಪಿಸಿದ್ದಾರೆ. ಇನ್ನೂ ವೈದ್ಯನ ಕುಟುಂಬ ನಾಪತ್ತೆಯಾಗಿದೆ. ಕಳೆದ ವರ್ಷಗಳ ಹಿಂದೆ ಹತ್ತು ತೊಲೆ ಬಂಗಾರವನ್ನು ವರದಕ್ಷಿಣೆ ಆಗಿ ಹಾಕಿದ್ದು ಮಹಿಳೆಯ ಮನೆಯವರೇ ಸ್ವಂತ ವೆಚ್ಚದಲ್ಲಿ ಮದುವೆ ಮಾಡಿಕೊಟ್ಟಿದ್ದು ಆಗಾಗ ಅಳಿತನಕ್ಕೆ ಮತ್ತು ಹಬ್ಬ ಹರಿದಿನಕ್ಕೂ ಪತಿ ರಾಜಶೇಖರ ಚಿನ್ನ ಮತ್ತು ಹಣ ತರುವಂತೆ ಮೃತ ಸವಿತಾಳಿಗೆ ಒತ್ತಾಯಿಸುತ್ತಿದ್ದ ಎಂದು ಮಹಿಳೆಯ ಸಂಭಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದು ಸದ್ಯ ವಿಜಯಪುರ ನಗರದ ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇನ್ನೂ ಮೃತ ಸವಿತಾ ಹಾಗೂ ರಾಜಶೇಖರ ಶಿರಶ್ಯಾಡ ಇವರಿಗೆ ಎರಡು ಗಂಡು ಮಕ್ಕಳಿದ್ದು ಧನದಾಹಿ ಆಗಿದ್ದ ವೈದ್ಯ ರಾಜಶೇಖರ ಸವಿತಾ ಶಿರಶ್ಯಾಡಳ ಜೊತೆಗೆ ಆಗಾಗ ವಿನಾಕಾರಣ ಜಗಳ ಮಾಡುತ್ತಿದ್ದು ಬೇಕಿದ್ದರೆ ತವರು ಮನೆಗೆ ಹೋಗು ಎನ್ನುತ್ತಿದ್ದರೂ ಮರ್ಯಾದೆಗೆ ಹೆದರಿ ಅಲ್ಲಿಯೇ ಇರುವಂತೆ ತಿಳಿಸಿದ್ದೆವು. ಆದರೆ ಸದ್ಯ ಅವಳ ಶವ ನೋಡುವ ಪರಿಸ್ಥಿತಿ ಎದುರಾಗಿದ್ದು ಸವಿತಾ ಶಿರಶ್ಯಾಡಳ ಸಾವಿಗೆ ಕಾರಣರಾದವರನ್ನು ಕೂಡಲೇ ಬಂಧಿಸುವಂತೆ ಗೃಹಿಣಿಯ ಪೋಷಕರು ಆಗ್ರಹಿಸಿದ್ದಾರೆ. ಇದೀಗ ಪೊಲೀಸರು ದೂರು ದಾಖಲಿಸಿಕೊಂಡು ವೈದ್ಯ ರಾಜಶೇಖರ ನ ತಮ್ಮ ಶರಣಕುಮಾರ ನನ್ನು ವಶಕ್ಕೆ ಪಡೆದು ಡ್ತೀಲ್ ನಡೆಸುತ್ತಿದ್ದಾರೆ. ಸದ್ಯ ಬಾಕಿ ಎಲ್ಲಾ ಆರೋಪಿತರು ನಾಪತ್ತೆಯಾಗಿದ್ದಾರೆ.
ಒಟ್ಟಾರೆ ಆಗಿ ಮದುವೆ ಆದಾಗಿನಿಂದ ಕೆಲಸದ ಆಳಿನಂತೆ ಸವಿತಾಳನ್ನು ದುಡಿಸಿಕೊಂಡ ವೈದ್ಯ ರಾಜಶೇಖರ ಮನೆಯವರು ಸದ್ಯ ಆಕೆಯ ಕೊಲೆ ಮಾಡಿದ್ದು ಮೃತದೇಹದ ಮೇಲೆ ಗಾಯದ ಗುರುತುಗಳಿದ್ದು ಸವಿತಾಳಿಗೆ ಒಮ್ಮೆ ಹೃದಯಾಘಾತವಾಗಿದೆ ಎಂದು ಹೇಳಿದರೆ ಮತ್ತೊಮ್ಮೆ ಮೆಟ್ಟಿಲಿನಿಂದ ಜಾರಿ ಬಿದ್ದಿದ್ದಾಳೆ ಎಂದು ಸುಳ್ಳು ಹೇಳಿದ್ದು ಸದ್ಯ ಪೋಲಿಸರು ಬಂಧಿಸುತ್ತಾರೆ ಎಂದು ನಾಪತ್ತೆಯಾಗಿದ್ದು ಮಹಿಳೆಯ ಸಾವಿಗೆ ನ್ಯಾಯ ಒದಗಿಸುವಂತೆ ಶವಾಗಾರದ ಎದುರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದು ಕೂಡಾ ಆಗಿದೆ. ಪೋಲಿಸರ ತನಿಖೆಯಿಂದಷ್ಟೆ ಘಟನೆಯ ಸತ್ಯಾಸತ್ಯತೆ ಬೆಳಕಿಗೆ ಬರಬೇಕಿದೆ…
